ಇಳುವರಿಗೆ ಗೊಣ್ಣೆಹುಳುವಿನ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರೀಶೀಲನೆ : ಸಂತೋಷಕುಮಾರ ಕಾಮತ್
The impact of bollworm on yields: Review by agricultural scientists: Santoshkumar Kamath
ಇಳುವರಿಗೆ ಗೊಣ್ಣೆಹುಳುವಿನ ಬಾಧೆ: ಕೃಷಿ ವಿಜ್ಞಾನಿಗಳಿಂದ ಪರೀಶೀಲನೆ : ಸಂತೋಷಕುಮಾರ ಕಾಮತ್
ಮಾಂಜರಿ 05: ಸಮರ್ಕ ಮುಂಗಾರು ಮಳೆ ಸುರಿದು ಜಮೀನುಗಳಿಗೆ ಅನುಕೂಲವಾಗಿದೆ. ಇದರಿಂದ ಉತ್ತಮ ಇಳುವರಿ ನೀರೀಕ್ಷೆಯಲ್ಲಿದ್ದ ರೈತನಿಗೆ ಗೊಣ್ಣೆಹುಳುವಿನ ಬಾಧೆ ಹೊಡೆತ ಕೊಟ್ಟಿದೆ. ಚಿಕ್ಕೋಡಿ ತಾಲೂಕಿನ ಬಹುತೇಕ ಕಡೆಗಳಲ್ಲಿ ವಿವಿಧ ಬೆಳೆಗಳಿಗೆ ಬಾಧೆ ಅಂಟಿಕೊಂಡು ರೈತ ತತ್ತರಿಸಿದ್ದಾನೆ, ಅನ್ನದಾತರ ಸಂಕಷ್ಟಗಳನ್ನು ದೂರು ಮಾಡಲು ಕೃಷಿ ಅಧಿಕಾರಿಗಳು ಮತ್ತು ಕೃಷಿ ವಿಜ್ಞಾನಿಗಳು ರೈತರ ಜಮೀನುಗಳತ್ತ ದೌಡಾಯಿಸಿ ಪರೀಶೀಲನೆ ನಡೆಸಿದ್ದಾರೆ.
ರೈತನ ವಾಣಿಜ್ಯ ಬೆಳೆಯಾದ ಕಬ್ಬಿಗೆ ಹೆಚ್ಚಿನ ಬಾಧೆ ಕಂಡು ಬಂದಿದೆ. ಇದರ ಹೊರತಾಗಿ ಏಕದಳ, ದ್ವಿದಳ ಧಾನ್ಯ ಹಾಗೂ ಎಣ್ಣೆಕಾಳಿನ ಬೆಳೆಗಳು ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ರೋಗಕ್ಕೆ ತುತ್ತಾಗಿವೆ. ಇದರಿಂದ ಕೃಷಿಕರಿಗೆ ನಷ್ಟದ ಭೀತಿ ಎದುರಾಗಿದೆ. ಬೆಳೆಗಳನ್ನು ಉಳಿಸಿಕೊಳ್ಳಲು ಅನ್ನದಾತ ದುಬಾರಿ ಕೀಟನಾಶಕಗಳ ಮೊರೆ ಹೋಗುತ್ತಿದ್ದಾರೆ.
ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಯ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಿದೆ. ಇನ್ನೂ ಹಲವೆಡೆ ಮಳೆ ಕೊರತೆ ಹಾಗೂ ಕೀಟಬಾಧೆ ಕಾಡುತ್ತಿದೆ. ಅತಿ ಹೆಚ್ಚು ಕಬ್ಬು ಬೆಳೆಯುವ ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ ಮತ್ತು ಅಥಣಿ ಭಾಗದಲ್ಲಿ ಬಾಧೆ ಹೆಚ್ಚು ಉಲ್ಬಣಗೊಂಡಿದೆ. ಕಬ್ಬು ಹೊರತಾಗಿಯೂ ಮೆಕ್ಕೆಜೋಳ,ಗೋವಿನಜೋಳ, ಹತ್ತಿ. ಹೆಸರು, ಸೋಯಾಬಿನ್ ಗೊಣ್ಣೆ ಹುಳುವಿನ ಬಾಧೆ ಅನ್ನದಾತರನ್ನು ಸಂಕಷ್ಟಕ್ಕೆ ದೂಡಿದೆ.
