ಜಗ ಬೆಳಗಿದ ಮಹಾ ಬೆಳಕು ವಿಶ್ವಗುರು ಬಸವಣ್ಣನವರ - ಎಸ ಎಫ್ ಆದಿ

ಜಗ ಬೆಳಗಿದ ಮಹಾ ಬೆಳಕು ವಿಶ್ವಗುರು ಬಸವಣ್ಣನವರ - ಎಸ ಎಫ್ ಆದಿ  The great light that illuminated the world was Vishwaguru Basavanna - S.F. Adi

ಲಕ್ಷ್ಮೇಶ್ವರ  21 : "ಜಗ ಬೆಳಗಿದ ಮಹಾ ಬೆಳಕು ವಿಶ್ವಗುರು ಬಸವೇಶ್ವರರು.12ನೇ ಶತಮಾನದಲ್ಲಿಯೇ ಸಾಮಾಜಿಕ, ರಾಜಕೀಯ, ಧಾರ್ಮಿಕ ಹಾಗೂ ಕಾಯಕ ಕ್ರಾಂತಿಗೆ ನಾಂದಿ ಹಾಡಿದ ಜಗಜ್ಯೊತಿ ಬಸವೇಶ್ವರರು ಜಗತ್ತು ಕಂಡ ಅಪ್ರತಿಮ ಹೋರಾಟಗಾರ, ಸಮಾಜ ಸುಧಾರಕ, ಧಾರ್ಮಿಕ ಗುರು ಹಾಗೂ ಕ್ರಾಂತಿಕಾರಿ" ಎಂದು ಹಿರಿಯ ಸಾಹಿತಿ ಎಸ್‌.ಎಫ್‌.ಆದಿ ಅಭಿಪ್ರಾಯ ಪಟ್ಟರು. ಅವರು ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಎಮ್‌.ಎಸ್‌.ಚಾಕಲಬ್ಬಿ ಅವರ ಸ್ವಗೃಹ ಸನ್ಮಿತ ಸದನದಲ್ಲಿ ಹಮ್ಮಿಕೊಂಡ ಮಾಸದ ಮಾತು ಕಾರ್ಯಕ್ರಮ ಸರಣಿಯ 33ನೇ ಕಾರ್ಯಕ್ರಮ ’ನಾಡಿನ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವೇಶ್ವರ ಜಯಂತಿ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಿದ್ದರು.

ಕಾರ್ಯಕ್ರಮ ಉದ್ಘಾಟಿಸಿದ ಪುರಸಭೆ ಮಾಜಿ ಸದಸ್ಯ ಪ್ರವೀಣ ಬಾಳಿಕಾಯಿ ಮಾತನಾಡಿ "ವಚನಗಳ ಮೂಲಕ ಬಸವಣ್ಣನವರು ಅಂದಿನ ಜಾತಿ ವ್ಯವಸ್ಥೆ, ಮೇಲು,ಕೀಳು,ಬಡವ, ಶ್ರಿ?ಮಂತ,ಅಕ್ಷರಸ್ಥ,ಅನಕ್ಷರಸ್ಥ, ಗಂಡು, ಹೆಣ್ಣು ಎನ್ನುವ ಭೇದ ಭಾವಗಳನ್ನು ತೊಡೆದು ಹಾಕಿ ಸಮಾನತೆ ಸಾರಿದರು. ಎಲ್ಲ ಸಮುದಾಯದ ವ್ಯಕ್ತಿಗಳನ್ನೊಳಗೊಂಡ ಅನುಭವ ಮಂಟಪ ಸ್ಥಾಪಿಸಿದರು. ಇದುವೇ ಜಗತ್ತಿನ ಮೊದಲ ಸಂಸತ್ ಆಗಿದೆ"ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಶ್ರಾಂತ ದೈಹಿಕ ಪರೀವೀಕ್ಷಣಾಧಿಕಾರಿ ಆರ್‌.ಎನ್‌.ಪಂಚಭಾವಿ "ಚಾಕಲಬ್ಬಿ ಅವರ ಮಹಾಮನೆಯಲ್ಲಿ ಬಸವ ಜಯಂತಿ ಕಾರ್ಯಕ್ರಮ ಆಚರಿಸುತ್ತಿರುವುದು ಅರ್ಥಪೂರ್ಣ.

