ಭರವಸೆಯ ಪಂಚಪಥ ಅಭಿವೃದ್ಧಿಯ ನವಯುಗದ ರಥ"
The impact of the five guarantees is a flood of hope for a secure life for the people.
ಪಂಚ ಗ್ಯಾರಂಟಿ ಪ್ರಭಾವ ಜನತೆಗೆ ಭದ್ರ ಬದುಕಿನ ಭರವಸೆಯ ಪ್ರವಾಹ
ಗದಗ 17 : ಪಂಚ ಗ್ಯಾರಂಟಿ ಯೋಜನೆಗಳ ಸಮಗ್ರ ಅನುಷ್ಠಾನದಿಂದ ರಾಜ್ಯದ ಬಡ, ಮಧ್ಯಮ ವರ್ಗ ಹಾಗೂ ಮಹಿಳೆಯರ ಬದುಕಿನಲ್ಲಿ ಸ್ಪಷ್ಟ ಬದಲಾವಣೆ ತರಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶಯವಾಗಿದೆ. ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದಲೇ ಜನತೆಗೆ ನೀಡಿದ ಭರವಸೆಗಳನ್ನು ಕಾರ್ಯರೂಪಕ್ಕೆ ತರುವ ಸಂಕಲ್ಪದೊಂದಿಗೆ ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಅನ್ನಭಾಗ್ಯ, ಗೃಹಲಕ್ಷಿ-್ಮ, ಗೃಹಜ್ಯೋತಿ, ಶಕ್ತಿ ಮತ್ತು ಯುವನಿಧಿ ಸಮಾಜದ ವಿವಿಧ ವರ್ಗಗಳನ್ನು ಸ್ಪರ್ಶಿಸುವ ಸಮಗ್ರ ಸಾಮಾಜಿಕ ಭದ್ರತಾ ಕವಚವಾಗಿ ರೂಪುಗೊಂಡಿವೆ. ಈ ಯೋಜನೆಗಳ ಮೂಲಕ ಕುಟುಂಬದ ಖರ್ಚು ಕಡಿಮೆ ಮಾಡಿ, ಆರ್ಥಿಕ ನೆಮ್ಮದಿ ನೀಡುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಅನ್ನಭಾಗ್ಯ ಯೋಜನೆಯ ಮೂಲಕ ಬಡ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸಲಾಗುತ್ತಿದೆ. ಗೃಹಲಕ್ಷಿ-್ಮ ಯೋಜನೆ ಮಹಿಳೆಯರಿಗೆ ನೇರ ಆರ್ಥಿಕ ನೆರವು ನೀಡಿ ಕುಟುಂಬದ ಆರ್ಥಿಕ ಸ್ಥಿರತೆಗೆ ಬಲ ನೀಡುತ್ತಿದೆ. ಗೃಹಜ್ಯೋತಿ ಯೋಜನೆ ವಿದ್ಯುತ್ ಬಿಲ್ಲಿನ ಭಾರವನ್ನು ಕಡಿಮೆ ಮಾಡಿದ್ದು, ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಸಾರಿಗೆ ಸೌಲಭ್ಯ ನೀಡಿ ಸಂಚಲನ ಮೂಡಿಸಿದೆ. ಯುವನಿಧಿ ಯೋಜನೆ ನಿರುದ್ಯೋಗಿ ಯುವಕರಿಗೆ ಆರ್ಥಿಕ ನೆರವು ನೀಡುವ ಮೂಲಕ ಉದ್ಯೋಗ ಹುಡುಕುವ ಅವಧಿಯಲ್ಲಿ ಭರವಸೆ ನೀಡುತ್ತಿದೆ.
ಅನ್ನಭಾಗ್ಯ ಯೋಜನೆಯ ಮೂಲ ಉದ್ದೇಶ ಕೇವಲ ಉಚಿತ ಅಥವಾ ಸಹಾಯಧನದ ಧಾನ್ಯ ವಿತರಣೆ ಅಲ್ಲ; ಅದು ಸಾಮಾಜಿಕ ನ್ಯಾಯದ ಸಾಧನವಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳ ಕುಟುಂಬಗಳಿಗೆ ಆಹಾರ ಭದ್ರತೆ ಒದಗಿಸುವ ಮೂಲಕ ಸರ್ಕಾರ ಜೀವನಮಟ್ಟವನ್ನು ಸುಧಾರಿಸುವ ದಿಕ್ಕಿನಲ್ಲಿ ಕೆಲಸ ಮಾಡುತ್ತಿದೆ. ಹಸಿವಿನಿಂದ ಶಿಕ್ಷಣಕ್ಕೆ ಅಡ್ಡಿಯಾಗಬಾರದು, ಪೌಷ್ಟಿಕಾಹಾರ ಕೊರತೆಯಿಂದ ಆರೋಗ್ಯ ಹದಗೆಡಬಾರದು ಎಂಬ ದಿಟ್ಟ ಉದ್ದೇಶ ಈ ಯೋಜನೆಯ ಹಿನ್ನಲೆಯಲ್ಲಿ ಇದೆ.