ಚಿಕ್ಕೋಡಿ ತಾಲೂಕಿನಲ್ಲಿ 40675 ಹೆ. ಕ್ಷೇತ್ರದಲ್ಲಿ ಮುಖ್ಯ ಬೆಳೆ ಮತ್ತು ಕೂಳೆ ಬೆಳೆಯಾಗಿ ಆವರಿಸುತ್ತಿರುತ್ತದೆ. ಹಾಗೂ ಇನ್ನೂ ನಾಟಿ ಕಾರ್ಯ ಮುಂದುವರೆದಿರುತ್ತದೆ. ಈಗ ಸದ್ಯ ಬೆಳೆಯು ಬಿತ್ತನೆಯಿಂದ 125 ರಿಂದ 200 ದಿನದ ಬೆಳೆ ಇದ್ದು, ಅಲ್ಲಲ್ಲಿ ತೇವಾಂಶದ ಕೊರತೆ ಉಂಟಾಗಿ, ಗೊಣ್ಣೆಹೂಳುವಿನ ಬಾಧೆ ಕಂಡುಬಂದಿರುತ್ತದೆ. ಗೊಣ್ಣೆಹುಳುವಿನ ಮರಿಗಳು ಕಬ್ಬಿನ ಬೇರುಗಳನ್ನು ತಿನ್ನುವುದರಿಂದ, ಕಬ್ಬಿನ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ನಂತರ ಅಲ್ಲಲ್ಲಿ ಒಣಗಿರುವುದು ಇವುಗಳ ಇರುವಿಕೆಯನ್ನು ಸೂಚಿಸುತ್ತದೆ. ಅಂತಹ ಗಿಡಗಳ ಮೇಲ್ಬಾಗವನ್ನು ಕೈಯಿಂದ ಹಿಡಿದು ಎಳೆದರೆ ಸುಲಭವಾಗಿ ಭೂಮಿಯಿಂದ ಕಿತ್ತು ಬರುತ್ತದೆ. ಬಾಧೆಯು ತೀವ್ರವಾದಾಗ ಕಬ್ಬು ಒಣಗಿ ಬಿದ್ದು ನಾಶವಾಗುತ್ತದೆ.
ಕೃಷಿ ವಿಜ್ಞಾನಿಗಳು ಭೇಟಿ ಪರೀಶೀಲನೆ: ಚಿಕ್ಕೋಡಿ ತಾಲೂಕಿನ ಹಿರೇಕೊಡಿ, ಕಾಡಾಪೂರ ಮತ್ತು ಕಬ್ಬೂರ ಭಾಗಕ್ಕೆ ಕೃಷಿ ವಿಜ್ಞಾನಿಗಳದ ಡಾ. ಡಿ. ಸಿ. ಚೌಗಲಾ ಮತ್ತು ಕೃಷಿ ಅಧಿಕಾರಿಗಾಳ ಪ್ರಶಾಂತ ಹುಲಿಮನಿ ಮತ್ತು ರಮೇಶ ಈರ್ಪ ಚಡಚಾಳ ಅವರು ಭೇಟಿ ನೀಡಿ ಪರೀಶೀಲಿಸಿದ್ದಾರೆ.
ಕಬ್ಬಿನ ಬಾಧೆಗೆ ಕೀಟನಾಶಕ ಸಿಂಪಡಿಸಲು ಸೂಚನೆ: ಗೊಣ್ಣೆ ಹೂಳುವಿನ ಬಾಧೆಯ ಸಮಸ್ಯೆ ಕಂಡುಬಂದಲ್ಲಿ, ಜೈವಿಕ ಕೀಟನಾಶಕವಾದ ಮೆಟಾರೈಝಿಯಂ ಅನಿಸೋಪಿಲೆ ಶೀಲಿಂಧ್ರವನ್ನು ಪ್ರತಿ ಎಕರೆಗೆ 5-10 ಕಿ.ಗಾಂ (ಬಾಧೆಗನುಸಾರವಾಗಿ) 250-500 ಕಿ.ಗ್ರಾಂ ಕೊಟ್ಟಿಗೆ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಕಬ್ಬಿನ ಬೆಳೆಯ ಸಾಲಿನಲ್ಲಿ ಹಾಕಬೇಕು. ರಾಸಾಯನಿಕವಾಗಿ ಪ್ರತಿ ಎಕರೆಗೆ 100-200 ಗ್ರಾಂ ಇಮೀಡಾಕ್ಲೋಪ್ರಿಡ್ 40ಅ + ಫೀಟ್ರೋನಿಲ್ 40ಅ ಡಬ್ಲೂಜಿ ನೀರಿನ್ನಲ್ಲಿ ಬೆರೆಸಿ ಮಣ್ಣಿನಲ್ಲಿ ಇಂಗಿಸುವುದರ (ಡ್ರೆಂಚಿಂಗ್) ಅಥವಾ ಫೀಪ್ರೋನಿಲ್ ಹರಳುಗಳನ್ನು ಪ್ರತಿ ಎಕರೆಗೆ 7.5 ಕೆ.ಜಿ ಪ್ರಮಾಣವನ್ನು ಕಬ್ಬಿನ ಸಾಲಿನ ಹಾಕಿ ನೀರು ಹಾಯಿಸುವುದರ ಮೂಲಕ ಕಬ್ಬು ಬೆಳೆಯನ್ನು ಸಂರಕ್ಷಿಸಬೇಕು ಎಂದು ಕೃಷಿ ಅಧಿಕಾರಿಗಳು ರೈತರಿಗೆ ಸಲಹೆ ನೀಡಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 