ಭಕ್ತರ ಅರಾಧ್ಯ ದೈವರು ಖಿಳೇಗಾಂವಿ ಬಸವಣ್ಣ ; ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ

ಭಕ್ತರ ಅರಾಧ್ಯ ದೈವರು ಖಿಳೇಗಾಂವಿ ಬಸವಣ್ಣ ; ಲಕ್ಷಾಂತರ ಭಕ್ತರು ದೇವರ ದರ್ಶನಕ್ಕೆ The idol of devotees is Khilegaon Basavanna; Lakhs of devotees come to have darshan of the god

ಲೋಕದರ್ಶನ ವರದಿ 

      ಸಂಬರಗಿ 20 : ಕರ್ನಾಟಕ ಮಹಾರಾಷ್ಟ್ರದ ಗಡಿ ಭಾಗದಲ್ಲಿ  ಇರುವ ಲಕ್ಷಾಂತರ ಭಕ್ತರ ಅರಾಧ್ಯ ದೈವರು ಖಿಳೇಗಾಂವಿ ಬಸವಣ್ಣ. ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆಯಲು ಹರಿದು ಬರುತ್ತಾರೆ. ಬಸವೇಶ್ವರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಮೂಲ ಪುರುಷ ಢವಳಪ್ಪಾ ಅಜ್ಜನ ಬದುಕು ಹತ್ತನೇ ಶತಮಾನದ ಮಧ್ಯ ಭಾಗದಲ್ಲಿ ಬಸವಣ್ಣನ ಚರಿತ್ರೆಯೊಂದಿಗೆ ಪ್ರಾರಂಭಗೊಳ್ಳುತ್ತದೆ. ದೊಡ್ಡ ಬಸಪ್ಪಾ ಹಾಗೂ ಗಂಗವ್ವ ದೇಸಾಯಿ ಎಂಬ ಶರಣರ ಮೂರುಜನ ಮಕ್ಕಳಲ್ಲಿ ನಡುವಿನ ಮಗ ಡವಳಪ್ಪಾ. ಈತನ ಹೆಂಡತಿ ಶಿವಮ್ಮ ಹಾಗೂ ಮಕ್ಕಳಾದ ಕರವೀರಾ​‍್ಪ ಮತ್ತು ಬಿಸಲಪ್ಪಾ  ಹೊಲದಲ್ಲಿ ವಾಸವಿರುತ್ತಿದ್ದ. ದನಕರುಗಳನ್ನು ಕಾಯುವುದು ಈತನ ನಿತ್ಯದ ಕಾಯಕವಾಗಿತ್ತು. 

ಈತನ ಆಕಳುಗಳಲ್ಲಿ ಒಂದಾಕ ಕಪಲೆ ಎಂಬ ಬರಡು ಆಕಳು ನಡುರಾತ್ರಿಯಲ್ಲಿದಡ್ಡಿ (ಕೊಠಡಿ) ಯಿಂದ ಹೊರಗೆ ಹೋಗಿ ಒಂದು ಹುತ್ತಕ್ಕೆ ಹಾಲು ಸುರಿಸುತ್ತಿತ್ತು.ಇದೇನು ವಿಚಿತ್ರ ಎಂದು ಕೊಂಡು ಚಿಂತಿಸುತ್ತಿದ್ದ ಡವಳಪ್ಪ ಒಂದು ದಿನ ಮಲಗಿದ್ದಾಗ ಆತನಿಗೆ ಒಂದು ಕನಸು ಬಿತ್ತು, ಕನಸಿನಲ್ಲಿ ಬಸವಣ್ಣ ಬಂದು ನಿನ್ನ ಆಕಳು ನನಗೆ ದಿನಾಲು ಹಾಲು ಎರೆಯುತ್ತಿದೆ.ಆ ಆಕಳು ಸಾಕ್ಷಾತ ಕಾಮಧೇನು. ಹುತ್ತವನ್ನು ಅಗೆದು ನನ್ನನ್ನು ನೋಡು ಎಂದು ಹೇಳಿದಂತೆ ಭಾಸವಾಯಿತು. ಮರುದಿನ ಡವಳಪ್ಪ ಹುತ್ತವನ್ನು ಅಗೆದಾಗಅಲ್ಲಿ ಬಸವಣ್ಣ ಕಾಣಿಸಿದ.ಈ ವಷಯನ್ನು ಎಲ್ಲೆಡೆ ಹರಡಿ ಗ್ರಾಮದವರು ಹಾಗೂ ಸುತ್ತಮುತ್ತಲಿನ ಭಕ್ತರುದರ್ಶನ ಪಡೆದುಧನ್ಯರಾದರು.ದಶಕಗಳ ಕಾಲ ಹೀಗೆ ಮುಂದುವರೆದು ಬಸವಣ್ಣನ ಭಕ್ತರ ಸಂಖ್ಯೆ ಹೆಚ್ಚುತ್ತ ಹೋಯಿತು ಹಾಗೂ ಇಲ್ಲಿ ಹಲವಾರು ಪವಾಡಗಳು ನಡೆದವು. 

