ಶ್ರೇಷ್ಠ ವೃತ್ತಿ ಎಂದರೆ ಶಿಕ್ಷಕ ವೃತ್ತಿ: ಬೊಮ್ಮಾಯಿ

ಶಿಗ್ಗಾವಿ : ಭಾರತ ದೇಶದಲ್ಲಿ ದಕ್ಷಿಣ ಕನರ್ಾಟಕ ಮತ್ತು ಉತ್ತರ ಕನರ್ಾಟಕದ ಶಾಲೆಗಳನ್ನು ಪರಿಗಣನೆಗೆ ತೆಗೆದುಕೊಂಡಾಗ ದಕ್ಷಿಣ ಕನರ್ಾಟಕದಲ್ಲಿ ಖಾಸಗಿ ಶಾಲೆಗಳು ಹೆಚ್ಚು ಅದರಲ್ಲಿ ಅಲ್ಲಿ ಕಲಿತ ಪ್ರತಿಯೊಬ್ಬ ವಿದ್ಯಾಥರ್ಿಗಳು ಸರಕಾರಿ ಶಾಲೆಯ ನೌಕರನಾಗಬೇಕು ಎಂಬ ಹಂಬಲ ಇರುತ್ತದೆ ಎಂದು ಕನರ್ಾಟಕ ಸರಕಾರದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಸಂಗನಬಸವ ಕಲ್ಯಾಣ ಮಂಟಪದಲ್ಲಿ ನೆಡೆದ ಡಾ ಸರ್ವಪಲ್ಲಿ ರಾಧಾಕೃಷ್ಣನ್ನ ಅವರ 131 ನೇ ಜನ್ಮ ದಿನಾಚರಣೆಯ ನಿಮಿತ್ಯ ನೆಡೆದ ಶಿಕ್ಷಕರ ದಿನಾಚರಣೆಯ ಉದ್ಘಾಟನೆಯನ್ನು ಮಾಡಿ ಹಾಗೂ ಡಾ ಸರ್ವಪಲ್ಲಿ ರಾಧಾಕೃಷ್ಣನ್ನ ಅವರ ಭಾವಚಿತ್ರಕ್ಕೆ ಫಲ ಪುಪ್ಪ ಸಮಪರ್ಿಸಿ ಮಾತನಾಡಿ ಭಾರತ ದೇಶದಲ್ಲಿ ಯಾವುದಾದರೂ ಉನ್ನತ ಹುದ್ದೆ ಇದ್ದರೆ ಅದು ಶಿಕ್ಷಕರ ಹುದ್ದೆ ಎಂದು ಅಂದಿನ ದಿನಮಾನಗಳಲ್ಲಿ ಡಾ ಸರ್ವಪಲ್ಲಿ ರಾಧಾಕೃಷ್ಣನ್ನ ಹೇಳಿದ ಮಾತಿದು ಎಂದರು. 

        ವ್ಯಕ್ತಿಯ ವ್ಯಕ್ತಿತ್ವವನ್ನು ಇಂಜಿನಿಯರ ಕಟ್ಟಡ ಕಟ್ಟಿದ ನಂತರ, ವೈದ್ಯರು ರೋಗಿಯನ್ನು ನಿರೋಗಿ ಮಾಡಿದಾಗ, ರಾಜಕಾರಣಿ ಪ್ರತಿ ಐದು ವರ್ಷಕ್ಕೊಮ್ಮೆ, ವಿಜ್ಞಾನಿ ಏನ್ನನ್ನಾದರೂ ಸಂಶೋಧನೆ ಮಾಡಿದಾಗ, ಆದರೆ ಅದೆ ಒಬ್ಬ ಶಿಕ್ಷಕನ ವ್ಯಕಿತ್ವವನ್ನು ನಾವು ತಿಳಿಯ ಬೇಕಾದರೆ ಕನಿಷ್ಟ 18 ರಿಂದ 20 ವರ್ಷಬೇಕಾಗುತ್ತದೆ ಆದ್ದರಿಂದ ಶ್ರೇಷ್ಠ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಎಂದರು. 

