ನೀರಿನ ಸಮಸ್ಯೆಯಾದರೆ ಸಹಾಯವಾಣಿ ಕರೆ ಮಾಡಿ : ಡಾ ಭೀಮಾಶಂಕರ ಕನ್ನೂರ

ನೀರಿನ ಸಮಸ್ಯೆಯಾದರೆ ಸಹಾಯವಾಣಿ ಕರೆ ಮಾಡಿ : ಡಾ ಭೀಮಾಶಂಕರ ಕನ್ನೂರ  Call the helpline if you have a water problem: Dr. Bhimashankar Kannur

ಲೋಕದರ್ಶನ ವರದಿ  

ಇಂಡಿ 20 : ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಸಲುವಾಗಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದೆ.ಎಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ತಿಳಿಸಿದ್ದಾರೆ. ತಾಲೂಕಿನಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವ ಸಾದ್ಯತೆ ಇದ್ದು ಸಾರ್ವಜನಿಕ ಹಿತದೃಷ್ಟಿಯಿಂದ ಕುಡಿಯುವ ನೀರಿನ ಸಮಸ್ಯೆಯನ್ನು ನಿಗದಿತ ಸಮಯದಲ್ಲಿ ನಿವಾರಿಸಲು ತಾಲೂಕು ಪಂಚಾಯತಿ ಕಛೇರಿಯಲ್ಲಿ, ತಾಲೂಕಾ ಪಂಚಾಯತ ಕಛೇರಿಗಳಲ್ಲಿ ಸಹಾಯವಾಣಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು ಸಾರ್ವಜನಿಕರು ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಈ ಕೆಳಕಾಣಿಸಿದ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ, ಕುಡಿಯುವ ನೀರಿನ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ ಭೀಮಾಶಂಕರ ಕನ್ನೂರ ರವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ. 

ತಾಲೂಕ ಪಂಚಾಯತಿ ಇಂಡಿ  ಸಹಾಯವಾಣಿ ಸಂಖ್ಯೆ : 08359-200026 ಕಛೇರಿ ತಾ.ಪಂ.ಕಾರ್ಯಾಲಯ ಇಂಡಿ.ಸಹಾಯವಾಣಿ ಸಂಖ್ಯೆ08359-200026