ಅನ್ನದಾನೇಶ್ವರ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಲಿಂಗೈಕ್ಯ
The head of the Annadaneshwar Sansthan Hiremath, Lingaykya
ತಾಳಿಕೋಟೆ 16: ತಾಲ್ಲೂಕಿನ ಹಿರೂರು ಗ್ರಾಮದಲ್ಲಿರುವ ಅನ್ನದಾನೇಶ್ವರ ಸಂಸ್ಥಾನ ಹಿರೇಮಠವು ಜಾಗತಿಕ ಇತಿಹಾಸದಲ್ಲಿ ತನ್ನ ಅಚ್ಚನ್ನು ಮೂಡಿಸಿದೆ ಕ್ರಿಸ್ತಶಕ 6ನೇ ಶತಮಾನದಲ್ಲಿ ಹಿರೂರ ಗ್ರಾಮವನ್ನು ಕಟ್ಟಿ 330 ವರ್ಷ ಬಾಳಿದ ಕರ್ತೃ ಪುರುಷ ಅನ್ನ ದಾನೇಶ್ವರ ಪ್ರಸಿದ್ಧ ಪವಾಡ ಪುರುಷರು. ಈ ಮಠಕ್ಕೆ ಇಲ್ಲಿಯವರೆಗೆ 36 ಜನ ಪೀಠಾಧಿಪತಿಗಳು ಆಗಿ ಹೋಗಿದ್ದಾರೆ. ಈಗಿನ 35ನೇ ಪೀಠಾಧಿಪತಿಗಳಾದ ಶತಾಯುಷಿ ಶತಮಾನದ ಸಂತ ಗುರು ಶಾಂತವೀರ ಶಿವಯೋಗಿ ಶಿವಾಚಾರ್ಯರು 1925 ರಲ್ಲಿ ಜನಿಸಿ ಬಾಲ್ಯವನ್ನು ಹುನಗುಂದ್ ತಾಲೂಕಿನ ವೀರಾಪುರದಲ್ಲಿ ಕಳೆದು ಕೆಲಕಾಲ ಶಿವಯೋಗ ಮಂದಿರ ಮತ್ತು ಇನ್ನುಳಿದ ಧಾರ್ಮಿಕ ಕೇಂದ್ರಗಳಲ್ಲಿ ಅಧ್ಯಯನ ಮಾಡಿ 1945ರಲ್ಲಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗಿಯಾಗಿ 1948ರಲ್ಲಿ ಹಿರೂರು ಮಠದ 35ನೇ ಪೀಠಾಧ್ಯಕ್ಷರಾಗಿ ಸಮಾಜ ಧಾರ್ಮಿಕ ಸೇವೆಯಲ್ಲಿ ತಮ್ಮಣ್ಣ ತೊಡಗಿಸಿಕೊಂಡರು. ಬಡವರ ದೀನದಲಿತ ಭಕ್ತರ ಬಾಳಿಗೆ ಆಶಾಕಿರಣವಾಗಿ ನಂದಾದೀಪವಾಗಿದ್ದರು ಅಖಂಡ 75 ವರ್ಷಗಳ ಕಾಲ ಶ್ರೀಮಠದ ಭಕ್ತರ ಸರ್ವ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಲಿಂಗೈಕ್ಯರಾದ ಶ್ರೀಗಳ ಅಂತಿಮ ಕಾರ್ಯ ಜ.16 ರಂದು ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಶ್ರೀಮಠದ ಆವರಣದಲ್ಲಿ ನೆರವೇರುವುದು. ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್ 