ಏಕೆಂದರೆ 82 ವರ್ಷದ ಶಿವಪುತ್ರ​‍್ಪ ಚಾಕಲಬ್ಬಿ ಇಂದಿಗೂ ಕಾಯಕದಲ್ಲಿಯೇ ದೇವರನ್ನು ಕಾಣುತ್ತಿರುವುದು ಸಮಾಜಕ್ಕೆ ಮಾದರಿಯಾದದು"ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಈಶ್ವರ ಮೆಡ್ಲೇರಿ "ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ 175 ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಸಂಘಟನೆ ಮಾಡಿ ಮತ್ತಷ್ಟು ರಚನಾತ್ಮಕ ಕಾರ್ಯಕ್ರಮವನ್ನು ಯೋಜಿಸಿದೆ. ಇದಕ್ಕೆ ಲಕ್ಷ್ಮೇಶ್ವರ ತಾಲೂಕಾ ಪರಿಸರದ ಸಾಹಿತಿಗಳು,ಸಾಹಿತ್ಯಾಭಿಮಾನಿಗಳು,ಪತ್ರಿಕಾ ವರದಿಗಾರರು ಹಾಗೂ ಕನ್ನಡಾಭಿಮಾನಿಗಳ ಸಹಕಾರ ಹಾಗೂ ಮಾರ್ಗದರ್ಶನವೇ ಮುಖ್ಯ ಕಾರಣ" ಎಂದು ಸ್ಮರಿಸಿದರು.ಕಾರ್ಯಕ್ರಮದ ಉದ್ಘಾಟಕರಲ್ಲೊಬ್ಬರಾದ ಹಿರಿಯ ಕಾಯಕ ಜೀವಿ ಶಿವಪುತ್ರ​‍್ಪ ಚಾಕಲಬ್ಬಿ, ಉಪನ್ಯಾಸ ನೀಡಿದ ಹಿರಿಯ ಸಾಹಿತಿ ಎಸ್‌.ಎಫ್‌.ಆದಿ, ವಿಶ್ರಾಂತ ಶಿಕ್ಷಕಿ ಎಸ್‌.ಎಂ. ಹಾಳದೋಟದ ರವರನ್ನು ಸನ್ಮಾನಿಸಲಾಯಿತು.

ಕು. ಶ್ರೀನಿಧಿ ಶಂಕರ ಶಿಳ್ಳಿನ, ವಿಶ್ರಾಂತ ಶಿಕ್ಷಕ ವಿ.ಎಂ. ಹೂಗಾರ ಬಸವೇಶ್ವರರ ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಆತಿಥೇಯರಾದ ರೇಣುಕಾ ಮಂಜುನಾಥ್ ಚಾಕಲಬ್ಬಿ, ವಿಶ್ರಾಂತ ಶಿಕ್ಷಕ ಕೆ.ಓ.ಹೂಲಿಕಟ್ಟಿ, ಸಂಸ್ಕೃತಿ ಚಿಂತಕ ರಮೇಶ ಹಾಳದೋಟದ, ಹಿರಿಯರಾದ ನಿಂಗಪ್ಪ ಕಲ್ಯಾಣಿ, ನಿವೃತ್ತ ನಿರ್ವಾಹಕ ನಾಗಪ್ಪ ಅಂಗಡಿ, ಎ.ಪಿ.ಎಂ.ಸಿ ಕಾರ್ಯದರ್ಶಿ ವಿ.ಡಿ.ಪಾಟೀಲ, ವಿಶ್ರಾಂತ ಶಿಕ್ಷಕ ಎಂ.ಎಸ್‌.ಕೊಟಗಿ ಉಪಸ್ಥಿತರಿದ್ದರು. ಶ್ರೀಮತಿ ರೇಣುಕಾ ಮಂಜುನಾಥ ಚಾಕಲಬ್ಬಿ ಪ್ರಾರ್ಥಿಸಿದರು. ಕ.ಸಾ.ಪ ಸಲಹಾ ಸಮಿತಿಯ ಎಸ್‌.ಬಿ.ಅಣ್ಣಿಗೇರಿ ಸ್ವಾಗತಿಸಿದರು. ಕ.ಸಾ.ಪ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿ ವಂದಿಸಿದರು. ಸಂಘಟನಾ ಕಾರ್ಯದರ್ಶಿ, ನಾಗರಾಜ ಮಜ್ಜಿಗುಡ್ಡ,ಪದಾಧಿಕಾರಿ ಶಂಕರ ಶಿಳ್ಳಿನ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು.