ಹೊರಗಿನ ಆಚರಣೆಗಳಿಗಿಂತ ಒಳಗಿನ ಮನಸ್ಸು ಲಿಂಗದ ಒಡನಾಟವೇ ಮುಖ್ಯ

ಹೊರಗಿನ ಆಚರಣೆಗಳಿಗಿಂತ ಒಳಗಿನ ಮನಸ್ಸು ಲಿಂಗದ ಒಡನಾಟವೇ ಮುಖ್ಯ  The inner connection of the mind with the Linga is more important than external rituals

ಲೋಕದರ್ಶನ ವರದಿ 

              ವಿಜಯಪುರ 27: 77ನೇ ಶತಮಾನದ ಪ್ರಮುಖ ವಚನಕಾರ ಷಣ್ಮುಖ ಶಿವಯೋಗಿಗಳು ಸುಮಾರು 800ಕ್ಕೂ ಹೆಚ್ಚು ವಚನಗಳನ್ನು ‘ಅಖಂಡೇಶ್ವರ’ ಅಂಕಿತದಿಂದ ಬರೆದಿದ್ದು, ಅವು ತಾತ್ವಿಕ ದೃಷ್ಟಿಕೋನದಿಂದ ಹೆಚ್ಚು ವಿಸ್ತೃತವಾಗಿವೆ. ಷಟ್‌ಸ್ಥಲ ಸಿದ್ಧಾಂತ ಮತ್ತು ನಿರಾಲಂಬ ಅನುಭಾವ ಮಾರ್ಗದಲ್ಲಿ ಅತ್ಯಂತ ಆಳವಾಗಿ ವ್ಯಕ್ತವಾದ ಅವರ ವಚನಗಳಲ್ಲಿ ಹೊರಗಿನ ಆಚರಣೆಗಿಂತ ಒಳಗಿನ ಮನಸ್ಸು ಮತ್ತು ಲಿಂಗದ ಒಡನಾಟವೇ ಮುಖ್ಯ ಎಂಬ ತತ್ವ ಹೊಂದಿದೆ ಎಂದು ಸರಕಾರಿ ಪ.ಪೂ.ಕಾಲೇಜ ಅರ್ಜುಣಗಿಯ ಉಪನ್ಯಾಸಕಿ      ಡಾ. ಸವಿತಾ ಝಳಕಿ ಹೇಳಿದರು. 

     ನಗರದ ಡಾ. ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರ ಹಾಗೂ ಚಿಂತನ ಸಾಂಸ್ಕೃತಿಕ ಬಳಗ ಹಮ್ಮಿಕೊಂಡ ಅನುಭಾವಿಗಳು ಹಿ ಮರುಭೆಟ್ಟಿ (19)ರಲ್ಲಿ  ಷಣ್ಮುಖ ಶಿವಯೋಗಿಗಳ ಕುರಿತು ಉಪನ್ಯಾಸ ನೀಡಿದ ಅವರು “ಸಮಾಜ ದರ್ಶನ, ಸಾಹಿತ್ಯ ದರ್ಶನ ಕ್ರಿಯೆಯಲ್ಲಿ ತಲ್ಲೀನರಾದ ಷಣ್ಮುಖರನ್ನು ಅನುಭಾವ ಭಕ್ತಿಯನ್ನು ಆನಂದ ಭಕ್ತಿಯ ಮಟ್ಟಕ್ಕೇರಿಸಲು ಗುರು ಅಖಂಡೇಶ್ವರರು ಸಲಹೆ ನೀಡಿದರು.

             ಕಾಯಕ ಜೀವನ ಪುರಾಣಕಷ್ಟೇ ಸೀಮಿತವಾಗದೇ ಸಾಮಾನ್ಯ ಜನರ ಬಳಿಗೆ ಬಂದು ಅವರ ಮಧ್ಯದಲ್ಲಿದ್ದುಕೊಂಡು ಅವರನ್ನು ಮೇಲೆತ್ತಬೇಕೆಂಬ” ಗುರುಗಳ ತತ್ವಕ್ಕೆ ಬದ್ಧರಾದರು. ಮಠದಲ್ಲಿ ಜ್ಞಾನದಾಸೋಹ, ಅನ್ನದಾಸೋಹವನ್ನು ಆರಂಭಿಸಿದ ಷಣ್ಮುಖರು ಜಾತಿಭೇದವಿಲ್ಲದೇ ಎಲ್ಲ ಮಕ್ಕಳಿಗೆ ಶಿಕ್ಷಣ ನೀಡಿದರು. ದಲಿತ ಕೇರಿಗೆ ಹೋಗಿ ಲಿಂಗದೀಕ್ಷೆ ನೀಡಿ ಅವರನ್ನು ಮುಖ್ಯವಾಹಿನಿಗೆ ತಂದರು ಎಂದರು. ಬಿ.ಆರ್‌.ಬನಸೋಡೆ ಪ್ರಾರ್ಥಿಸಿದರು. ಡಾ. ಎಂ.ಎಸ್‌.ಮದಭಾವಿ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಭಾಸ ಕನ್ನೂರ ನಿರೂಪಿಸಿ, ವಂದಿಸಿದರು. 

ಈ ಕಾರ್ಯಕ್ರಮದಲ್ಲಿ ಡಾ. ಆರ್‌.ಕೆ.ಕುಲಕರ್ಣಿ, ಎಸ್‌.ಎನ್‌.ಶಿವಣಗಿ, ಎಂ.ಎಸ್‌.ಝಳಕಿ, ಈರಣ್ಣ ತೊಂಡಿಕಟ್ಟಿ, ಡಾ. ಎಂ.ಎಸ್‌.ಮಾಗಣಗೇರಿ, ಗಂಗಾಧರ ಸಾಲಕ್ಕಿ, ಎನ್‌.ಆರ್‌.ಕುಲಕರ್ಣಿ, ವಿ.ಎಸ್‌.ಖಾಡೆ, ಡಾ. ಸೋಮಶೇಖರ ವಾಲಿ, ಎಸ್‌.ವಾಯ್‌.ಗದಗ, ಮೇಘಾ ಗಾಡಿವಡ್ಡರ, ಮ.ಗು.ಯಾದವಾಡ, ಬಿ.ಟಿ.ಈಶ್ವರಗೊಂಡ, ಡಾ. ವಿ.ಎಂ.ಬಾಗಾಯತ, ಬನಶ್ರೀ ಹತ್ತಿ, ಪ್ರಿಯಾಂಕಾ ಪಾತ್ರೋಟ, ಎಸ್‌.ಜಿ.ನಾಡಗೌಡ, ಜಗದೀಶ ಗಲಗಲಿ, ಆರ್‌.ಜಿ.ಬ್ಯಾಕೋಡ, ಕೆ.ಎಸ್‌.ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.