    ಬಸವಣ್ಣನ ಪವಾಡ ವಿಜಯಪುರದ ಸುಲ್ತಾನನಿಗೂ ತಿಳಿಯಿತು. ಬಸವಣ್ಣನ ಮಹಿಮೆ ಅರಿಯಲು ಖಿಳೇಗಾಂವಿ ಗ್ರಾಮಕ್ಕೆ ಸೈನ್ಯ ಸಮೇತ ಆಗಮಿಸಿದ ಬಾದಷಹಾ ಬಸವಣ್ಣನನು,್ನ ಪರೀಕ್ಷಿಸಲು,ಮುಂದಾಗಿ, ಮೂರ್ತಿಯನ್ನು, ಬರ್ಚಿಯಿಂದ,ಇರಿದಾಗ,ರಕ್ತ ಮತ್ತೊಂದ ಕಡೆ ಹಾಲು ಬರಲಾರಾ​‍್ರಂಭಿಸಿತು.ನೈವೇದ್ಯಕ್ಕೆ ಇರಿಸಿದ್ದ ಮಾಂಸ ದಾಸವಾಳ ಹೂವಾಗಿ ಅರಳಿ ನಂತರ ಜೇನುನೋಣದರೂಪ ತಾಳಿ ಬಾದಷಾಹಾ ಮತ್ತು ಅವನ ಅನುಯಾಯಿಗಳನ್ನು ಕಚ್ಚಿದವು.ಸುಲ್ತಾನನಿಗೆ ತನ್ನ   ತಪ್ಪಿನಅರಿವಾಗಿ ಬಸವಣ್ಣನಿಗೆ ಗುಡಿಯನ್ನು ಕಟ್ಟಿಸಿ ಇನಾಮು ಕೊಟ್ಟನು. 

ಅಂದಿನಿಂದ ಇಂದಿನವರೆಗೆ ಬಸವಣ್ಣನಿಗೆ ಶಿವರಾತ್ರಿಯಿಂದ ಮೃಗಶಿರ ಮಳೆಯವರೆಗೆ ಪ್ರತಿ ನಿತ್ಯ ತ್ರಿಕಾಲ ಪೂಜೆ ನಡೆಯುತ್ತಿದೆ. ಹಾಗೂ ಶ್ರಾವಣ ಮಾಸದಲ್ಲಿ ವಿಶೇಷವಾಗಿ ನಸುಕಿನಲ್ಲಿ ಮತ್ತು ಉಳಿದ ವೇಳೆ ಎರಡುಸಲ ಪೂಜೆ ನಡೆಯುವುದು. ಪೂಜೆ ವೇಳೆ ದೇವಸ್ಥಾನದಿಂದ 1 ಕಿ.ಮೀ ದೂರವಿರುವಅಗ್ರಾಣಿ ನದಿ ದಂಡೆಯಲ್ಲಿರುವ ಸಂಗಮನಾಥನ ಹತ್ತಿರವಿರುವ ಬಾವಿಯಿಂದ ಮಡಿಯಿಂದ ನೀರುತಂದುಅಭಿಷೇಕ ಮಾಡಲಾಗುತ್ತದೆ.  