ಗದಗ ಜಿಲ್ಲೆಯಲ್ಲಿ ಯೋಜನೆ ಯಶಸ್ವಿಯಾಗಿ ಜಾರಿಯಾಗಲು ಜಿಲ್ಲಾಡಳಿತದ ಕಟ್ಟುನಿಟ್ಟಿನ ಮೇಲ್ವಿಚಾರಣೆ, ಪಡಿತರ ವಿತರಕರ ಹೊಣೆಗಾರಿಕೆ ಹಾಗೂ ಸಾರ್ವಜನಿಕರ ಸಹಭಾಗಿತ್ವ ಪ್ರಮುಖ ಕಾರಣಗಳಾಗಿವೆ. ಡಿಜಿಟಲ್ ಪಡಿತರ ಚೀಟಿ, ಬಯೋಮೆಟ್ರಿಕ್ ಪರೀಶೀಲನೆ ಹಾಗೂ ನಿಯಮಿತ ತಪಾಸಣೆಗಳಿಂದ ಪಾರದರ್ಶಕತೆ ಹೆಚ್ಚಿದ್ದು, ಸೋರಿಕೆಗಳಿಗೆ ಕಡಿವಾಣ ಬಿದ್ದಿದೆ.
ಅಂಕಿ ಅಂಶಗಳು ಹೇಳುವುದಕ್ಕಿಂತ ಹೆಚ್ಚಾಗಿ ಅನ್ನಭಾಗ್ಯ ಯೋಜನೆ ಜನಮನದಲ್ಲಿ ವಿಶ್ವಾಸ ಹುಟ್ಟಿಸಿದೆ. ಮನೆಮನೆಗೂ ಅನ್ನದ ಭರವಸೆ ತಲುಪಿಸುವ ಮೂಲಕ ಸರ್ಕಾರ ಹಸಿವಿಲ್ಲದ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ನಿಜವಾದ ಹೆಜ್ಜೆ ಇಟ್ಟಿದೆ. ಗದಗ ಜಿಲ್ಲೆಯ ಸಾಧನೆ ರಾಜ್ಯಕ್ಕೆ ಮಾದರಿಯಾಗಿದ್ದು, ಜನಕೇಂದ್ರಿತ ಆಡಳಿತದ ಸಾರ್ಥಕತೆಯನ್ನು ಸಾಬೀತುಪಡಿಸಿದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಡಿ ಗದಗ ಜಿಲ್ಲೆಯಲ್ಲಿ ವಿವಿಧ ಯೋಜನೆಗಳ ಅನುಷ್ಠಾನ ಬಹುತೇಕ ಶೇಕಡಾ ನೂರು ಸಾಧನೆಯತ್ತ ಸಾಗಿರುವುದು 31-01-2026 ರವರೆಗಿನ ಪ್ರಗತಿ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.
ಜಿಲ್ಲೆಯಲ್ಲಿ ಒಟ್ಟು 2561.823 ಲಕ್ಷ ಫಲಾನುಭವಿಗಳಿಗೆ, 2518.35 ಕೋಟಿ ರೂ. ವೆಚ್ಚ ಮಾಡಲಾಗಿದೆ. ಯೋಜನೆಗಳ ಅನುಷ್ಠಾನದಲ್ಲಿ ಗದಗ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ.
