ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಗಳ ಹಾವಳಿ: ಕಡಿವಾಣಕ್ಕೆ ಮುಂದಾದ ಆರೋಗ್ಯ ಇಲಾಖೆ
The health department has taken steps to curb the menace of fake clinics in the district.
ಕಾರವಾರ 18: ಉತ್ತರ ಕನ್ನಡ ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ಮತ್ತು ವೈದ್ಯರ ಸಂಖ್ಯೆ ಹೆಚ್ಚಾಗಿದ್ದು,ಸಾರ್ವಜನಿಕರ ದೂರಿನ ಮೇರೆಗೆ ದಾಳಿಗಳು ಪ್ರಾರಂಭವಾಗಿವೆ. ಇದೇ ವಾರದಾರಂಭದಲ್ಲಿ ಮುಂಡಗೋಡ ಮತ್ತು ಕಾರವಾರ ನಗರದಲ್ಲಿ ತಲಾ ಒಂದೊಂದು ನಕಲಿ ಕ್ಲಿನಿಕ್ ಮುಚ್ಚಿಸಿ , ನೋಟೀಸ್ ನೀಡಲಾಗಿದೆ. ಮುಂಡಗೋಡ ತಾಲೂಕಿನ ಕಾತೂರು ಗ್ರಾಮದಲ್ಲಿ ರತ್ನಮ್ಮ ಎಂಬ ವೈದ್ಯರು ನಡೆಸುತ್ತಿದ್ದ ಕ್ಲಿನಿಕ್ ನಲ್ಲಿ ಭಯಾನಕ ಚಿಕಿತ್ಸೆ ಗಳಿದ್ದವು. ಅವುಗಳನ್ನು ಕಂಡ ಸರ್ಕಾರಿ ವೈದ್ಯರ ತಂಡ ಬೆಚ್ಚಿಬಿದ್ದಿದೆ.
ಸಾರ್ವಜನಿಕರ ಕಾಯಿಲೆಗೆ ವಿಚಿತ್ರ ಓಷಧಿ ಮತ್ತು ಚಿಕಿತ್ಸೆ ಕೊಡಲಾಗಿತ್ತಿತ್ತು. ಹಿಂದೆ ನಕಲಿ ಕ್ಲಿನಿಕ್ ಹೆಸರಲ್ಲಿ ಸಿಕ್ಕಿಬಿದ್ದು, ಮುಂದೆ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ನಂತರವೂ ನಕಲಿ ಕ್ಲಿನಿಕ್ ಮುಂದುವರಿದಿತ್ತು. ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಒಂದು ದಿನದ ಹಿಂದೆ ದಾಳಿ ಮಾಡಿದಾಗ ನಕಲಿ ಡಾಕ್ಟರ್ ರತ್ನಮ್ಮ ಸಿಕ್ಕಿಬಿದ್ದಿದ್ದಾರೆ. ಕ್ಲಿನಿಕ್ ಮುಚ್ಚಿಸಿದ ಆರೋಗ್ಯ ಇಲಾಖೆ ನೋಟೀಸ್ ನೀಡಿದ್ದು, ಪ್ರಕರಣ ದಾಖಲಾಗುವ ಹಂತದಲ್ಲಿದೆ. ಇಂದು ಕಾರವಾರದ ನಗರದ ಕೆಇಬಿ ರಸ್ತೆ ಸಮೀಪ ಇದ್ದ ನಕಲಿ ಕ್ಲಿನಿಕ್ ಮುಚ್ಚಿಸಲಾಗಿದೆ ಎಂದು ಡಿಎಚ್ ಒ ಡಾ.ನೀರಜ್ ಲೋಕದರ್ಶನಕ್ಕೆ ಮಾಹಿತಿ ನೀಡಿದರು. ಪ್ರಸಕ್ತ ವರ್ಷ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಐದು ಕಡೆ ನಕಲಿ ಕ್ಲಿನಿಕ್ ನಡೆಸುತ್ತಿದ್ದವನ್ನು ಮುಚ್ಚಿಸಲಾಗಿದೆ. ಅಲ್ಲದೆ ನಕಲಿ ಸರ್ಟಿಫಿಕೇಟ್ ಅಥವಾ ಮಾನ್ಯತೆ ಇಲ್ಲದ ಸಂಸ್ಥೆಗಳಿಂದ ಪಡೆದ ವೈದ್ಯಕೀಯ ಪ್ರಮಾಣ ಪತ್ರಗಳನ್ನು ವಶಕ್ಕೆ ಪಡೆದು ಪ್ರಶ್ನಿಸಲಾಗಿದೆ. ಕ್ಲಿನಿಕ್ ಮುಚ್ಚಿಸಲಾಗಿದೆ. *36 ಕಡೆ ನಕಲಿ ಕ್ಲಿನಿಕ್ ಪ್ರಕರಣ ಪತ್ತೆ :*ಉ.