ಮಹಿಳೆಗೆ ನೀಡಿದ ಸ್ವಾತಂತ್ರ್ಯದಿಂದ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆ ಬರಬಾರದು: ಡಾ. ಸ್ಪೂರ್ತಿ ಮಾಸ್ತಿಹೊಳಿ

ಮಹಿಳೆಗೆ ನೀಡಿದ ಸ್ವಾತಂತ್ರ್ಯದಿಂದ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆ ಬರಬಾರದು: ಡಾ. ಸ್ಪೂರ್ತಿ ಮಾಸ್ತಿಹೊಳಿ The freedom given to women should not harm the family system: Dr. Spurthi Mastiholi

 ಬೆಳಗಾವಿ: ಮಹಿಳೆಗೆ ನೀಡಿದ ಸ್ವಾತಂತ್ರ್ಯದ ವಾಸ್ತವಿಕತೆಯನ್ನು ಅರ್ಥಮಾಡಿಕೊಳ್ಳಬೇಕು ಮತ್ತು ಈ ಸ್ವಾತಂತ್ರ್ಯದಿಂದ ಯಾವ ಕಾರಣಕ್ಕೂ ಕೌಟುಂಬಿಕ ವ್ಯವಸ್ಥೆಗೆ ಧಕ್ಕೆ ಬಾರದಂತಿರಬೇಕು ಎಂದು ಡಾ.ಸ್ಪೂರ್ತಿ ಮಾಸ್ತಿ ಹೊಳಿ ಅಭಿಪ್ರಾಯ ಪಟ್ಟರು.  ಅವರು ಜಾಗತಿಕ ಲಿಂಗಾಯಿತ ಮಹಾಸಭಾ ವತಿಯಿಂದ ಏರಿ​‍್ಡಸಲಾಗಿದ್ದ ಮಾಸಿಕ ಅನುಭಾವ ಗೊಷ್ಟಿಯಲ್ಲಿ ವಿಶೇಷ ಉಪನ್ಯಾಸ ನೀಡಿದರು.  

ಮಹಿಳೆಗೆ ನೀಡಿದ ಸ್ವಾತಂತ್ರ್ಯ ದುರುಪಯೋಗವಾಗುತ್ತಿರುವುದು ಹಲವು ಸಂದರ್ಭಗಳಲ್ಲಿ ಕಂಡು ಬರುತ್ತದೆ ಹಾಗಾಗಬಾರದು. ಸಂಪೂರ್ಣ ಕುಟುಂಬದ ಆರೋಗ್ಯವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿ ತನ್ನ ಮೇಲಿದೆ ಎಂಬುದನ್ನು ಮಹಿಳೆ ಎಂದಿಗೂ ಮರೆಯಬಾರದು. ಪಾಲಕರು ಈ ಕುರಿತು ತಮ್ಮ ಮಕ್ಕಳಿಗೆ ಹೆಣ್ಣು ಮಕ್ಕಳಿಗೆ ಆಗಲಿ ಗಂಡು ಮಕ್ಕಳಾಗಲಿ ಅವರಿಗೆ ಅವರವರ ಜವಾಬ್ದಾರಿ ಕುರಿತು ಸರಿಯಾಗಿ ಕಲಿಸಿ ಕೊಡಬೇಕು.

ಸಂಸಾರದಲ್ಲಿ ಹೊಂದಾಣಿಕೆ ಮಹತ್ವವನ್ನು ತಿಳಿಸಿಕೊಡಬೇಕು ಹೆಣ್ಣು ಮಗಳು ಮತ್ತು ಸೊಸೆ ಇಬ್ಬರನ್ನು ಒಂದೇ ರೀತಿಯಲ್ಲಿ ಕಾಣುವ ಪರಿಪಾಠವನ್ನು ಪಾಲಕರು ಬೆಳೆಸಿಕೊಳ್ಳಬೇಕು. ಇಂದು ಅತ್ಯಂತ ಕ್ಷುಲ್ಲಕ ಕಾರಣಗಳಿಗಾಗಿ ವಿಚ್ಛೇದನೆ ನಡೆಯುತ್ತಿರುವುದು ದುರ್ದೈವ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇದೆ ಅದನ್ನು ಸಂವಾದದ ಮೂಲಕ ಪರಿಹರಿಸಿಕೊಳ್ಳಬೇಕಿದೆ ಹೊಂದಾಣಿಕೆ ಮೂಲಕ ಪರಿಹಾರ ಕಂಡುಕೊಳ್ಳಬೇಕಿದೆ ಆಗ ಮಾತ್ರ ಸುಖಮಯ ಜೀವನ ಸಾಧ್ಯ.   

ದೈಹಿಕವಾಗಿ ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಆರೋಗ್ಯಕರವಾಗಿ ಇರಬೇಕು ಎಂದರೆ ಅದಕ್ಕೆ ನಮ್ಮ ನಡೆ ನುಡಿಗಳು ಬಹಳ ಮುಖ್ಯವಾಗುತ್ತವೆ ಸಂವಹನ ಪರಸ್ಪರ ಗೌರವ ಬಹಳ ಮುಖ್ಯ ಜಗತ್ತಿನ 66ಅ ಜನ ಒಂಟಿತನದಿಂದ ಬಳಲುತ್ತಾರೆ ಎಂಬುದು ಇತ್ತೀಚಿಗೆ ನಡೆದ ಸಮೀಕ್ಷೆಯಿಂದ ಬೆಳಕಿಗೆ ಬಂದಿದೆ ಅದಕ್ಕೆ ಕಾರಣ ನಮ್ಮ ನಡೆ ನುಡಿ ಮತ್ತು ಸಂವಹನದ ಕೊರತೆ ಕಾರಣ, ಒಳ್ಳೆಯದನ್ನು ಬಯಸುವುದಾದರೆ ಒಳ್ಳೆಯದನ್ನು ನೀಡಬೇಕಾಗುತ್ತದೆ ಎಂದರು.  

ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಲಿಂಗಾಯತ ಧರ್ಮಕ್ಕೆ “ಸ್ವತಂತ್ರ ಧರ್ಮದ ಮಾನ್ಯತೆ “ಸಿಕ್ಕೇ ಸಿಗುತ್ತದೆ ಇದರಲ್ಲಿ ಸಂಶಯ ಬೇಡ ಎಂದರು ಮುಂಬರುವ ಬಸವ ಜಯಂತಿ ಅಂಗವಾಗಿ ಎರಡು ಸಾವಿರ ಶರಣ-ಶರಣೆಯರಿಂದ ಇಷ್ಟು ಲಿಂಗ ಪೂಜಾ ಕಾರ್ಯಕ್ರಮ ನಡೆಸಲಾಗುತ್ತಿದೆ,

ಸಮಾಜ ಬಾಂಧವರು ಲಿಂಗಾಯಿತದ ಆಚರಣೆಗಳನ್ನು ಉಳಿಸಿಕೊಳ್ಳಬೇಕು ಈ ಹಿನ್ನೆಲೆಯಲ್ಲಿ ತಮ್ಮ ಮಕ್ಕಳಿಗೆ ಸಮಾಜದ ಸಂಸ್ಕೃತಿ ಮತ್ತು ಸಂಸ್ಕಾರವನ್ನು ಬಾಲ್ಯದಿಂದಲೇ ನೀಡಬೇಕು ಅಂದಾಗ ಮಾತ್ರ ಅವರು ಜೀವನಪರ್ಯಂತ ಅದನ್ನು ಅನುಸರಿಸುತ್ತಾರೆ ಇದು ತಾಯಂದಿರೇ ಮಾಡಬೇಕಾದ ಮಹತ್ತರವಾದ ಜವಾಬ್ದಾರಿಯಾಗಿದೆ, ಭಾಷಣ ಕಡಿಮೆ ಮಾಡಿ ಕಾರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಇಲ್ಲವಾದಲ್ಲಿ ಮುಂದೊಂದು ದಿನ ವಿಭೂತಿ, ಲಿಂಗ, ರುದ್ರಾಕ್ಷಿ, ಮುಂತಾದವನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ಸ್ಥಿತಿ ಬರಬಹುದಾದ ಆತಂಕವಿದೆ ಎಂದರು.  

ಜಾಗತಿಕ ಲಿಂಗಾಯಿತ ಮಹಾಸಭೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ನಿವೃತ್ತ ಐಎಎಸ್ ಅಧಿಕಾರಿ ಡಾ:ಎಸ್‌.ಎಮ್‌. ಜಾಮದಾರ ವೇದಿಕೆ ಮೇಲೆ ಉಪಸ್ಥಿತರಿದ್ದರು.   ಜಾಗತೀಕ ಲಿಂಗಾಯಿತ ಮಹಾಸಭೆಯ  ಜಿಲ್ಲಾಧ್ಯಕ್ಷ ಬಸವರಾಜ ರೊಟ್ಟಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಸಾದ ದಾಸೋಹಿಗಳಾದ ಶ್ರೀಮತಿ. ಸುಧಾ ಮಲ್ಲಿಕಾರ್ಜುನ ರೊಟ್ಟಿ ಹಾಗೂ ಮಲ್ಲಿಕಾರ್ಜುನ ಸಂಗಪ್ಪ ರೊಟ್ಟಿ ಅವರುಗಳು ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ವೇದಿಕೆ ಮೇಲೆ ಮಹಾಂತೇಶ ತೋರಣಗಟ್ಟಿ ದಂಪತಿಗಳು ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಜಾಗತೀಕ ಲಿಂಗಾಯಿತ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ್ ಮಳಗಲಿ, ಉಪಾಧ್ಯಕ್ಷ ಮುರುಗೇಶ್ ಶಿವಪೂಜಿ, ಸಿಎಂ ಬೂದಿಹಾಳ್, ಖಜಾಂಚಿ ಮುರಿಗೆಪ್ಪ ಬಾಳಿ, ನಗರ ಘಟಕದ ಅಧ್ಯಕ್ಷ ಎಸ್ ಜಿ ಸಿದ್ನಾಳ, ಪದಾಧಿಕಾರಿ ಪ್ರವೀಣ ಚಿಕಲಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಇದೇ ಸಂದರ್ಭದಲ್ಲಿ ಸುರೇಶ್ ನರಗುಂದ ಮತ್ತು ಶ್ರೀಮತಿ ಶ್ರೀದೇವಿ ನರಗುಂದ ದಂಪತಿಗಳಿಂದ ಬಹುಮಾನವನ್ನು ವಿತರಣೆ ಮಾಡಲಾಯಿತು.

ಶರಣಿಯರ ವಚನ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ  ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಶ್ರೀಮತಿ ನೈನಾಗಿರಿಗೌಡರ್ ನಿರ್ವಹಿಸಿದರು. ಕಾರ್ಯಕ್ರಮವನ್ನು ಶ್ರೀಮತಿ ಶಿವಲೀಲಾ ಪಟ್ಟಣಶೆಟ್ಟಿ ಅವರು ನಿರ್ದೇಶಿಸಿದರು. ಶ್ರೀಮತಿ ಸರೋಜಿನಿ ನಡುವಿನಹಳ್ಳಿ ಅವರು ವಂದಿಸಿದರು.