ವಿಜೃಂಭಣೆಯಿಂದ ಜರುಗಿದ ಶ್ರೀಮಾನ್ ದೇವಿಯ ಮಹಾ ರಥೋತ್ಸವ
The grand chariot festival of Sriman Devi was celebrated with great pomp and show.
ತಾಳಿಕೋಟೆ 04: ತಾಲ್ಲೂಕಿನ ಗೋಟಖಂಡ್ಕಿ ಗ್ರಾಮದಲ್ಲಿ ಶ್ರೀಮನ್ ದೇವಿಯ 162ನೆಯ ಮಹಾಪುರಾಣ ಮಹಾಮಂಗಲ ಹಾಗೂ ಮಹಿಳೆಯರಿಂದಲೇ ಎಳೆಯಲ್ಪಡುವ ಶ್ರೀಮನ್ ದೇವಿಯ ರಥೋತ್ಸವವು ಭಕ್ತಿ, ಶ್ರದ್ಧೆ, ಸಡಗರ ಸಂಭ್ರಮಗಳಿಂದ ಸೋಮವಾರ ಸಂಜೆ ಜರುಗಿತು.ಭಾನುವಾರದಿಂದಲೇ ದೇವಸ್ಥಾನದವರೆಗೆ ದೀಡನಮಸ್ಕಾರ ಹಾಕುವ, ಎಡೆ,ಕಾಯಿ ಕಪೂರ ಅರ್ಪಿಸುವ, ಉಡಿ ತುಂಬುವ ಭಕ್ತ ಜನರಿಂದಾಗಿ ದೇವಸ್ಥಾನದ ಆವರಣ ತುಂಬಿತುಳುಕುತ್ತಿತ್ತು.ಗ್ರಾಮದಿಂದ ಮದುವೆಯಾಗಿ ಗಂಡನ ಮನೆಗೆ ಹೋದ ಮಹಿಳೆಯರೇ ಸೇರಿ ತವರುಮನೆಗೆ ಒಳಿತು ಬಯಸಿ ತಮ್ಮ ಶಕ್ತ್ಯಾನುಸಾರ 2003ರಲ್ಲಿ ಸು.2.50ಲಕ್ಷ ರೂಪಾಯಿಗಳನ್ನು ಸೇರಿಸಿ ತೇರಿನ ಮನೆ ಹಾಗೂ ತೇರನ್ನು ನಿರ್ಮಿಸಿದರು. ಇದರಿಂದ ಮಹಿಳೆಯರು ನಿರ್ಮಿಸಿದ ರಥವನ್ನು ಮಹಿಳೆಯರೇ ಎಳೆದರೆ ಇನ್ನೂ ಸೌಭಾಗ್ಯ ಹೆಚ್ಚುತ್ತದೆಂದು ಹಿರಿಯರೆಲ್ಲ ಸೇರಿ ಮಹಿಳೆಯರಿಗೇ ರಥ ಎಳೆಯುವ ಅಧಿಕಾರ ನೀಡಿದರು. ಹೀಗೆ ಪುರುಷರನ್ನು ಬದಿಗಿರಿಸಿ ರಥ ಎಳೆಯುವ ಬಲ ತಂದುಕೊಂಡಿದ್ದು ಅವರೇ. ಅಂದಿನಿಂದ ಪ್ರತಿವರ್ಷ ಕಾರ್ತಿಕ ಶುದ್ಧ ತ್ರಯೋದಶಿಯಂದು ಗ್ರಾಮದಲ್ಲಿ ಹುಟ್ಟಿ ಮದುವೆಯಾಗಿ ಹೋದ ಹೆಣ್ಣು ಮಕ್ಕಳಿಗೆ ರಥದ ಹಗ್ಗ ಹಿಡಿಯುವಲ್ಲಿ ಅಗ್ರಸ್ಥಾನ ದೊರೆಯಿತು.
