ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಲೇಸರ ಶಸ್ತ್ರಚಿಕಿತ್ಸೆಯ ಯುಗಾರಂಭ
The era of laser surgery begins at KLE Centenary Charitable Hospital
ಬೆಳಗಾವಿ 19: ಕೆ.ಎಲ್.ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರ ಯಳ್ಳೂರ ರಸ್ತೆ ಬೆಳಗಾವಿಯಲ್ಲಿ ಸರ್ಜರಿ ವಿಭಾಗ ಆಸ್ಪತ್ರೆಯಲ್ಲಿ ಲೇಸರ ಹಿಮೊರಾಯ್ಡೋಪ್ಲಾಸ್ಟಿ ಮೂಲವ್ಯಾಧಿ ಸರ್ಜರಿಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. ಸರ್ಜರಿ ವಿಭಾಗದ ನುರಿತ ತಜ್ಞರಾದ ಡಾ. ಸ್ಟಾಲಿನ ಹೆಗ್ರೆ ಅವರು 3ನೇ ದರ್ಜೆಯ ಮೂಲವ್ಯಾಧಿಯಿಂದ ಬಳುಲುತಿದ್ದ 38 ವಯಸ್ಸಿನ ಶಹಾಪೂರ ನಿವಾಸಿಗೆ ಇಂದು ಲೇಸರ ಹಿಮೊರಾಯ್ಡೋಪ್ಲಾಸ್ಟಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಈ ಶಸ್ತ್ರಚಿಕಿತ್ಸೆಗೆ ಒಳಪಟ್ಟ ನಂತರ ರೋಗಿಗೆ ಅತೀ ಕಡಿಮೆ ನೋವು, ಕಡಿಮೆ ರಕ್ತಸ್ರಾವ, ಕಡಿಮೆ ಕತ್ತರಿಸುುವಿಕೆ ಹಾಗೂ ಹೊಲಿಗೆ ರಹಿತ ಶಸ್ತ್ರ ಚಿಕಿತ್ಸೆಯಿಂದಾಗಿ ರೋಗಿಯು ಸಂತೋಷ ಹೊಂದಿದ್ದಾರೆ.
ಲೇಸರ ಹೆಮೊರಾಯ್ಡೊಪ್ಲಾಸ್ಟಿ ಇದು ಒಂದು ಆಧುನಿಕ ಹಾಗೂ ