ಬ್ರೂನೈನಲ್ಲಿ ಕೊರೊನಾ ಸೋಂಕಿಗೆ ಮೊದಲ ಸಾವು

ಮಾಸ್ಕೋ, ಮಾರ್ಚ್ 28, ಬ್ರೂನೈನಲ್ಲಿ ಕೊರೊನಾ ಸೋಂಕಿನಿಂದಾಗಿ ಮೊದಲ ಸಾವು ಸಂಭವಿಸಿದೆ ಎಂದದು ಶನಿವಾರ ಅಲ್ಲಿನ ಆರೋಗ್ಯ ಸಚಿವಾಲಯ ದೃಢಪಡಿಸಿದೆ.ಕಾಂಬೋಡಿಯಾದಿಂದ ಮಾರ್ಚ್ 4 ರಂದು ಹಿಂದಿರುಗಿದ್ದ 64 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ.  ಈವರೆಗೆ ಸುಮಾರು 5000 ಕೊರೊನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು ದೇಶದಲ್ಲಿ 115 ಪ್ರಕರಣಗಳು ದೃಢಪಟ್ಟಿವೆ. 11 ಜನರು ಈ ಸೋಂಕಿನಿಂದ ಈಗಾಗಲೇ ಚೇತರಿಸಿಕೊಂಡಿದ್ದಾರೆ.ಮಾರ್ಚ್ 11 ರಂದು ಕೋವಿಡ್ 19 ಅನ್ನು ಸಾಂಕ್ರಾಮಿಕ ಎಂದು ವಿಶ್ವ ಆರೋಗ್ಯ ಸಂಸ್ಥೆ ಡಬ್ಲ್ಯು ಎಚ್ ಒ ಘೋಷಿಸಿತ್ತು. ಈವರೆಗೆ ಜಗತ್ತಿನಾದ್ಯಂತ ಸುಮಾರು 5,90,000 ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.