ಸದಸ್ಯರ ವಿಶ್ವಾಸವಿದ್ದರೆ ಸಂಘದ ಬೆಳವಣಿಗೆ ಸಾಧ್ಯ: ಬಸರಕೋಡ
The growth of the association is possible if there is trust from the members: Basarakoda
ತಾಳಿಕೋಟಿ 19: ಪ್ರತಿಯೊಬ್ಬರೂ ಸಹಕಾರ ನೀಡಿದರೆ ಮಾತ್ರ ಸಹಕಾರಿ ಸಂಘಗಳು ಬೆಳವಣಿಗೆಯಾಗಲು ಸಾಧ್ಯವಿದೆ. ಸಂಘದಿಂದ ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಧ್ಯಕ್ಷ ಬಸನಗೌಡ ಈ. ಬಸರಕೋಡ ಹೇಳಿದರು.
ತಾಲೂಕಿನ ಲಿಂಗದಳ್ಳಿ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ, ಇದರ 2024-25 ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಂಘ ಎಲ್ಲರ ಸಹಕಾರದೊಂದಿಗೆ ವರ್ಷದಿಂದ ವರ್ಷಕ್ಕೆ ಪ್ರಗತಿಯತ್ತ ಸಾಗುತ್ತಿದೆ 2025 ಮಾರ್ಚ್ 31ರ ಅಂತ್ಯಕ್ಕೆ 1187 ಸದಸ್ಯರನ್ನು ಹೊಂದಿದ್ದು,ರೂ.75 ಲಕ್ಷ ಶೇರು ಬಂಡವಾಳ,ರೂ.8.5 ಲಕ್ಷ ಠೇವುಗಳು ಹೊಂದಿದ್ದು ರೂ.4.90 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ತಿಳಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಆರ್. ತಿಳಗೂಳ ಅವರು ವಾರ್ಷಿಕ ವರದಿ ವಾಚಿಸಿ ಸದಸ್ಯರಿಂದ ಬಂದ ಕೆಲವು ಪ್ರಶ್ನೆಗಳಿಗೆ ಸಮರ್ಕವಾಗಿ ಉತ್ತರಿಸಿದರು.
ಸಂಘದ ಉಪಾಧ್ಯಕ್ಷೆ ನೀಲಮ್ಮ ಎಂ.ಪೀರಾಪೂರ, ಗಣ್ಯರಾದ ಅಯ್ಯನಗೌಡ ನಾಡಗೌಡ,ಬಸನಗೌಡ ಮೇಟಿ, ಮಲ್ಲನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ರಮೇಶ ಗುರಡ್ಡಿ, ಸಿದ್ದನಗೌಡ ಪಡೇಕನೂರ, ಶರಣಗೌಡ ಪಾಟೀಲ, ಕಾಶಿರಾಯಗೌಡ ಬಿರಾದಾರ, ಹಣಮಪ್ಪಗೌಡ ಕಾಮರೆಡ್ಡಿ, ಅಪ್ಪ ಸಾಹೇಬಗೌಡ ಬಿರಾದಾರ, ರಮೇಶಗೌಡ ತಿಳಗೂಳ, ಶಾಂತೇಶ ಚಟ್ಟೇರ, ಹಿರಿಯ ಶಿಕ್ಷಕ ಕೆ.ಪಿ. ಬಿರಾದಾರ, ವೀರೇಶ ಕಾದಳ್ಳಿ, ನಿರ್ದೇಶಕರಾದ ಗುರ್ಪ ಮೇಟಿ, ಬಸನಗೌಡ ಬಿರಾದಾರ ಹಣಮಗೌಡ ಮುದ್ನೂರ, ಶರಣಪ್ಪ ಪಾಟೀಲ, ಹಣಮಂತ್ರಾಯ ಬಿರಾದಾರ, ನಿಂಗಪ್ಪ ಹೊಸಮನಿ, ಗಂಗಮ್ಮ ನಾಡಗೌಡ, ಗ್ಯಾನಪ್ಪ ವಾಲಿಕಾರ, ರಾಮಚಂದ್ರ ಹೊಸಮನಿ, ನೇತ್ರಾ ವಾಲಿಕಾರ, ಕ್ಷೇತ್ರಾಧಿಕಾರಿ ಬಿ.ಜಿ.ಪಡಸಲಗಿ, ವೃತ್ತಿಪರ ನಿರ್ದೇಶಕರಾದ ರಾಮನಗೌಡ ಬಿರಾದಾರ, ಶಾಂತಗೌಡ ಬಿರಾದಾರ, ಸಂಘದ ಸದಸ್ಯರು ಹಾಗೂ ಸಿಬ್ಬಂದಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 