ಧಾರವಾಡ : ಶಿರಡಿಯ ಸಾಯಿಬಾಬಾರವರು ನೆನೆದವರ ಪ್ರತಿ ಭಕ್ತರ ಮನ, ಮನೆಯಲ್ಲಿ ನೆಲೆಸಿದ್ದಾರೆ. ಅವರು ಭಕ್ತರಲ್ಲಿ ಬಡವ, ಬಲ್ಲಿದ, ಶ್ರೀಮಂತ ಎಂಬ ಭೇದ ಭಾವ ಎಂದಿಗೂ ಮಾಡಲಿಲ್ಲ. ಜಾತಿ ಧರ್ಮ, ಮತ, ಪಂಥ ಮೀರಿ ಎಲ್ಲರಿಗೂ ಸಮನ್ವಯತೆ ಸಂದೇಶ ಸಾರಿದ ಮಹಾನ್ ಪುಣ್ಯ ಪುರುಷರು. ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿ ನಾವು ನಮ್ಮ ಜೀವನವನ್ನು ಸಾರ್ಥಕ ಮಾಡಿಕೊಳ್ಳೊಣ ಎಂದು ಪ್ರವಚನಕಾರರು ಹಾಗೂ ಯುವ ವಾಘ್ಮೀ ಶ್ರೀಶೈಲ ಸಾಣಿಕೊಪ್ಪ ಹೇಳಿದರು.
ಅವರು ಧಾರವಾಡದ ಕೆಲಗೇರಿ ರಸ್ತೆಯಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಹಮ್ಮಿಕೊಂಡಿರುವ ಎಳು ದಿನಗಳ ಶ್ರೀ ಸಾಯಿ ಸಚ್ಛರಿತ್ರೆ ಪಾರಾಯಣ ಮುಕ್ತಾಯ ಸಮಾರಂಭದಲ್ಲಿ ಆರ್ಶಿವಚನ ನೀಡಿದರು.
ನಾವು ನಮ್ಮ ಹೃದಯವೆಂಬ ಅಂತರಂಗದಲ್ಲಿ ಸಾಯಿ ಬಾಬಾನನ್ನು ಕಾಣೋಣ. ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಅಡಗಿರುವ ಅ????ನ, ಕತ್ತಲು ದೂರ ಸರಿಸಿ, ಪವಾಡ ಪುರುಷರ, ಗುರುವಿನ ಸಾನಿಧ್ಯದಲ್ಲಿ, ಸಾಮೀಪ್ಯದಲ್ಲಿ ಬದುಕು ಕಳೇಯೋಣ. ಇಲ್ಲದ ವಸ್ತು, ಪವಾಡ, ಚಮತ್ಕಾರ ಹುಡುಕಿಕೊಂಡು ಹೋಗುವುದಕ್ಕಿಂತ ಗುರುವಿನ ಸೇವೆ, ಶ್ರವಣ, ಕೀರ್ತನ, ಭಜನೆ ಮಾಡೋಣ, ಕೊನೆಗೆ ಆತ್ಮ ನಿವೇದನೆ ಮಾಡಿಕೊಂಡು ಬದುಕನ್ನು ಸಾರ್ಥಕ ಮಾಡಿಕೊಳ್ಳೋಣ ಎಂದರು.
ನಾವು ದೇವರಿಗೆ ಮೊದಲು ಸೇವೆ ಮಾಡಿ ಜೀವನ ಸಾಕ್ಷಾತ್ಕರ ಮಾಡಿಕೊಳ್ಳೋವುದು ಬಿಟ್ಟು ಅದು ಬೇಕು. ಇದು ಬೇಕು ಎನ್ನುವುದು ಸರಿಯಲ್ಲ. ಇದ್ದುದ್ದರಲ್ಲಿಯೇ ಸಂತೃಪ್ತಿ ಕಾಣುವ ಮನೋಭಾವನೆ ಬೆಳೆಸಿಕೊಳ್ಳೋಣ. ಸಾಯಿ ಬಾಬಾನ ಸನ್ಮಾರ್ಗದಲ್ಲಿ ಸಾಗೋಣ. ಸಾಯಿ ಬಾಬಾರವರ ಜೀವನ ಚರಿತ್ರೆ ನಮಗೆ ಹತ್ತು ಹಲವು ದಿಗ್ಗದರ್ಶನಗಳಿಗೆ ಹೆಬ್ಬಾಗಿಲು. ಅದನ್ನು ಅನುಸರಿಸಲು ಪ್ರಯತ್ನ ಪಡೋಣ ಎಂದರು.
