ಕತ್ತರಿ ಹಿಡಿಬೇಕಾದ ಕೈ ಇಂದು ಬಂದೂಕು ಹಿಡಿದು ದೇಶ ಕಾಯುವ ಜವಾನ ಕುರುಮಯ್ಯ ಬಾರ್ಬರ್‌

ಕತ್ತರಿ ಹಿಡಿಬೇಕಾದ ಕೈ ಇಂದು ಬಂದೂಕು ಹಿಡಿದು ದೇಶ ಕಾಯುವ ಜವಾನ ಕುರುಮಯ್ಯ ಬಾರ್ಬರ್‌ The hand that should have held the scissors is today the soldier who holds the gun and protects the

ಗದಗ 18: ಬೆವರಿನ ದುಡಿಮೆಗೆ ಜಗತ್ತಿನಲ್ಲಿ ಅತ್ಯುನ್ನತ ಗೌರವವಿದೆ. ಸಮಾಜದ ಒಂದು ವರ್ಗ ಕಣ್ಣಿನಲ್ಲಿ ಕ್ಷೌರಿಕ ವೃತ್ತಿಯನ್ನು ಕೀಳಾಗಿ ಕಾಣುತ್ತಿರಬಹುದು, ಆದರೆ ಅದೇ ವೃತ್ತಿಯ ಪ್ರಾಮಾಣಿಕ ಗಳಿಕೆಯಿಂದ ಇಂದು ದೇಶ ಕಾಯುವ ವೀರ ಸೈನಿಕನೊಬ್ಬ ಜನ್ಮತಾಳಿದ್ದಾನೆ. ಕಾಯಕ ನಿಷ್ಠೆ ಮತ್ತು ದೇಶಪ್ರೇಮದ ಮುಂದೆ ಯಾವುದೇ ಶೋಷಣೆ ಅಥವಾ ಕೀಳುರಿಮೆ ನಿಲ್ಲಲು ಸಾಧ್ಯವಿಲ್ಲ ಎಂಬುದನ್ನು ನಮ್ಮ ಸವಿತಾ ಸಮಾಜದ ಹೆಮ್ಮೆಯ ಸಾಧಕರಾದ ಕುರುಮಯ್ಯ ಬಾರ್ಬರ್ ಅವರು ಸಾಬೀತುಪಡಿಸಿದ್ದಾರೆ, ಎಂದು ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾಧ್ಯಕ್ಷರಾದ ಕೃಷ್ಣಾ ಎಚ್‌. ಹಡಪದ ಅವರು ಅತ್ಯಂತ ಹೆಮ್ಮೆಯಿಂದ ಹರ್ಷ ವ್ಯಕ್ತಪಡಿಸಿ ಹೇಳಿದರು.  ಶಿರಹಟ್ಟಿ ಸವಿತಾ ಸಮಾಜದ ಮುಖಂಡರು ಹಾಗೂ ಗದಗ ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಸಂಚಾಲಕರಾದ ಕುರುಮಯ್ಯ ಬಾರ್ಬರ್ ಅವರ ಸುಪುತ್ರ ನಾಗರಾಜ ಬಾರ್ಬರ್ ಅವರು ಭಾರತೀಯ ಸೇನೆಗೆ ಆಯ್ಕೆಯಾಗಿರುವ ಐತಿಹಾಸಿಕ ಹಿನ್ನೆಲೆಯಲ್ಲಿ, ಜಿಲ್ಲಾ ಸವಿತಾ ಸಮಾಜದ ವತಿಯಿಂದ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.