ಕಲೆ, ಕಲಾವಿದರನ್ನು ಉಳಿಸಿ, ಬೆಳೆಸುವಲ್ಲಿ ಸಂಘದ ಮಹತ್ತರ ಕಾರ್ಯ: ಶೆಟ್ಟರ

ಧಾರವಾಡ :  ಕರ್ನಾಟಕ ವಿದ್ಯಾವರ್ಧಕ ಸಂಘವು ಕನ್ನಡದ ಗುಡಿ, ಈ ಗುಡಿಯಲ್ಲಿ ಸಾಹಿತ್ಯ, ಸಂಗೀತ, ಕಲೆಗಳ ಪೂಜೆ ದಿನನಿತ್ಯ  ಜರುಗುತ್ತವೆ. 130 ವರ್ಷಗಳಿಂದ ಕರ್ನಾಟಕ ವಿದ್ಯಾವರ್ಧಕ ಸಂಘವು ನಾಡು, ನುಡಿ, ನೆಲ, ಜಲಗಳ ಬಗ್ಗೆ ನಿರಂತರ ಹೋರಾಟ ಮಾಡುತ್ತ ಬಂದಿದೆ.  ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಇದೊಂದು ಮಾದರಿ ಸಂಸ್ಥೆಯಾಗಿದೆ. ಸಂಘದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಒಂದು ವಾರಗಳ ಕಾಲ ವೈವಿಧ್ಯಮಯ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ದೂರ ದೂರದ ಕಲಾವಿದರನ್ನು ಕರೆಸಿ ಅವರ ಕಲೆಯ ಪ್ರದರ್ಶನಕ್ಕೆ ಅವಕಾಶ ಒದಗಿಸಿಕೊಟ್ಟು, ಕಲೆ ಹಾಗೂ ಕಲಾವಿದರನ್ನು ಉಳಿಸಿ, ಬೆಳೆಸುವಲ್ಲಿ ಸಂಘವು ಮಹತ್ತರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಡಾ. ಶಿವಾನಂದ ಶೆಟ್ಟರ ಹೇಳಿದರು.

  ಕರ್ನಾಟಕ ವಿದ್ಯಾವರ್ಧಕ ಸಂಘದ 130 ನೇ ಸಂಸ್ಥಾಪನಾ ದಿನಾಚರಣೆಯ ನಾಲ್ಕನೇ ದಿನ, ಜ್ಞಾನಪೀಠ ಪ್ರಶಸ್ತಿ ವಿಭೂಷಿತ ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ ವೇದಿಕೆಯಲ್ಲಿ ಜರುಗಿದ `ಸಾಂಸ್ಕೃತಿಕ ಸಂಜೆ' ಕಾರ್ಯಕ್ರಮದ ಅತಿಥಿಯಾಗಿ ಅವರು ಮಾತನಾಡುತ್ತಿದ್ದರು. 

ಅಧ್ಯಕ್ಷತೆ ವಹಿಸಿದ್ದ ಧಾರವಾಡ ಕ.ವಿ.ವಿ. ಸಂಗೀತ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಅಗಡಿ ಮಾತನಾಡಿ,  ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೂ ಹಾಗೂ  ಕರ್ನಾಟಕ ವಿಶ್ವವಿದ್ಯಾಲಯಕ್ಕೂ ಅವಿನಾಭಾವ ಸಂಬಂಧವಿದೆ. ನಾವು ವಿಶ್ವವಿದ್ಯಾಲಯಲದಲ್ಲಿ ಕಲಿಸಿದ ಮಕ್ಕಳಿಗೆ ಸಂಘವು ವೇದಿಕೆ ಒದಗಿಸುತ್ತಾ ಅವರ ಆತ್ಮವಿಶ್ವಾಸ ಹೆಚ್ಚಿಸುತ್ತಾ ಅವರು ಪರಿಪೂರ್ಣ ಕಲಾವಿದರಾಗಿ ಹೊರಬರುವಲ್ಲಿ ಪೂರಕವಾಗಿದೆ. ಈ ನಿಟ್ಟಿನಲ್ಲಿ ನಾನೂ ಸಹ ವಿದ್ಯಾಥರ್ಿಯಾಗಿದ್ದಾಗ ಈ  ಸಂಘದ ವೇದಿಕೆಯ ಅವಕಾಶ ಪಡೆದುಕೊಂಡು ಬೆಳೆದಿರುವುದನ್ನು   ಹಾಗೂ ಈ ದಿಶೆಯಲ್ಲಿ ಸಂಘ ಮಾಡುತ್ತಿರುವ ಕಾರ್ಯವನ್ನು ಸ್ಮರಿಸಿಕೊಂಡರು.  