ಗೃಹಲಕ್ಷಿ-್ಮ ಯೋಜನೆಯಡಿ 2.58 ಲಕ್ಷ ಫಲಾನುಭವಿಗಳಿಗೆ ಅನುದಾನ ಮಂಜೂರಾಗಿ, ಶೇಕಡಾ 96.57ರಷ್ಟು ಹಣ ಫಲಾನುಭವಿಗಳ ಖಾತೆಗೆ ಜಮೆಯಾಗಿದ್ದು, 1135.27 ಕೋಟಿ ರೂ. ವೆಚ್ಚವಾಗಿದೆ. ಅನ್ನಭಾಗ್ಯ ಯೋಜನೆಯಡಿ 2.34 ಲಕ್ಷ ಕುಟುಂಬಗಳಿಗೆ ಶೇಕಡಾ 100ರಷ್ಟು ವಿತರಣೆ ಸಾಧನೆಗೊಂಡಿದ್ದು, 216.82 ಕೋಟಿ ರೂ. ಬಿಡುಗಡೆಯಾಗಿದೆ.
ಗೃಹಜ್ಯೋತಿ ಯೋಜನೆಯಡಿ 2.74 ಲಕ್ಷ ಗ್ರಾಹಕರಿಗೆ ಸೌಲಭ್ಯ ದೊರೆತಿದ್ದು, ಶೇಕಡಾ 98.52ರಷ್ಟು ಅನುಷ್ಠಾನ ಸಾಧನೆ ಕಂಡಿದೆ. ಇದಕ್ಕಾಗಿ 287.39 ಕೋಟಿ ರೂ. ವೆಚ್ಚವಾಗಿದೆ. ಯುವನಿಧಿ ಯೋಜನೆಯಡಿ 0.063 ಲಕ್ಷ ಯುವಕರಿಗೆ ಶೇಕಡಾ 100ರಷ್ಟು ನೆರವು ಒದಗಿಸಲಾಗಿದ್ದು, 15.30 ಕೋಟಿ ರೂ. ಬಿಡುಗಡೆಯಾಗಿದೆ.
ಶಕ್ತಿ ಯೋಜನೆಯಡಿ ಅತಿ ಹೆಚ್ಚು ಪ್ರಮಾಣದಲ್ಲಿ 2554.10 ಕೋಟಿ ರೂ. ಅನುದಾನ ಮಂಜೂರಾಗಿ, ಶೇಕಡಾ 100ರಷ್ಟು ಅನುಷ್ಠಾನಗೊಂಡಿದ್ದು, 863.57 ಕೋಟಿ ರೂ. ವೆಚ್ಚವಾಗಿದೆ. ಮಹಿಳೆಯರ ಉಚಿತ ಸಾರಿಗೆ ಸೌಲಭ್ಯ ಯೋಜನೆ ಜಿಲ್ಲೆಯಲ್ಲಿ ವ್ಯಾಪಕ ಸ್ವೀಕಾರ ಕಂಡಿದ್ದು, ಪ್ರತಿದಿನ ಸಾವಿರಾರು ಮಹಿಳೆಯರು ಇದರ ಪ್ರಯೋಜನ ಪಡೆಯುತ್ತಿದ್ದಾರೆ.
ಒಟ್ಟಾರೆ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಗದಗ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಕ್ಕಿದ್ದು, ಕುಟುಂಬಗಳ ಖರ್ಚಿನ ಭಾರ ಕಡಿಮೆಯಾಗಿದೆ. ಸರ್ಕಾರದ ಜನಪರ ನೀತಿಗಳ ಫಲವಾಗಿ ಗ್ಯಾರಂಟಿ ಯೋಜನೆಗಳು ಜನಜೀವನದಲ್ಲಿ ಭರವಸೆಯ ಆಧಾರವಾಗಿ ಪರಿಣಮಿಸುತ್ತಿವೆ.
ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಸರ್ಕಾರದ ಕಾರ್ಯಕ್ರಮಗಳಲ್ಲ, ಅವು ಜನರ ಬದುಕನ್ನು ಭದ್ರಗೊಳಿಸುವ ಸಾಮಾಜಿಕ ಬದ್ಧತೆ. ಪ್ರತಿಯೊಬ್ಬ ಅರ್ಹ ಫಲಾನುಭವಿಗೂ ಯೋಜನೆಯ ಲಾಭ ತಲುಪುವಂತೆ ಗದಗ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಜನರ ನೆಮ್ಮದಿ ಮತ್ತು ಆರ್ಥಿಕ ಸ್ಥಿರತೆಯೇ ನಮ್ಮ ಆಡಳಿತದ ಮುಖ್ಯ ಗುರಿ.
-ಎಚ್ ಕೆ ಪಾಟೀಲ
ಗದಗ ಜಿಲ್ಲಾ ಉಸ್ತುವಾರಿ ಸಚಿವರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 