ಕ.ಜಿಲ್ಲೆಯಲ್ಲಿ 2024-25 ರಲ್ಲಿ 36 ಕಡೆ ನಕಲಿ ಕ್ಲಿನಿಕ್ ಪ್ರಕರಣ ಪತ್ತೆಯಾಗಿವೆ. ಈ ಪೈಕಿ ಗಂಭೀರ ತಪ್ಪು ಮಾಡಿದ ಕ್ಲಿನಿಕ್ ಗಳ ಮೇಲೆ ಪೊಲೀಸ್ ಪ್ರಕರಣ ದಾಖಲಿಸಲಾಗಿದೆ. 14 ಕ್ಲಿನಿಕ್ ಗಳನ್ನು ಮುಚ್ಚಿಸಲಾಗಿದೆ. ಇವುಗಳಲ್ಲಿ ಜೊಯಿಡಾ, ದಾಂಡೇಲಿ, ಹಳಿಯಾಳ, ಮುಂಡಗೋಡ, ಯಲ್ಲಾಪುರ, ಸಿದ್ದಾಪುರ, ಅಂಕೋಲಾ ,ಕುಮಟಾ ತಾಲೂಕುಗಳಲ್ಲಿ ಇದ್ದ ನಕಲಿ ಕ್ಲಿನಿಕ್ ಗಳು ಸೇರವೆ. 11 ನಕಲಿ ಕ್ಲಿನಿಕ್ ಗಳ ಮಾನ್ಯತೆ ಪಡೆಯದ ವೈದ್ಯರಿಗೆ ನೋಟೀಸ್ ನೀಡಲಾಗಿದೆ. ದಾಖಲೆ ಸರಿಯಿದ್ದ 8 ಕ್ಲಿನಿಕ್ ಸರಿಪಡಿಸಿ,ಮಾರ್ಗಸೂಚಿಗಳನ್ನು ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಸಹ ನಡೆದಿದೆ. ನಕಲಿ ಕ್ಲಿನಿಕ್ ನವರು ಅನೈತಿಕ ಸಂಬಂಧದ ಅಬಾಶನ್ ಮಾಡಿಸುವ ಕೃತ್ಯದಲ್ಲಿ ಪಾಲುದಾರಿಕೆ ವಹಿಸುವ ಸಾಧ್ಯತೆ ಗಳಿದ್ದು,ಅಂಥವರ ಮೇಲೆ ಕಣ್ಣಿಡಲಾಗಿದೆ. ಅಲ್ಲದೆ ಬಡವರಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಇವರು ಸುಲಿಗೆ ಮಾಡುವ ಎಲ್ಲಾ ಆಯಾಮಗಳನ್ನು ಪರೀಶೀಲಿಸಲಾಗುತ್ತಿದೆ. ನಕಲಿ ವೈದ್ಯರ ಮೇಲೆ ಆಶಾ ಕಾರ್ಯಕರ್ತರು ಮತ್ತು ಪೊಲೀಸ್ ಇಲಾಖೆಯ ಮೂಲಕ ಮಾಹಿತಿ ಪಡೆಯುವ ವ್ಯವಸ್ಥೆ ನಮ್ಮಲ್ಲಿದೆ ಎಂದು ಆರೋಗ್ಯ ಇಲಾಖೆ ಹೇಳುತ್ತಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಬಲಪಡಿಸಲು ಎಲ್ಲಾ ಕ್ರಮಗಳಿಗೆ ಮುಂದಾಗಿದೆ.
ಜಿಲ್ಲೆಯಲ್ಲಿ ನಕಲಿ ಕ್ಲಿನಿಕ್ ನಡೆಯದಂತೆ ನಿಗಾ ಇಡಲಾಗಿದೆ. ನಕಲಿ ಎಂದು ಮಾಹಿತಿ ಬಂದಕೂಡಲೇ ದಾಳಿ ಮಾಡಲಾಗುತ್ತಿದೆ. ಮತ್ತು ಜನರಿಗೆ ಆರೋಗ್ಯ ಸೇವೆ ನೀಡಲು ಸಾಧ್ಯವುರುವ ಎಲ್ಲಾ ಕೆಲಸ ಮಾಡುತ್ತಿದ್ದೇವೆ.
-ಡಾ. ನೀರಜ್
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ. ಕಾರವಾರ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 