    ಸಮಾಜದ ಸುಶಿಕ್ಷಿತ, ಚಾರಿತ್ರ್ಯ, ನಡುವಳಿಕೆ, ಸಾಮಾಜಿಕ ಮೌಲ್ಯಗಳು ನಶಿಸಿ ಹೋಗುತ್ತಾ ಇದ್ದೇವೆ ಆದ್ದರಿಂದ ಇಂದಿನ ದಿನಮಾನಗಳಲ್ಲಿ ಆದರ್ಶ ವ್ಯಕ್ತಿತ್ವವನ್ನುವುಳ್ಳ ಶಿಷ್ಯರನ್ನು ತಯಾರ ಮಾಡುವುದು ಶಿಕ್ಷಕನ ಕರ್ತವ್ಯ ಹಾಗೂ ಜವ್ದಾಬಾರಿಯಾಗಿದೆ.          ಪ್ರತಿಯೊಂದು ವಿಷಯವನ್ನು ತೆಗೆದುಕೊಂಡಾಗ ಯಾವ ಜ್ಞಾನ ಯಾರಿಂದ ಬರುತ್ತದೆ ಎಂಬುದು ಗೊತ್ತಾಗುವುದಿಲ್ಲ ಆದರೆ ಒಟ್ಟಾರೆ ಜ್ಞಾನವನ್ನು ನೀಡುವುದು ಗುರುಗಳು ಆದರೆ ಅವರೆಲ್ಲರೂ ಶಿಕ್ಷಕರಾಗಬೇಕೆಂದು ಇಲ್ಲ ಎಂದು ಹೇಳಿದರು.

      ತಾಲೂಕಿನ ಉತ್ತಮ ಶಿಕ್ಷಕರಿಗೆ ಹಾಗೂ ವಯೋನಿವೃತ್ತಿಯನ್ನು ಹೊಂದಿದ ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಯಿತು ಅಲ್ಲದೇ ಗಂಗಮ್ಮ ಬೊಮ್ಮಾಯಿ ಟ್ರಸ್ಟ್ ವತಿಯಿಂದ ಮತ್ತು ಭಾರತ ಸೇವಾ ಸಂಸ್ಥೆಯ ವತಿಯಿಂದ ತಾಲೂಕಿನ ಉತ್ತಮ ಶಿಕ್ಷಕರಿಗೆ ಸನ್ಮಾನಿಸಲಾಯಿತು.

          ಕಾರ್ಯಕ್ರಮದಲ್ಲಿ ತಹಶೀಲ್ದಾರ ಚಂದ್ರಶೇಖರ ಗಾಳಿ, ಕಾರ್ಯನಿವರ್ಾಹಕ ಅಧಿಕಾರಿ ಪ್ರಶಾಂತ ತುರಕಾಣಿ, ಕೆ.ಎಂ.ಎಫ್ ಅಧ್ಯಕ್ಷ ಬಸವರಾಜ ಅರಬಗೊಂಡ, ತಾ.ಪಂ ಅಧ್ಯಕ್ಷೆ ಪಾರವ್ವ ಆರೇರ್, ಎ.ಪಿ.ಎಂ.ಸಿ ಅಧ್ಯಕ್ಷೆ ಪ್ರೇಮಾ ಪಾಟೀಲ, ಜಿ.ಪಂ. ಸದಸ್ಯೆ ಶೋಬಾ ಗಂಜಿಗಟ್ಟಿ, ದೀಪಾ ಅತ್ತಿಗೇರಿ, ದೇವಣ್ಣಾ ಚಾಕಲಬ್ಬಿ, ಶಿವಾನಂದ ಮ್ಯಾಗೇರಿ, ಹಾಗೂ ತಾಲೂಕ ಪಂಚಾಯತ ಮತ್ತು ಪಟ್ಟಣ ಪಂಚಾಯತ ಸದಸ್ಯರು ಹಾಜರಿದ್ದರು.

      ಕಾರ್ಯಕ್ರಮದಲ್ಲಿ ಉಪನ್ಯಾಸವನ್ನು ಕೆ.ಎ.ಬಳಿಗೇರ ನೇರವೇರಿಸಿದರು, ಸ್ವಾಗತವನ್ನು ಐ.ಬಿ.ಬೆನಕೊಪ್ಪ ಹಾಗೂ ನಿರೂಪಣೆಯನ್ನ ನಾಗಪ್ಪ ಬೆಂತೂರ ಮತ್ತು ಕೆ.ಎಸ್.ಚಕ್ರಸಾಲಿ ಶಿಕ್ಷಕರು ನಿರ್ವಹಿಸಿದರು.