ಕಾರವಾರ 08: ಯುದ್ದ-ನೌಕೆ ಉದ್ಯಾವನದಲ್ಲಿಹೂವು ಕಾಳಿಂಗವಾಗಿ ನಿಂತಿದೆಯಲ್ಲ ಎಂಬ ಮಾತು ಶನಿವಾರ ಕೇಳಿಬಂದಿತು. ಹೌದು ಹೂವಿನ ಹಾವು, ಸಿಂಹ ಜೆಲ್ಲಿ ಫಿಷ್, ಅಕ್ಟೋಪಸ್, ಪೆಂಗವಿನ್ ಮೀನು ಮತ್ತುಇತರೇ ಪ್ರಾಣಿ ಪಕ್ಷಿಗಳು ಏಕಕಾಲದಲ್ಲಿ ಪ್ರತ್ಯಕ್ಷವಾಗಿದ್ದು ಕರವಾವಳಿ ಉತ್ಸವದ ಫಲ-ಪುಷ್ಪ ಪ್ರಸದರ್ಶನದಲ್ಲಿ
ನಗರದರವೀಂದ್ರನಾಥಕಡಲ ತೀರದಲ್ಲಿರುವ ವಾರ್ ಶಿಪ್ ಉದ್ಯಾವನದಲ್ಲಿ ಜಿಲ್ಲಾಡಳಿತ ಮತ್ತುತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ಕರಾವಳಿ ಉತ್ಸವದ ಅಂಗವಾಗಿ ಫಲಪುಷ್ಪ ಪ್ರದರ್ಶನಆಯೋಜಿಸಲಾಗಿದ್ದು, ಗುಲಾಭಿ, ಸೇವಂತಿ, ಕಾನರ್ೆಶನ್ ಹೂವು ಮತ್ತುಅಸ್ಪಾರಗಸ್ ಹುಲ್ಲು ಹಾಗೂ ಕಲ್ಲಂಗಡಿ ಹಣ್ಣು, ಬಗೆ ಬಗೆಯ ತರಕಾರಿಗಳಿಂದ ವಿವಿಧ ಕಲಾಕೃತಿಗಳನ್ನು ಮಾಡಲಾಗಿದೆ. ಪ್ರದರ್ಶನದಲ್ಲಿ ಸೇವಂತಿ, ಗುಲಾಬಿ ಮತ್ತುವಿವಿಧತರಹದ ಹೂವುಗಳಿಂದ ಮಾಡಿರುವಯಕ್ಷಗಾನಕೀರಿಟ, ಡೋಲು, ಬೇಬಿ ಡೊಲ್, ರೇಸಿಂಗ ಕಾರು,ಚಾಹದಕಿಟ್ಟಲಿ, ಕಪ್ಪು, ಬಸಿ, ನಾಜೂಕಾದ ಗೋದಿ ಕಡ್ಡಿಯಿಂದ ತಯಾರಿಸಿರುವ ಲಂಡನ್ ಬ್ರಿಜ್, ಪೀಸಾ ಟಾವರ್, ಕಲ್ಲಂಗಡಿಯಲ್ಲಿ ಮೂಡಿಬಂದಿರುವಜ್ಞಾನಪೀಠ ಪುರಸ್ಕೃತರಾದರಾಜ್ಯದ ಹೆಸರಾಂತ ಸಾಹಿತಿಗಳ ಕಲಾಕೃತಿಗಳು, ಕುಂಬಳಕಾಯಿ ಮತ್ತು ಸೌತೆಕಾಯಿಗಳಿಂದ ತಯಾರಿಸಿದ ಸಂಗೀತಗಾರರ ಗೊಂಬೆಗಳು ನೋಡುಗರಕಣ್ಮನ ಸೆಳೆಯುತ್ತಿವೆ.
ಇವುಗಳೊಂದಿಗೆ ರಾಗಿ ಸಜ್ಜೆ, ನವಣೆಯಂತಹ ಸಿರಿಧಾನ್ಯಗಳಿಂದ ನಿಮರ್ಿಸಿರುವ ಸರ್ ಎಂ.ವಿಶ್ವೇಶ್ವರಯ್ಯಾ ಮತ್ತು ಸರದರ್ಾರ್ ವಲ್ಲಬಾಯಿ ಪಟೇಲ್ಅವರಮೂತರ್ಿಗಳು ಎದ್ದು ಬರುವಂತಿವೆ. ಬೃಹತಾಕಾರದ ಹೂವಿನ ರಂಗೋಲಿಚಿತ್ತಾರಕೇಂದ್ರಬಿಂದುವಾಗಿದ್ದು, ನಾರಿಕೆಳದ ಕೆತ್ತನನೆಗಳು, ಬೋನ್ಸಾಯ್ಗಿಡ ಮರಗಳು, ಸ್ಥಳಿಯ ರೈತರು ಹಸಿ ಶುಂಠಿ, ಸಿಟ್ರೋನೆಲ್ಲಾ, ಲಿಂಬೆ ಮತ್ತುಎಲಕ್ಕಿಯಿಂದ ತಯಾರಿಸಿದ ಸುಗಂದ ದ್ರವ್ಯಗಳು ಮತ್ತುಜಿಲ್ಲೆಯ ಪ್ರಮುಖ ಬೆಳೆಗಳಾದ ಬಾಳೆ, ಅಡಕೆ, ಕೋಕಮ್, ಗಜನಿಂಬೆ ಮತ್ತುಇತರ ಬೆಳೆಗಳನ್ನು ಪ್ರದರ್ಶನಕ್ಕೆಇಡಲಾಗಿದೆ.
ಕದಂಬ ನೌಕಾನೆಲೆ ಮುಖ್ಯಸ್ಥರಿಂದ ಚಾಲನೆ :ಇಲ್ಲಿಯಕದಂಬ ನೌಕಾನೆಲೆ ಮುಖ್ಯಸ್ಥರಾದ ವಾಯ್ಸ್ಅಡ್ಮಿರಲ್ಕೆ.ಜೆ.ಕುಮಾರಅವರುರಿಬ್ಬನಕತ್ತಿಸುವ ಮೂಲಕ ಫಲ-ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿದರು. ಇವರೊಂದಿಗೆಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಅಡಿಸನಲ್ಎಸ್ಪಿ ಗೋಪಾಲ ಬ್ಯಾಕೋಡ, ಜಿಲ್ಲಾತೋಟಗಾರಿಕಾ ಇಲಾಖೆ ಉಪನಿದರ್ೇಶಕ ಶಶಿಕಾಂತ ಕೋಟಿಮನೆಮತ್ತುಇತರರು ಉಪಸ್ಥಿತರಿದ್ದರು.