ಶ್ರೀ ಶಿವ ಚಿದಂಬರೇಶ್ವರ ಪಿರಮಿಡ್ ಧ್ಯಾನ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ನಾಳೆ
The first anniversary of Sri Shiva Chidambareshwar Pyramid Meditation Center is tomorrow
ಲೋಕದರ್ಶನ ವರದಿ
ಗದಗ 7: ನಗರದ ವಿವೇಕಾನಂದ ನಗರದ ಕರಿಯಮ್ಮಕಲ್ಲ ಬಡಾವಣೆಯ ಸಮೀಪದಲ್ಲಿರುವ ಪಿ.ಡಿ. ಬಂಕಾಪೂರ ಅವರ ನಿವಾಸದಲ್ಲಿ ಸ್ಥಾಪಿತವಾಗಿರುವ ಶಿವ ಚಿದಂಬರೇಶ್ವರ ಪಿರಮಿಡ್ ಧ್ಯಾನ ಕೇಂದ್ರದ ಪ್ರಥಮ ವಾರ್ಷಿಕೋತ್ಸವ ಸಮಾರಂಭವು ಆಗಸ್ಟ್ 8ರಂದು ಸಂಜೆ 5 ಗಂಟೆಗೆ ಕರಿಯಮ್ಮಕಲ್ಲ ದೇವಾಲಯದ ಸಮೀಪದ ಮುಕ್ಕಣ್ಣೇಶ್ವರ ಸಮುದಾಯ ಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನ್ನಿಧ್ಯವನ್ನು ಸೀತಾಗಿರಿ ಹಾಗೂ ಅಣ್ಣಿಗೇರಿ ಗೀರೀಶ ಆಶ್ರಮದ ಸ.ಸ. ಡಾ. ಎ.ಸಿ. ವಾಲಿ ಮಹಾರಾಜರು ವಹಿಸಲಿದ್ದು, ಮುಕ್ಕಣ್ಣೇಶ್ವರ ಮಠದ ಶಂಕರಾನಂದ ಸ್ವಾಮೀಜಿಗಳು ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮವನ್ನು ಕರ್ನಾಟಕ ಪಿರಮಿಡ್ ಸೇವೆಯ ರಾಜ್ಯಾಧ್ಯಕ್ಷರು ಹಾಗೂ ಬಳ್ಳಾರಿ ಪಿ.ಎಂ.ಸಿ. ವ್ಯವಸ್ಥಾಪಕರಾದ ಹಂಪಣ್ಣ ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ಹಿರಿಯ ಪಿರಮಿಡ್ ಮಾಸ್ಟರ್ ವಿಶಾಲಾಕ್ಷಿ ಆಕಳವಾಡಿ, ಶಂಕರಹಟ್ಟಿಯ ಹಿರಿಯ ಪಿರಮಿಡ್ ಮಾಸ್ಟರ್ ಕುಮಾರಿ ವಿಶಾಲಾಕ್ಷಿ ಅಥಣಿ, ಶಂಕರಹಟ್ಟಿಯ ಮಲ್ಲಿಕಾರ್ಜುನ ಪಿರಮಿಡ್ ಆಧ್ಯಾತ್ಮಿಕ ಧ್ಯಾನ ಕೇಂದ್ರದ ನಿರ್ಮಾತೃ ರಂಗಣ್ಣ ಕೋಳಿ ಹಾಗೂ ಬಾಗಲಕೋಟೆಯ ಹಿರಿಯ ಪಿರಮಿಡ್ ಮಾಸ್ಟರ್ ರಾಜಶೇಖರ ಅಡಕೆನವರ್ ಭಾಗವಹಿಸಲಿದ್ದಾರೆ.
ಗದಗ-ಬೆಟಗೇರಿ ಅವಳಿ ನಗರದ ಪಿರಮಿಡ್ ಮಾಸ್ಟರ್ಗಳು, ಧ್ಯಾನಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ಪಿರಮಿಡ್ ನಿರ್ಮಾತೃ ಪಿ.ಡಿ. ಬಂಕಾಪೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಡೆಕೊಳ್ಳಮಠದ ಬಳಿ ಅಪಘಾತ ತಡೆಗೆ ತಾತ್ಕಾಲಿಕ ಕ್ರಮ: ಮಳೆಗಾಲ ಬಳಿಕ ಶಾಶ್ವತ ಕಾಮಗಾರಿ
ಅಂಬೋಲಿ ಬಳಿ ಕಣಿವೆಗೆ ಬಿದ್ದು ಯುವಕ ದುರ್ಮರಣ : 5 ಗಂಟೆ ಕಾರ್ಯಾಚರಣೆ ಬಳಿಕ ಶವ ಪತ್ತೆ
ಸುತಗಟ್ಟಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆ ಸೆರೆ : ನಿಟ್ಟೂಸಿರು ಬಿಟ್ಟ ಗ್ರಾಮಸ್ಥರು
ಮೈದುಂಬಿ ಹರಿಯುತ್ತಿರುವ ಘಟಪ್ರಭಾ ನದಿ: ಭರ್ತಿ ಹಂತದಲ್ಲಿ ಹಿಡಕಲ್ ಜಲಾಶಯ
ಎಚ್ಚರ ಅನಾಹುತಕ್ಕೆ ಕೈ ಮಾಡಿ ಕರೆಯುತ್ತಿದೆ: ರಸ್ತೆಯ ಭೂಗತ ವಿದ್ಯುತ್ ತಂತಿಯಿಂದ ಹೊರಬರುತ್ತಿದೆ ಬೆಂಕಿ ಕಿಡಿ-ಹೊಗೆ
ಹುಕ್ಕೇರಿ ತಾಲೂಕಿನ ಅತಿ ಹಿರಿಯ 107 ವಯಸ್ಸಿನ ನಾಗರಿಕ ನಿಜಪ್ಪ ಜಾಡರ್ ವಿಧಿವಶ 