ಸಂಘದ ಹಿರಿಯ ಸದಸ್ಯರಾದ ಪೃಥ್ವಿರಾಜ ತೋರೋಸಾ ಮಿಸ್ಕಿನ್, ಬ್ರಹ್ಮದತ್ತ ರೂಪನಾರಾಯಣ ಮದನ ಹಾಗೂ ತೋಟಪ್ಪ ಚ. ಧಾರವಾಡ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. 

 ಬಿಗ್ಬಾಸ್ ಖ್ಯಾತಿಯ ಸುಮಾ ರಾಜ್ಕುಮಾರ ಅವರು ಮಾತನಾಡುವ ಗೊಂಬೆ ಪ್ರದರ್ಶನ ಹಾಗೂ ಧಾರವಾಡದ ಕು. ಮಧುರಾ ಹಿರೇಮಠ ಸಂಗಡಿಗರು ಸುಗಮ ಸಂಗೀತ ಕಾರ್ಯಕ್ರಮ ನೀಡಿ ನೆರೆದ ಸಭಿಕರ ಮನತಣಿಸಿದರು. ಇದೇ ಸಂದರ್ಭದಲ್ಲಿ ಈ ಇಬ್ಬರು ಕಲಾವಿದರನ್ನು ಸಂಘದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.  

  ವೇದಿಕೆ ಮೇಲೆ ಸಂಘದ ಅಧ್ಯಕ್ಷರಾದ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಉಪಸ್ಥಿತರಿದ್ದರು. ಧಾರವಾಡದ ಗುರುಕೃಪಾ ಸಂಗೀತ ವಿದ್ಯಾಸಂಸ್ಥೆಯ ಸುಪ್ರಿಯಾ ಟಿ. ಭಟ್ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ಗಿರಿಜಾ ಹಿರೇಮಠ, ನಂದಾ ಗುಳೇದಗುಡ್ಡ, ಉಷಾ ಗದಗಿಮಠ ಪ್ರಾರ್ಥನೆ ನಡೆಸಿಕೊಟ್ಟರು. ಸಂಘದ ಉಪಾಧ್ಯಕ್ಷ ನಿಂಗಣ್ಣ ಕುಂಟಿ (ಇಟಗಿ) ಸ್ವಾಗತಿಸಿದರು. ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕಾರಿ ಸಮಿತಿ ಸದಸ್ಯರಾದ ಪ್ರಫುಲ್ಲಾ ನಾಯಕ ಅತಿಥಿಗಳನ್ನು ಪರಿಚಯಿಸಿದರು. ಸತೀಶ ತುರಮರಿ ನಿರ್ವಹಿಸಿ. ವಂದಿಸಿದರು.    

  ಪದಾಧಿಕಾರಿಗಳಾದ ಕೃಷ್ಣ ಜೋಶಿ, ಸದಾನಂದ ಶಿವಳ್ಳಿ, ಕಾ.ಕಾ.ಸಮಿತಿ ಸದಸ್ಯರಾದ  ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಬ. ಹಿರೇಮಠ, ಶಾಂತೇಶ ಗಾಮನಗಟ್ಟಿ ಹಾಗೂ ಚನಬಸಪ್ಪ ಮಸೂತಿ, ಪ್ರಭು ಕೇಶಗೊಂಡ, ಸಿ. ಜಿ. ಹಿರೇಮಠ, ಪಾಸ್ತೆ ಟೀಚರ, ಮಹಾದೇವಿ ದೊಡಮನಿ, ಅಣಜಿ, ಚನಬಸಪ್ಪ ಅವರಾದಿ, ಮಹಾಂತೇಶ ನರೇಗಲ್ಲ, ಬಸವರಾಜ ಸಾಣಿಕೊಪ್ಪ, ಸುಜಾತಾ ಹರಳಹಳ್ಳಿ, ವಿನಾಯಕ ಕಲ್ಲೂರ, ರಾಜೀವಸಿಂಗ ಹಲವಾಯಿ,  ರಾಘವೇಂದ್ರ ಕುಂದಗೋಳ, ರಾಮಚಂದ್ರ ಧೋಂಗಡೆ, ಗಂಗಾಧರ ಗಾಡದ, ಎಸ್. ಎಂ. ರಾಚಯ್ಯನವರ, ಕುಂದರಗಿ, ಘಟ್ನಟ್ಟಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.