ದೀಪ ಬೆಳಗುವ ಮೂಲಕ ಹಬ್ಬಕ್ಕೆ ಅಧಿಕೃತ ಚಾಲನೆ
The festival is officially launched by lighting the lamp
ದಾಂಡೇಲಿ 16: ದಾಂಡೇಲಿಯ ಮರಮಟ್ಟುಗಳ ಕೋಠಿ ಆವರಣದಲ್ಲಿರುವ ಹಾರ್ನಬಿಲ್ ಭವನದಲ್ಲಿ ಶುಕ್ರವಾರ ಎರಡು ದಿನಗಳ ಹಾರ್ನಬಿಲ್ ಹಬ್ಬಕ್ಕೆ ಬೆಂಗಳೂರಿನ ಅರಣ್ಯ ಇಲಾಖೆಯ ಅಪರ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷಕುಮಾರ ಅವರು ದೀಪ ಬೆಳಗುವ ಮೂಲಕ ಹಬ್ಬಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಹಾರ್ನಬಿಲ್ ಸಂರಕ್ಷಣೆಗೆ ಸಮಾಜದ ಸಹಭಾಗಿತ್ವ ಅಗತ್ಯವಿದೆ ಎಂದು ತಿಳಿಸಿದರು.
ಹಾರ್ನಬಿಲ್ ಸಂರಕ್ಷಣೆ ಅತ್ಯಂತ ಮಹತ್ವದ ವಿಚಾರವಾಗಿದ್ದು ಇದಕ್ಕೆ ಅರಣ್ಯ ಇಲಾಖೆ ಮಾತ್ರವಲ್ಲದೆ ಸಮಾಜ, ಸಾರ್ವಜನಿಕರು ಹಾಗೂ ಮಾಧ್ಯಮಗಳ ಸಹಭಾಗಿತ್ವ ಅಗತ್ಯವಾಗಿದೆ ಎಂದು ಹೇಳಿದರು. ಪಕ್ಷಿಗಳ ಮಹತ್ವವನ್ನು ಸಮಾಜದಲ್ಲಿ ಬಿತ್ತಲು ಎಲ್ಲರೂ ಕೈ ಜೋಡಿಸಬೇಕೆಂದು ಅವರು ಕರೆ ನೀಡಿದರು. ಉದ್ಘಾಟನೆಗೆ ಮುನ್ನ ದಾಂಡೇಲಿ ನಗರಸಭೆಯ ಕಾರ್ಯಾಲಯದಿಂದ ಹಾರ್ನಬಿಲ್ ಜಾಥಾ ಕಾರ್ಯಕ್ರಮಕ್ಕೆ ಕೆನರಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ ಅವರು ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಬುಡಕಟ್ಟು ಜನಾಂಗಗಳಾದ ಗೌಳಿ, ಸಿದ್ದಿ, ಮತ್ತಿತರ ಸಂಘ ಸಂಸ್ಥೆಗಳ ಜಾನಪದ ನೃತ್ಯ ಕಾರ್ಯಕ್ರಮಗಳು ನಡೆಯಿತು.
ಪ್ರಾಸ್ಥಾವಿಕವಾಗಿ ಮಾತನಾಡಿದ ಹಳಿಯಾಳ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಪ್ರಶಾಂತ ಕುಮಾರ ಅವರು ಹಾರ್ನಬಿಲ್ ಉತ್ಸವದ ಉದ್ದೇಶಗಳನ್ನು ವಿವರಿಸಿ, ದಾಂಡೇಲಿಯ ನದಿ, ಪರಿಸರ, ಅರಣ್ಯ, ವನ್ಯಜೀವಿ ಹಾಗೂ ಪಕ್ಷಿಗಳ ಸಂರಕ್ಷಣೆ ಮಹತ್ವವನ್ನು ಜನರಿಗೆ ತಿಳಿಸುವುದೇ ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸುವದಾಗಿದೆ ಎಂದ ಅವರು ಸ್ಥಳೀಯ ಬುಡಕಟ್ಟು ಸಮುದಾಯಗಳ ಸಂಸ್ಕೃತಿಯನ್ನು ಬೇರೆ ಪ್ರದೇಶಗಳಿಗೆ ಪರಿಚಯಿಸುವದು ಪಕ್ಷಿ ವೀಕ್ಷಣೆ ಮತ್ತು ವಿಚಾರ ಸಂಕೀರ್ಣಗಳ ಮೂಲಕ ಪಕ್ಷಿ ಸಂಸ್ಕೃತಿಯ ವಿನಿಮಯ ಮಾಡಿಕೊಳ್ಳುವದು ಈ ಉತ್ಸವದ ಇನ್ನೊಂದು ಗುರಿಯಾಗಿದೆ ಎಂದು ಹೇಳಿದರು.
ದೇಶದಲ್ಲಿ ಒಟ್ಟು 9 ಬಗೆಯ ಹಾರ್ನಬಿಲ್ ಪಕ್ಷಿಗಳು ಕಂಡು ಬರುತ್ತದೆ. ದೇಶದ ನಾನಾ ಭಾಗಗಳಲ್ಲಿ ಇರುವ ಹಾರ್ನಬಿಲ್‌ಗಳು ಹಾಗೂ ಹುಲಿ ಯೋಜನಾ ಪ್ರದೇಶಗಳ ಮಹತ್ವದ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ ಎಂದು ಪ್ರಶಾಂತಕುಮಾರ ತಿಳಿಸಿದ್ದಾರೆ. ಅಧ್ಯಕ್ಷತೆವಹಿಸಿದ್ದ ಕೆನರಾ ಅರಣ್ಯ ವಲಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ ಅವರು ಮಾತನಾಡಿ ವಿಶ್ವದಲ್ಲಿ 11 ಸಾವಿರಕ್ಕೂ ಹೆಚ್ಚು ಪ್ರಭೇದದ ಪಕ್ಷಿಗಳು ಇದ್ದು, ಅದರಲ್ಲಿ 57 ಪ್ರಬೇದದ ಹಾರ್ನಬಿಲ್ ಪಕ್ಷಿಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡು ಬರುತ್ತದೆ. ಭಾರತದಲ್ಲಿ 9 ಪ್ರಬೇದದ ಹಾರ್ನಬಿಲ್‌ಗಳಿದ್ದು ಉತ್ತರ ಕನ್ನಡ ಜಿಲ್ಲೆಯಲ್ಲಿ 4 ಪ್ರಭೇದದ ಹಾರ್ನಬಿಲ್ ಪಕ್ಷಿಗಳು ಕಂಡು ಬರುತ್ತದೆ ಎಂದು ಮಾಹಿತಿ ನೀಡಿದರು. ಈ ಉತ್ಸವದಲ್ಲಿ 100 ಕ್ಕೂ ಹೆಚ್ಚು ತಜ್ಞರು ಪರಿಸರಾಸಕ್ತರು ಹಾರ್ನಬಿಲ್ ಕುರಿತು ಮಾತನಾಡಲಿದ್ದಾರೆ. ಎಂದು ಹೇಳದರು.
ಜನ ಪ್ರತಿನಿಧಿಗಳ ಗೈರು ಹಾಜರಿ ಗಮನ ಸೆಳೆದಿತ್ತು: ಆಮಂತ್ರಣ ಪತ್ರಿಕೆಯಲ್ಲಿ ಹೆಸರೂ ಇದ್ದರೂ ಹಿರಿಯ ಶಾಸಕ ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ ಸೇರಿದಂತೆ ಹಲವು ಜನಪ್ರತಿನಿಧಿಗಳ ಗೈರು ಹಾಜರಿ ಸ್ಪಷ್ಟವಾಗಿ ಎದ್ದು ಕಾಣುತಿತ್ತು. ಇದೇ ವೇಳೆ ಕಾಳಿ ಹುಲಿ ಯೋಜನೆಯ ಅಧಿಕಾರಿಗಳು, ನಿರ್ದೇಶಕ ನಿಲೇಶ ಶಿಂಧೆ ಅವರ ಅನುಪಸ್ಥಿತಿಯು ಎದ್ದು ಕಾಣುತಿತ್ತು. ಕಾರ್ಯಕ್ರಮದಲ್ಲಿ ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿ ಶಂಕರ ಸಾಮಾಜಿಕ ಅರಣ್ಯ ವಿಭಾಗದ ಮಂಜುನಾಥನಾವಿ ತಹಶೀಲದಾರ ಪರಮಾನಂದ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಸಹಿತ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸರ ಪ್ರೇಮಿಗಳು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಚವ್ಹಾಣ ಅವರು ಸ್ವಾಗತಿಸಿದರು . ಆಶಾ ಕಿಂದಳಕರ್ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 