       ಜಾತ್ರೆ  ಯುಗಾದಿ ಪಾಡ್ಯದಿಂದ ಐದು ದಿನಗಳವರೆಗೆ ಇಲ್ಲಿ ವೈಭವದ ಜಾತ್ರೆ ನಡೆಯುತ್ತದೆ. ದೂರದ ಊರುಗಳಿಂದ ಭಕ್ತಾಧಿಗಳು ಆಗಮಿಸಿ, ಬಸವಣ್ಣನ ಸನ್ನಿಧಿಯಲ್ಲಿ ಇದ್ದು, ದಿನಾಲು ನೈವೇದ್ಯ ಅರ​‍್ಿಸಿ ತಮ್ಮ ಊರುಗಳಿಂದ ತಂದ ನಂದಿ ಕೋಲುಗಳೊಂದಿಗೆ ಬಸವಣ್ಣನ ಪಲ್ಲಕ್ಕಿಯೊಂದಿಗೆ ಐದು ದಿನಗಳ ಕಾಲ ಅಗ್ರಾಣಿ ಸಂಗಮನಾಥನಿಗೆ ಕಲಾ ತಂಡಗಳೊಂದಿಗೆ ಹೋಗಿ ಬರುತ್ತಾರೆ. ವಂಶ ಪಾರಂಪರ್ಯದಂಎ ಢವಳಪ್ಪಜ್ಜನ ವಂಶಸ್ಥರು ಬಸವಣ್ಣನ ಪೂಜೆ ಮಾಡಿಕೊಂಡು ಬಂದಿದ್ದು, ಇಂದಿಗೂ ಅದು ಮುಂದುವರಿದಿದೆ.ಪೂಜಾರಗಳಿಗೆ ಹಾಗೂ ಸೇವಕರಿಗೆ ಇನಾಂ ಜಮೀನನ್ನುಕೊಟ್ಟದ್ದು, ಜಮೀನು ಸಾಗುವಳಿ ಮಾಡುತ್ತ ಬಸವಣ್ಣನ ಸೇವೆ ಮುಂದುವರಿಸಿದ್ದಾರೆ. 

ಶ್ರೀ ಬಸವೇಶ್ವರ ದೇವಸ್ಥಾನ ಕ್ಕೆಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದ ಭಕ್ತರು ಆಗಮಿಸಿ ಸೇವೆ ಮಾಡಿ ಆಶಿರ್ವಾದ ಪಡೆಯುತ್ತಾರೆ.ದೇವಾಲಯಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ವಸತಿ ಗೃಹಗಳ ವ್ಯವಸ್ಥೆಇದೆ. ವಿಶಾಲವಾದದಾಸೋಹಕಟ್ಟಡ ನಿರ್ಮಾನ ಮಾಡಿದ್ದು, ಬೆಳಿಗ್ಗೆ 10 ಗಂಟೆಯಿಂದರಾತ್ರಿ 9:30ರ ವರೆಗೆ ಉಚಿತ ಅನ್ನ ಸಂತರೆ​‍್ಣಯುದೇಗುಲದ ಕಮೀಟಿ ವತಿಯಿಂದ ನಡೆಯುತ್ತದೆ. ಭಕ್ತರುಧವಸ-ಧಾನ್ಯ, ಹಣದರೂಪದಲ್ಲಿದೇಣಿಗೆ ಸಲ್ಲಿಸುತ್ತಾರೆ.ಶ್ರೀ ಕ್ಷೇತ್ರದಲ್ಲಿ ಸುಸಜ್ಜಿತ ಶೌಚಾಲಯ ಹಾಗೂ ಸ್ನಾನಗೃಹಗಳ ವ್ಯವಸ್ಥೆಇದೆ.ದೇವಸ್ಥಾನದ ವಿಶಾಲ ಪ್ರದೇಶದಲ್ಲಿಅಂದಾಜು 10 ಕೋಟಿ ವೆಚ್ಚದಲ್ಲಿ ಬಸವ ಭವನ ನಿರ್ಮಾಣದಯೋಜನೆ ಪ್ರಗತಿಯಲ್ಲಿದೆ.