ಕಾರವಾರ 02: ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಕರ್ಾರಕ್ಕೆ ವಾಸ್ತವಕ್ಕೆ ವಿರುದ್ಧವಾಗಿ ಜಿಲ್ಲೆಯಲ್ಲಿ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸಲಾಗಿದೆ ಎಂಬ ವರದಿಯ ಕುರಿತು ಸಮಗ್ರವಾಗಿ ವಿಚಾರಿಸುವುದಲ್ಲದೇ ಮುಂದಿನ ದಿನಗಳಲ್ಲಿ ಅರಣ್ಯವಾಸಿಗಳ ಪರವಾಗಿ ಸಕರ್ಾರವು ಅರಣ್ಯವಾಸಿಗಳಿಗೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ ತಿಳಿಸಿದ್ದಾರೆಂದು ಅರಣ್ಯ ಅತಿಕ್ರಮಣದಾರರ ಪರ ಹೋರಾಟಗಾರ ರವೀಂದ್ರ ನಾಯ್ಕ ಹೇಳಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಗುರುವಾರ ಭೇಟಿಯಾಗಿ ಅರಣ್ಯಾಧಿಕಾರಿಗಳು ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ವಕ್ಕಲೆಬ್ಬಿಸಿದ ಘಟನೆಗಳನ್ನು ಎಳೆ ಎಳೆಯಾಗಿ ವಿವರಿಸಿದ್ದೇವೆ ಎಂದರು.
ಶಿರಸಿ ಮುಖ್ಯ ಅರಣ್ಯಸಂರಕ್ಷಣಾಧಿಕಾರಿ ವಾಸ್ತವಕ್ಕೆ ವಿರುದ್ಧವಾಗಿ ಕಾಲ್ಪನಿಕವಾಗಿ ಒಕ್ಕಲೆಬ್ಬಿಸಿದ ವರದಿಯನ್ನು ಸಕರ್ಾರಕ್ಕೆ ಕಳುಹಿಸಿದ್ದೇವೆ. ಉತ್ತರಕನ್ನಡ ಜಿಲ್ಲೆಯಲ್ಲಿ ಜನವರಿ ಅಂತ್ಯದವರೆಗೆ ಒಟ್ಟೂ 5621 ಕುಟುಂಬವನ್ನು ಒಕ್ಕಲೆಬ್ಬಿಸಿ ಸದ್ರಿ ಅರಣ್ಯವಾಸಿಗಳಿಂದ 3159.35 ಹೆಕ್ಟರ್ ಪ್ರದೇಶವನ್ನು ವಶಪಡಿಸಿಕೊಳ್ಳಲಾಗಿದೆ. ಎಂದು ಜಿಲ್ಲಾಧಿಕಾರಿಗೆ ವಿವರಿಸಿದ್ದೇವೆ.
ಅತೀ ಹೆಚ್ಚು ಹೊನ್ನಾವರ ವಲಯ :
ಜಿಲ್ಲೆಯಲ್ಲಿಯೇ ಅತಿ ಹೆಚ್ಚು 2765 ಕುಟುಂಬಗಳಿಗೆ ಸಂಬಂಧಿಸಿದ 905.58 ಹೆಕ್ಟರ ಅರಣ್ಯ ಪ್ರದೇಶ ವಶಪಡಿಸಿಕೊಳ್ಳಲಾಗಿದೆ. ಎಂಬ ಅಂಶವಿರುವ ವರದಿಯಲ್ಲಿ, ಶಿರಸಿ ವಲಯದಲ್ಲಿ 1573 ಕುಟುಂಬಕ್ಕೆ ಸಂಬಂದಿಸಿ 614.41 ಹೆಕ್ಟ್ರ್ ಪ್ರದೇಶ, ಯಲ್ಲಾಪುರ ವಲಯ 733 ಕುಟುಂಬದ 1309.18 ಹೆಕ್ಟ್ರ್ಪ್ರದೇಶ, ಹಳಿಯಾಳ ವಲಯ 366 ಕುಟುಂಬದ 313.12 ಹೆಕ್ಟ್ರ್ಪ್ರದೇಶ, ಕಾರವಾರ 179 ಕುಟುಂಬದ 16.95 ಹೆಕ್ಟ್ರ್ಪ್ರದೇಶ ಹಾಗೂ ವನ್ಯಜೀವಿ ದಾಂಡೇಲಿ ವಲಯದ 5 ಕುಟುಂಬಕ್ಕೆ ಸಂಬಂಧಿಸಿದ 0.11 ಹೆಕ್ಟ್ರ್ ಪ್ರದೇಶ ವಶಪಡಿಸಪಕೊಳ್ಳಲಾಗಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಅರಣ್ಯಾಧಿಕಾರಿಗಳು ಸುಳ್ಳು ವರದಿ ಕಳುಹಿಸಿರುವದಕ್ಕೆ ಹೋರಾಟ ವೇದಿಕೆಯು ಈಗಾಗಲೇ ಹಲವು ಸಲ ಅರಣ್ಯಾಧಿಕಾರಿಗಳ ವಿರುದ್ಧ ಹೋರಾಟ ಮಾಡಿದೆ.
ಕಾನೂನು ಕ್ರಮಕ್ಕೆ ಆಗ್ರಹ :
ಕಾನೂನಿನ ವ್ಯಕ್ತಿರಿಕ್ತವಾಗಿ ಕಾನೂನುನಿನ ವಿಧಿ-ವಿಧಾನ ಅನುಸರಿಸದೇ ಸುಳ್ಳು ವರದಿಯನ್ನು ಸರಕಾರಕ್ಕೆ ಸಲ್ಲಿಸಿದ ಅರಣ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ವೇದಿಕೆಯು ಜಿಲ್ಲಾಧಿಕಾರಿಯನ್ನು ಇದೇ ವೇಳೆ ಆಗ್ರಹಿಸಿತು. ಜಿಲ್ಲಾಧಿಕಾರಿಗಳನ್ನು ಭೇಟಿಯಾದ ನಿಯೋಗದಲ್ಲಿ ನಿಯೋಗದಲ್ಲಿ ಜಿಲ್ಲಾ ಸಂಚಾಲಕರಾದ ಇಬ್ರಾಹಿಂ ನಬೀ ಸಾಬ, ದೇವರಾಜ ಡಿ. ಗೊಂಡ, ಕುಮಟಾ ಸಮಿತಿ ಅಧ್ಯಕ್ಷ ಮಂಜುನಾಥ ಮರಾಠಿ, ಯಲ್ಲಾಪುರದ ಭೀಮ್ಸಿ ವಾಲ್ಮೀಕಿ, ತಿಮ್ಮಾ ಮರಾಠಿ, ಜಿಲ್ಲಾ ಸಂಚಾಲಕರಾದ ವಿಲ್ಸನ ಕಾರವಾರ, ರೋಹಿದಾಸ ವೈಂಗಣಕರ, ನಾರಾಯಣ ಮರಾಠಿ ಮುಂತಾದವರು ಉಪಸ್ಥಿತರಿದ್ದರು.