ಸರ್ಕಾರಿ ನೌಕರರ ಸಂಘಟನೆ ಶಕ್ತಿಯುತಯುತ ಸಂಘಟನೆ ಶಾಸಕ ಬಸವರಾಜ ಶಿವಣ್ಣನವರ
ಬ್ಯಾಡಗಿ. 22 : ರೈತರು ಎಷ್ಟೇ ಹೋರಾಟ ನಡೆಸಿದರು ಅವರ ಬೇಡಿಕೆ ಈಡೇರಿಸುವುದು ಬಹಳ ಕಡಿಮೆ ಆದರೆ ಸರ್ಕಾರಿ ನೌಕರರು ಬೇಡಿಕೆಗಾಗಿ ಮುಷ್ಕರಕ್ಕೆ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಸರ್ಕಾರ ಮಾತುಕತೆಗೆ ಆಹ್ವಾನಿಸುತ್ತದೆ ಅಂತ ಸಂಘಟನೆ ಸರ್ಕಾರ ನೌಕರಿ ನೌಕರರ ಸಂಘಟನೆ ಎಂದು ಶಾಸಕ ಬಸವರಾಜ್ ಶಿವಣ್ಣನವರು ಹೇಳಿದರು. ಪಟ್ಟಣದ ಬೀರೇಶ್ವರ ಸಮುದಾಯ ಭವನದಲ್ಲಿ ಇಂದು ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ನಿವೃತ್ತ ನೌಕರರ ಸನ್ಮಾನ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದವರು. ಸರ್ಕಾರದ ಯೋಜನೆ ಯಶಸ್ವಿಯಾಗಬೇಕಾದರೆ ಸರ್ಕಾರಿ ನೌಕರರಿಂದ ಮಾತ್ರ ಸಾಧ್ಯ ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಬಂದಾಗ ಅವರನ್ನು ಅಲೆದಾಡಿಸದೆ ನಿಷ್ಠೆಯಿಂದ ಕೆಲಸ ಮಾಡಿಕೊಡಿ ಎಂದು ಸೂಚಿಸಿದರು . ಸರ್ಕಾರ ಏಳನೇ ವೇತನ ಜಾರಿಗೊಳಿಸಿದೆ ಇದಕ್ಕೆ ಪ್ರತಿಯಾಗಿ ನೌಕರು ಕರ್ತವ್ಯದಲ್ಲಿ ದಕ್ಷತೆ ಹೆಚ್ಚಿಸಿಕೊಳ್ಳಬೇಕು ಸರ್ಕಾರಿ ಯೋಜನೆ ಸೌಲಭ್ಯ ಸೌಕರ್ಯಗಳನ್ನು ಅರ್ಹರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು. ಜಿಲ್ಲಾ ಅಧ್ಯಕ್ಷ ಮಲ್ಲೇಶ್ ಕರಿಗಾರ್ ಮಾತನಾಡಿ ಸರ್ಕಾರಿ ನೌಕರರು ಗುಣಮಟ್ಟದ ಕೆಲಸವನ್ನು ಮಾಡುತ್ತಿದ್ದು ಸರ್ಕಾರದ ಮಟ್ಟದಲ್ಲಿ ಇರುವ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನೌಕರರ ಹಿತ ಕಾಪಾಡುವ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ನೋಡಿಕೊಳ್ಳಲು ಸಾಧ್ಯವಾಗುತ್ತದೆ ಹಾಗಾಗಿ ಸರ್ಕಾರವು ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಬರಿಸುವ ಕೆಲಸ ಮಾಡಬೇಕು ಎಂದು ವಿನಂತಿಸಿದರು.ನೂತನ ತಾಲೂಕಾಧ್ಯಕ್ಷರಾದ ಮಾಲತೇಶ್ ಕಂಬಳಿ ಮಾತನಾಡಿ ತಾಲೂಕಿನಲ್ಲಿ ಈಗಾಗಲೇ ಸರ್ಕಾರಿ ನೌಕರರ ಕಟ್ಟಡ ಹಳೆಯದಾಗಿದ್ದು ನೂತನ ಕಟ್ಟಡಕ್ಕೆ ಸರ್ಕಾರದಿಂದ ಅನುದಾನವನ್ನು ಕೊಡಿಸಬೇಕೆಂದು ಶಾಸಕರಿಗೆ ವಿನಂತಿಸಿದರು ಮತ್ತು ತಾಲೂಕು ಸರ್ಕಾರಿ ನೌಕರ ಸಂಘದ ನೌಕರರ ಹಿತಾಸಕ್ತಿ ಕಾಪಾಡಲು ಮತ್ತು ಅವರ ಸಮಸ್ಯೆಗಳನ್ನು ಶೀಘ್ರ ಪರಿಹಾರ ಹುಡುಕಲು ಸದಾ ಶ್ರಮಿಸಲಾಗುವುದು ಎಂದು ಹೇಳಿದರು.ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರವನ್ನು ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಿತು ಮತ್ತು ನಿವೃತ್ತ ನೌಕರರಿಗೆ ಹಾಗೂ ಸಾಧನೆ ಮಾಡಿದ ನೌಕರರಿಗೆ ಸನ್ಮಾನವು ನಡೆಯಿತು ಇದೆ ವೇಳೆ ನೂತನ ನಾಮಫಲವನ್ನು ಉದ್ಘಾಟಿಸಲಾಯಿತು.ಈ ಸಂದರ್ಭದಲ್ಲಿ ರಾಜ್ಯ ಗ್ಯಾರಂಟಿ ಉಪಾಧ್ಯಕ್ಷ ಎಸ್ ಆರ್ ಪಾಟೀಲ, ತಹಶೀಲ್ದಾರ್ ಫಿರೋಜ್ ಷಾ ಸೋಮನಕಟ್ಟಿ ,ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ ಎಂ ಮಲ್ಲಿಕಾರ್ಜುನ, ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ, ನೌಕರ ಸಂಘದ ಗೌರವಾಧ್ಯಕ್ಷ ಪ್ರಕಾಶ್ ಹಿರೇಮಠ, ರಾಜ್ಯ ಪರಿಷತ್ ಸದಸ್ಯ ಮಾಲತೇಶ್ ಚಳಗೇರಿ, ಕಾರ್ಯದರ್ಶಿ ಗುರುರಾಜ ಚಂದ್ರ ಕೇರಿ, ಖಜಾಂಚಿ ವಿಶ್ವನಾಥ್ ಜಮುನಾಳ, ಸದಸ್ಯರಾದ ನಾಗರಾಜ್ ಬನ್ನಿಹಟ್ಟಿ.ಪೋಟೆರ. ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಜಿ ಕೋಟಿ, ಕೋರ್ಟ್ ಶಿರಸ್ತೇದಾರ್ ಜನಾರ್ದನ ಬಾರ್ಕಿ,ಮುಖಂಡ ದುರ್ಗೆಶ ಗೋಣೆಮ್ಮನವರ, ತಾಲೂಕಿನ ಎಲ್ಲಾ ನೌಕರರ ಸಂಘದ ನೂತನ ಪದಾಧಿಕಾರಿಗಳು ಮತ್ತು ಸದಸ್ಯರು ಮತ್ತು ನಿವೃತ್ತ ನೌಕರರು ಉಪಸ್ಥಿತರಿದ್ದರು.