ವಿಜೃಂಭಣೆಯಿಂದ ನಡೆದ ವಿದ್ಯಾಸಿಂಧು ಮಾಧವ ತೀರ್ಥರ ಶೋಭಾಯಾತ್ರೆ
The grand procession of Vidyasindhu Madhava Tirtha
ಬಳ್ಳಾರಿ 10 : ನಗರದ ಪ್ರಮುಖ ಬೀದಿಗಳಲ್ಲಿ ಪರಮಪೂಜ್ಯ 108 ವಿದ್ಯಾಸಿಂಧು ಮಾಧವ ತೀರ್ಥರ 11ನೇ ಚಾತುರ್ಮಾಸ ವ್ರತದ ಪ್ರಯುಕ್ತ ಶನಿವಾರ ಸಂಜೆ ಶೋಭಾಯಾತ್ರೆ ಹಾಗೂ ಮೆರವಣಿಗೆ ಮಂಗಳವಾದ್ಯಗಳೊಂದಿಗೆ ವಿಜೃಂಭಣೆಯಿಂದ ನಡೆಯಿತು. ಶೋಭಾಯಾತ್ರೆಯಲ್ಲಿ ಲಕ್ಷ್ಮೀನಾರಾಯಣ ದೇವಾಲಯದ ಆಡಳಿತಾಧಿಕಾರಿ ಪಾಂಡುರಂಗ ಹಾಗೂ ಪ್ರಧಾನ ಅರ್ಚಕರಾದ ಸುಧೀಂದ್ರ ಆಚಾರ್ಯ, ಸುಶೀಲೇಂದ್ರ ಆಚಾರ್ಯ, ಸುಬ್ರಹ್ಮಣ್ಯ ಆಚಾರ್ಯ, ಅನಿಲ್ ಜೋಶಿ, ಬಿಂದು ಮಾಧವ ರಾವ್, ಬಜಾರ್ ಹರಿಪ್ರಸಾದ್, ರಮೇಶ್ ರಾವ್ ಕುಲಕರ್ಣಿ, ಕೃಷ್ಣ ಆಚಾರ್ಯ, ವಿಠ್ಠಲ, ಅಜಿತ್ ಕುಮಾರ್, ಪಾಂಡುರಂಗ ಆಚಾರ್ಯ, ಅನಂತಪದ್ಮನಾಭ, ರಘುನಂದನ, ಮಧುರನಾಥ್, ಎಸ್.ಕೆ. ಸುಧೀ ಹಾಗೂ ಸುಮ್ಮಾ ಸುಧೀಂದ್ರ, ಅರುಣ್ ಸುಶೀಲೇಂದ್ರ, ಅಂಬುಜಾ, ವಿದ್ಯಾ ಸೇರಿದಂತೆ ಭಜನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಮಂಗಳವಾದ್ಯಗಳ ನಾದದೊಂದಿಗೆ ನಡೆದ ಮೆರವಣಿಗೆಯಲ್ಲಿ ಭಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 