ಬೆಳಗಾವಿ: ಚನ್ನಮ್ಮಾ ಚರಿತ್ರೆಗೆ ಸಿಗಬೇಕಾದ ಪ್ರಾಮುಖ್ಯತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲ

ಲೋಕದರ್ಶನ ವರದಿ

ಬೆಳಗಾವಿ 27:  ಭಾರತೀಯ ಇತಿಹಾಸದಲ್ಲಿ ರಾಣಿ ಕಿತ್ತೂರು ಚನ್ನಮ್ಮಾಜಿಯ  ಚರಿತ್ರೆಗೆ ಸಿಗಬೇಕಾದ ಪ್ರಾಮುಖ್ಯತೆಯು ನಿರೀಕ್ಷಿತ  ಮಟ್ಟದಲ್ಲಿ ಇಲ್ಲ. ಆದ್ದರಿಂದ ಸಕರ್ಾರ ಇತಿಹಾಸದ ಅಕಾಡಮಿ ವಿ.ವಿ ಅಧ್ಯಯನ ಕೇಂದ್ರಗಳೂ ಸೇರಿದಂತೆ ವಿವಿಧ ಸ್ತರಗಳಲ್ಲಿ ಈ ಬಗ್ಗೆ ಗಂಭೀರತೆಯ ಪ್ರಯತ್ನಶೀಲತೆಗಾಗಿ  ತಾವು ಮುಂದಾಳತ್ವವನ್ನು ವಹಿಸಬೇಕೆಂದು ವಿವಿಧ ಸಂಘಟನೆಗಳ ಮುಂಖಂಡರು ಸಾಹಿತಿ ಬರಗೂರು ರಾಮಚಂದ್ರಪ್ಪನವರಿಗೆ ಮನವಿ ಸಲ್ಲಿಸಿದರು.

ಈ ಕುರಿತಂತೆ ಮನವಿ ಸಲ್ಲಿಸಿ ಮಾತನಾಡಿದ ರಾಣಿ ಚನ್ನಮ್ಮ ವಿ.ವಿ ಅಭಿವೃದ್ಧಿ ಪರ ಹೋರಾಟ ಸಮಿತಿಯ ಸಂಚಾಲಕ ಮಂಜುನಾಥ ವಸ್ತ್ರದ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವರು ಸೇರಿದಂತೆ ಪ್ರಜ್ಞಾವಂತ ವಲಯವೂ ಈ ಬಗ್ಗೆ ತಮ್ಮಯ ಕಳಕಳಿಯನ್ನು ವ್ಯಕ್ತ ಪಡಿಸಿದ್ದು ಚನ್ನಮ್ಮಾಜಿಯ ಇತಿಹಾಸಕ್ಕೆ ನ್ಯಾಯ ಸಿಗಬೇಕಿದೆ ಎಂದು ಪ್ರತಿ ಪಾದಿಸುತ್ತದೆ. ಹಾಗಾಗಿ ಈ ಬಗ್ಗೆ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿ ಉದ್ದೇಶಿತ  ಗುರಿ ತಲುಪುವಲ್ಲಿ ತಮ್ಮಂಥವರ ಮುಂದಾಳತ್ತದೆ.ಅವಶ್ಯಕತೆ ಇದೆ. 

ನೆಲ, ಜಲ, ಭಾಷೆ, ವಿಷಯಗಳಲ್ಲಿ ಜನಪರ ಚಿಂತನೆಗಳ ಮೂಲಕ ಸದಾಕ್ರಿಯಾಶೀಲರಾಗಿರುವ ತಾವೂ ಇದೀಗ ಚನ್ನಮ್ಮಾಜಿಯ ಇತಿಹಾಸಕ್ಕೆ ಸಿಗಬೇಕಾದ ವಿಷಯದ ಬಗ್ಗೆ ಸ್ಪಂದಿಸಬೇಕೆಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಪ್ರೊ ಬರಗೂರು ರಾಮಚಂ್ರಪ್ಪ ಈ ಬಗ್ಗೆ ಆರ್.ಸಿ.ಯು ದಲ್ಲಿಯ ರಾಣಿ ಚನ್ನಮ್ಮಾಜಿಯ ಅಧ್ಯಯನ ಕೇಂದ್ರವನ್ನು ಪ್ರಾರಂಭಿಸಲಾಗಿದು ಜನ ಸಮೂಹದ ಭಾವನೆಗಳಿಗೆ ಸ್ಪಂದಿಸುವಲ್ಲಿ ಸಹಕರಿಸುವಂತೆ ಅಲ್ಲಿನ ಕುಲಪತಿಗಳಿಗೆ ತಾವೂ ತಿಳಿಸುವುದಾಗಿ ಹೇಳಿದರು.

ಇದು ಮೊದಲ ಹಂತದ ಪ್ರಕ್ರಿಯೆಯಾಗಿದ್ದು, ನಂತರದ ದಿನಗಳಲ್ಲಿ ಈ ಬಗ್ಗೆ ಇನ್ನೂ ಹೆಚ್ಚಿನ ಚಿಂತನೆ ನಡೆಸಲಾಗುವುದು ಎಂದು ಅವರು ಹೇಳಿದರು. ಹೊಯ್ಸಳ ಸಂಸ್ಥೆಯ ಗೌರವ ಸದಸ್ಯ ಅನ್ವರ ದೇವಡಿ, ಬೆಳಗಾವಿ ತಾಲ್ಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ಜಗದೀಶ ಧಾರವಾಡಕರ, ಉಪನ್ಯಾಸಕರಾದ ಬಸವರಾಜ ಮಠಪತಿ, ಡಿವೆಪ್ಪ ಇಟಗಿ ಉಪಸ್ಥಿತರಿದರು.