ಬೆಂಗಳೂರು,ಜ 31,ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ವಿಧಾನ ಪರಿಷತ್ ಅಧ್ಯಕ್ಷ ಪ್ರತಾಪ್ ಚಂದ್ರ ಶೆಟ್ಟಿ ಅವರು ರಾಜ್ಯಪಾಲರ ಭಾಷಣಕ್ಕೆ ವಿರುದ್ಧವಾಗಿ ಮಾತನಾಡುವುದನ್ನು ವಿರೋಧಿಸಲು ಆಜ್ಞೆಯನ್ನು ಹೊರಡಿಸುವ ಹಕ್ಕನ್ನು ಹೊಂದಿಲ್ಲ. ಅವರು ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.
ಜಂಟಿ ಅಧಿವೇಶನದ ವೇಳೆ ರಾಜ್ಯಪಾಲರ ಭಾಷಣಕ್ಕೆ ಯಾವುದೇ ಸದಸ್ಯರು ಅಡ್ಡಿಪಡಿಸುವುದು ಇಲ್ಲವೇ ಕ್ರಿಯಾಲೋಪ ಎತ್ತಿದರೆ ಅಂತಹ ಸದಸ್ಯರನ್ನು ಅಮಾನತುಪಡಿಸುವುದಾಗಿ ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಹೊರಡಿಸಿರುವ ಅಧಿಸೂಚನೆಗೆ ಕಿಡಿಕಾರಿದ ಅವರು, ಕಳೆದ 6 ವರ್ಷಗಳಿಂದ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅವರು ನೀಡಿದ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದರೆ, ನಾವು ಆದರ್ಶ ಸಮಾಜವನ್ನು ನೋಡಬೇಕಿತ್ತು. ಆದರೆ ಬಿಜೆಪಿ ಒಂದು ಶತಕೋಟಿ ಜನರ ಕನಸುಗಳನ್ನು ಚೂರುಚೂರು ಮಾಡಿದೆ. ಅವರ ಸ್ವರ್ಗದ ಕನಸು ಈಗ ನರಕಕ್ಕೆ ತಿರುಗಿದೆ. ಯುವಕರು ನಿರುದ್ಯೋಗಿಗಳು, ಬೆಲೆಗಳು ಗಗನಕ್ಕೇರಿವೆ, ಜಿಡಿಪಿ ಬೆಳವಣಿಗೆ ಕುಸಿಯುತ್ತಿದೆ, ರಫ್ತು ಕುಸಿದಿದೆ ಎಂದು ಟೀಕಿಸಿದರು.ಸಂಘ ಪರಿವಾರದ ಗಾಂಧೀಜಿಯನ್ನು ಕೊಂದರು. ಈಗ ಅದೇ ಸಂಘ ಪರಿವಾರದಿಂದ, ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ ಪ್ರತಿಭಟನಕಾರರ ಮೇಲೆ ಗೂಂಡಾ ಗುಂಡು ಹಾರಿಸಿದ್ದು ಏಕೆ? ಎಂದು ಟ್ವಿಟ್ಟರ್‌ನಲ್ಲಿ ಪ್ರಶ್ನಿಸಿದ್ದಾರೆ.