ಗ್ರಾಮದ ಸಚ್ಚಿದಾನಂದ ಮಠದಿಂದ ಸುಮಾರು ಒಂದು ಕಿಮೀ ದೂರದ ಪಾದಗಟ್ಟೆವರೆಗೆ ರಥವನ್ನು ಹರ್ಷೋದ್ಘಾರಗಳ ಮಧ್ಯೆ ಎಳೆಯಲಾಯಿತು. ರಥೋತ್ಸವ ನಂತರ ದೇವಸ್ಥಾನದಲ್ಲಿ ದೇವಿಗೆ ಮಹಾಮಂಗಳಾರತಿ, ಪೂಜಾ ಕಾರ್ಯ ಜರುಗಿದವು. ಜಾತ್ರೋತ್ಸವದಂಗವಾಗಿ ಭಾನುವಾರ ಬೆಳಿಗ್ಗೆ ಗಂಗಸ್ಥಳ, ಮಧ್ಯಾಹ್ನ ಮಹಾಪ್ರಸಾದ ಹಾಗೂ ರಾತ್ರಿ ಅಖಂಡ ಭಜನಾ ಕಾರ್ಯಕ್ರಮವು ಸುತ್ತಲಿನ ಗ್ರಾಮಗಳಿಂದ ಆಗಮಿಸುವ ಭಕ್ತಾದಿಗಳಿಂದ ಜರುಗಿತು. ಭಾನುವಾರ ಭಂಟನೂರ ಗ್ರಾಮದ ರೇವಣಸಿದ್ಧಪ್ಪ ಪೂಜಾರಿ ಅವರ ಮನೆಯಿಂದ ತುಪ್ಪದ ಗಡಿಗೆ ಹಾಗೂ ರಥದ ಕಳಸವನ್ನು ತುಂಬಗಿಯ ಸಂಗನಗೌಡರ ಮನೆಯಿಂದ ತಂದ ಮಿಣಿ(ತೇರು ಎಳೆಯುವ ಹಗ್ಗ)ಯನ್ನು ವಿಜೃಂಭಣೆಯಿಂದ ಮೆರವಣಿಗೆಯಲ್ಲಿ ತರಲಾಯಿತು.
ನಂತರ ಮಹಾಪ್ರಸಾದಕ್ಕೆ ಚಾಲನೆ ದೊರೆಯಿತು.ಸೋಮವಾರ ಬೆಳಿಗ್ಗೆ 8.00 ರಿಂದ ಶ್ರೀಮನ್ ಮಹಾದೇವಿಯ ಬೆಳ್ಳಿಮೂರ್ತಿಯ ಮೆರವಣಿಗೆಯು ಕುಂಭ,ಕಳಸ, ಸಕಲ ವಾದ್ಯ ವೈಭವಗಳೊಂದಿಗೆ ಜರುಗಿತು.ನರಗುಂದ ತಾಲ್ಲೂಕು ಕೊಣ್ಣೂರ ಗ್ರಾಮದ ರಾಯಣ್ಣ ಮಹಿಳಾ ಕಲಾತಂಡದಿಂದ ಡೊಳ್ಳಿನ ಕುಣಿತ ಹಾಗೂ ನೂಲಿಯ ಚಂದಯ್ಯ ಮಮದಾಪುರ ಅವರಿಂದ ಗೊಂಬೆ ಕುಣಿತದೊಂದಿಗೆ ಆನೆ ಅಂಬಾರಿ ಉತ್ಸವ ನಡೆಯಿತು. ಸಂಜೆ ಭಂಟನೂರ ಗ್ರಾಮದಿಂದ ತೇರಿನ ಕಳಸ ಆಗಮನದೊಂದಿಗೆ ಮುತ್ತೈದೆ ಹೆಣ್ಣುಮಕ್ಕಳಿಂದ ಮಹಾರಥೋತ್ಸವ ಜರುಗಿತು.ರಥೋತ್ಸವ ನಂತರ ದೇವಸ್ಥಾನದಲ್ಲಿ ದೇವಿಗೆ ಮಹಾಮಂಗಳಾರತಿ, ಪೂಜಾ ಕಾರ್ಯ ಜರುಗಿದವು.ಉತ್ಸವದಲ್ಲಿ ನಾವದಗಿ ಶ್ರೀ, ಪ್ರವಚನಕಾರ ಗಾಂಗೇಯಪಿತ ಸ್ವಾಮೀಜಿ, ರಾಮನಗೌಡ ಶರಣರು, ಗ್ರಾಮದ ಪ್ರಮುಖರು ಸೇರಿದಂತೆ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡಿದ್ದರು..ಅದೇದಿನ ನ.3 ರಂದು ರಾತ್ರಿ 10.00 ಗಂಟೆಗೆ ಶ್ರೀಸಚ್ಚಿದಾನಂದ ನವತರುಣ ಸಂಘ ಗೋಟಖಂಡ್ಕಿ ಅವರಿಂದ “ಕಲಿಯುಗದಲ್ಲಿ ಗರ್ಜಿಸಿದ ಕರ್ಣಾರ್ಜುನ” ಅರ್ಥಾತ್ ಒಡಹುಟ್ಟಿದವರು” ಎಂಬ ಸಾಮಾಜಿಕ ನಾಟಕವನ್ನು ಅಭಿನಯಿಸಿದರು.ನ.7ರಂದು ಶುಕ್ರವಾರ ಸಂಜೆ ಕಳಸ ಇಳಿಸುವ ಕಾರ್ಯಕ್ರಮ ಜರುಗುವುದು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 