ಜಿನ್ನಾ ಸಮಾಧಿ ಮೇಲಿನ ಸುವರ್ಣಾಕ್ಷರ : ಮೋದಿಗೆ ಟಿಎಂಸಿ ತಿರುಗೇಟು

ನವದೆಹಲಿ, ಡಿ11 :     ರಾಜ್ಯಸಭೆಯಲ್ಲಿ  ಪೌರತ್ವ ಮಸೂದೆ ಕುರಿತು ಚರ್ಚೆ ಕುರಿಯ ಬಿಸಿ, ಬಿಸಿ ಚರ್ಚೆ ಶರುವಾಗಿದೆ ಈ ಮಸೂದೆ ಭಾರತದ ಸಂವಿಧಾನದ ಮೇಲಿನ   ಅತಿದೊಡ್ಡ ಆಕ್ರಮಣ  ಎಂದು ಪ್ರತಿಪಕ್ಷಗಳು ಕಟು ಟೀಕೆ ಮಾಡಿವೆ.  

ಮಸೂದೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ತೃಣಮೂಲ ಕಾಂಗ್ರೆಸ್ ನ ಡೆರೆಕ್ ಒ'ಬ್ರಿಯಾನ್ ತೀವ್ರ ವಾಗ್ದಾಳಿ ನಡೆಸಿ 'ಇದನ್ನು ಸುವರಣಾಕ್ಷರದಲ್ಲಿ  ಬರೆದಿಡುವಂತಹದ್ದು   ಎಂದು ಪ್ರಧಾನಿ ಹೇಳಿರುವುದನ್ನು ನಾನು ಓದಿದ್ದೇನೆ, ಕೇಳಿದ್ದೇನೆ ಎಂದರು.   

ಅದನ್ನು ಎಲ್ಲಿ ಬರೆಯಲಾಗಿದೆ, ಬರೆಯಬಹುದು ಎಂದು ನಾನು ಸದನಕ್ಕೆ ಹೇಳುತ್ತೇನೆ   ರಾಷ್ಟ್ರಪಿತನ   ಸಮಾಧಿಯ ಮೇಲೆ ಬರೆಯಲಾಗುವುದು, ಆದರೆ ಯಾವ ರಾಷ್ಟ್ರಪಿತ ಗೊತ್ತೆ?  ಕರಾಚಿಯಲ್ಲಿ ಇರುವ , ಪಾಕ್ ಸಂಸ್ಥಾಪಕ  ಜಿನ್ನಾ ಸಮಾಧಿಯ ಮೇಲೆ 'ಎಂದು ಅವರು ಹೇಳಿದರು. 

 ಈ  ಕುರಿತು  ಸಂಸದರಿಗೆ ತಿಳಿ ಹೇಳಿದ್ದ  ಮೋದಿ  ಅವರು ಸಂಸದೀಯ ಸಭೆಯಲ್ಲಿ ಮಸೂದೆ  ನಿಜವಾಗಿಯೂ   ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹದ್ದು ಎಂದೂ ಹೇಳಿದ್ದರು ಇದಕ್ಕೆ  ಟಿಎಂ ಸಿ ನಾಯಕ ಡೆರೆಕ್ ಈ ರೀತಿ  ತಿರುಗೇಟು ನೀಡಿದ್ದಾರೆ.