ಲೋಕದರ್ಶನವರದಿ
ಶಿಗ್ಗಾವಿ 22: ಮಕ್ಕಳಿಗೆ ಊಣಬಡಿಸಲು ತಯಾರಿಸಿದ ಬಿಸಿ ಊಟ ಬಾಲಕನೋರ್ವನ ಪಾದದ ಮೇಲೆ ಬಿದ್ದು ಗಾಯಗೊಂಡ ಘಟನೆ ತಾಲೂಕಿನ ಬಂಕಾಪುರ ಪಟ್ಟಣದ ನರೇಗಲ್ರ ಓಣಿಯ ಅಂಗನವಾಡಿ ಕೇಂದ್ರ ಸಂಖ್ಯೆ 74 ರಲ್ಲಿ ಶನಿವಾರದಂದು ಸಂಭವಿಸಿದೆ.
ಗಾಯಗೊಂಡ ಬಾಲಕನನ್ನು ಆದರ್ಶ ಬೀರಪ್ಪ ಬನ್ನಿಮಟ್ಟಿ ಎಂದು ತಿಳಿದುಬಂದಿದೆ. ಮಕ್ಕಳು ಊಟ ಮಾಡುವ ಸಮಯದಲ್ಲಿ ಕೇಂದ್ರದಲ್ಲಿದ್ದು, ನಿಗಾವಹಿಸಬೇಕಾದ ಶಿಕ್ಷಕಿ ಹೊರಗಡೆ ಹೋದ ಸಂದರ್ಭದಲ್ಲಿ ಸಹಾಯಕಿ ನಾಗಮ್ಮ ಕಳ್ಳಿಮನಿ ಬಿಸಿಊಟ ತಯಾರಿಸಿ ಹೊರಗಡೆ ಹೋದ ಕೆಲವು ಮಕ್ಕಳನ್ನು ಒಳಗೆ ಊಟಕ್ಕೇ ಕರೆ ತರಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ವಿಷಯ ತಿಳಿದ ಪಾಲಕರು ಅಂಗನವಾಡಿ ಕೇಂದ್ರಕ್ಕೇ ಮುತ್ತಿಗೆಹಾಕಿ ಬೇಜವಾಬ್ದಾರಿ ಶಿಕ್ಷಕಿ ಹಾಗು ಸಹಾಯಕಿಯರನ್ನು ತರಾಟೆಗೆ ತೆಗೆದುಕೋಂಡು ಅಂಗನವಾಡಿ ಕೇಂದ್ರಕ್ಕೇ ಬೀಗ ಜಡಿದು ಆಕ್ರೋಶ ವ್ಯಕ್ತಪಡೆಸಿದರು.
ಸುಟ್ಟು ಘಾಯಗೊಂಡ ಬಾಲಕನಿಗೆ ಪಾಲಕರು ಖಾಸಗಿ ಆಸ್ಪತ್ರೆಯೋಂದರಲ್ಲಿ ಚಿಕಿತ್ಸೆ ಕೋಡಿಸುತ್ತಿದ್ದಾರೆ.
ಸಂಬಂಧ ಪಟ್ಟ ಮೇಲಾಧಿಕಾರಿಗಳು ಸ್ಥಳಕ್ಕೇ ಬೇಟಿ ನೀಡಿ ತಪ್ಪಿತಸ್ತ ಶಿಕ್ಷಕಿ ಹಾಗು ಸಹಾಯಕಿ ಮೇಲೆ ಸೂಕ್ತ ಕ್ರಮ ಜರುಗಿಸುವವರೆಗೆ ಅಂಗನವಾಡಿ ಕೇಂದ್ರಕ್ಕೇ ಹಾಕಿದ ಬೀಗ ತೆಗೆಯುವದಿಲ್ಲವೆಂದು ಬಾಲಕನ ತಂದೆ ಬೀರಪ್ಪ ಬನ್ನಿಮಟ್ಟಿ ಎಚ್ಚರಿಸಿದ್ದಾರೆ.