ಸಿಯಾಟಲ್-ಟಕೋಮಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ವಿಮಾನ ನಿಲ್ದಾಣದಿಂದ 30 ಮೈಲಿಗಳ ದೂರದಲ್ಲಿ ಪ್ರಯಾಣಿಕರ ರಹಿತವಾಗಿ ಚಲಿಸುತ್ತಿದ್ದ ವಿಮಾನ ಪತನಗೊಂಡಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.
ವಿಮಾನಯಾನ್ವೆ ಸಂಸ್ಥೆಯ ನೌಕರ ವಿಮಾನ ಕದ್ದೊಯ್ದ ಬೆನ್ನಲ್ಲೆ ಎರಡು ಮಿಲಿಟರಿ ಎಫ್-15 ವಿಮಾನಗಳು ಆತನನ್ನು ಬೆನ್ನಟ್ಟಿದ್ದವು, ಆದರೆ ಸೇನಾ ವಿಮಾನಗಳಿಗೆ ಯಾವುದೆ ಹಾನಿ ಉಂಟಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಆತ್ಮಹತ್ಯೆಗೆ ಬಳಸಿದ ವಿಮಾನದ ಹಾರಾಟ ದೃಶ್ಯಗಳಲ್ಲಿ ದಾಖಲಾಗಿದ್ದು, ವಿಮಾನ ಪತನದೊಂಡಿದ್ದರಿಂದ ಹೊತ್ತಿದ ಕಿಡಿ ದಟ್ಟವಾದ ಅರಣ್ಯದಲ್ಲಿ ಬೆಂಕಿಯನ್ನುಂಟುಮಾಡಿದೆ.
ಘಟನೆ ನಡೆಯುತ್ತಿದ್ದಂತೆ ಇದೊಂದು ಭಯೋತ್ಪಾದಕ ಕೃತ್ಯ ಎಂದುಕೊಳ್ಳಲಾಗಿತ್ತು. ಆದರೆ ನಂತರ ಇದು ಸಂಸ್ಥೆಯ ಸಿಬ್ಬಂದಿಯೇ ಮಾಡಿರುವ ಅನಾಹುತ ಎಂದು ಅಮೆರಿಕ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.