ಮೂವತ್ತಕ್ಕೂ ಹೆಚ್ಚು ಜನ ಸಾಯಿ ಸದ್ಭಕ್ತರು ಎಳು ದಿನಗಳ ಕಾಲ ಪ್ರತಿನಿತ್ಯ ಸಾಯಿ ಸಚ್ಛರಿತ್ರೆ ಪಾರಾಯಣ ಮಾಡಿದ ಹಿನ್ನಲ್ಲೆಯಲ್ಲಿ ಅವರಿಗೆ ಕೊನೆಯ ದಿನ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಮಹೇಶ ಶೆಟ್ಟಿ ಅವರು ಎಲ್ಲ ಸದ್ಭಕ್ತರಿಗೆ ಸಾಯಿಬಾಬಾರವರ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಬಳಿಕ ತುಮಕೂರಿನ ಸಾಯಿರಾಮನ್ ನೃತ್ಯ ಕೇಂದ್ರದ ನಿರ್ದೇಶಕರಾದ ವಿದ್ವಾನ್ ಸಾಗರ ಟಿ.ಎಸ್. ಅವರಿಂದ ಸಾಯಿ ಚರಿತ್ರೆ ನೃತ್ಯ ರೂಪಕ ನಡೆಯಿತು.
ಒಂದೂವರೆ ಗಂಟೆಗೂ ಅಧಿಕ ಕಾಲ ನಡೆದ ನೃತ್ಯ ರೂಪಕ ಸಾಯಿ ಸದ್ಭಕ್ತರ ಮನ ತಣಿಸುವಲ್ಲಿ ಯಶಸ್ವಿಯಾಯಿತು. ಅವರ ಜೀವನದ ಹಾದಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಹೊಸ ಲೋಕವನ್ನೇ ಅನಾವರಣಗೊಳಿಸುವಂತೆ ಮಾಡಿತು. ಕಲಾವಿದರ ಮನೋ??? ಅಭಿನಯಕ್ಕೆ ನೆರೆದಿದ್ದ ಸಾವಿರಾರು ಸಾಯಿ ಸದ್ಭಕ್ತರು ತಲೆ ದೂಗಿದರು.
ಬಳಿಕ ತುಮಕೂರಿನ ವಿದ್ವಾನ್ ಸಾಗರ ಟಿ.ಎಸ್. ಅವರಿಗೆ ಶಿರಡಿ ಸಾಯಿಬಾಬಾ ಸಂಸ್ಥೆಯ ವತಿಯಿಂದ ಸಂಸ್ಥೆಯ ಅಧ್ಯಕ್ಷರಾದ ಮಹೇಶ ಶೆಟ್ಟಿ ಅವರು ಸಾಯಿಬಾಬಾರವರ ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಶಿರಡಿ ಸಾಯಿಬಾಬಾ ಸಂಸ್ಥೆಯ ಕಾರ್ಯದರ್ಶಿ ಗುರುಪಾದಯ್ಯ ಹೊಂಗಲ್ ಮಠ, ಉಪಾಧ್ಯಕ್ಷ ಉದಯ ಶೆಟ್ಟಿ, ಖಜಾಂಚಿ ಕಿರಣ ಶಹಾ, ಉಪಕಾರ್ಯದರ್ಶಿ ನಾರಾಯಣ ಕದಂ, ಸಮಿತಿ ಸದಸ್ಯರಾದ ಟಿ.ಟಿ. ಚವ್ಹಾಣ, ಭಾಸ್ಕರ್ ರಾಯ್ಕರ್, ಸದಸ್ಯರಾದ ಸಂತೋಷ ಮಹಾಲೆ, ಅಮೃತ ನರೇಂದ್ರ, ಪ್ರದೀಪ ಕಕ್ಕಳ, ದಿನೇಶ ಅಡ್ಯಂತಾಯ, ಸಂತೋಷ ಮಿಕ್ಕಲಿ, ರಮೇಶ ನಾರಾಯಣಕರ, ಟಿ,ಟಿ. ಚವ್ಹಾಣ, ಸರೋಜನಿ ಕೊಟಬಾಗಿ, ಭಾಸ್ಕರ ರಾಯ್ಕರ, ಅಮೃತ ನರೇಂದ್ರ, ವಿಪಿನ್ನಂದ ಶೆಟ್ಟಿ, ಶಿವಯೋಗಿ ಬೆಣ್ಣಿ, ವಿಜಯ ಲಾಡ್, ಭಾಸ್ಕರ್ ಮಾನೆ, ಸೌರಭ ಸಳಗಾಂವಕರ್, ರಾಜೇಶ್ವರಿ ನರೇಂದ್ರ, ರತ್ನಾ ನಂದೆಪ್ಪನವರ, ಜಯಶ್ರೀ ಶಿವಪೂಜಿ, ಅನ್ನ ಪ್ರಸಾದ ಸೇವೆ ದಾನಿಗಳಾದ ವೀರನಗೌಡ ಪಾಟೀಲ, ವಾಗೀಶ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.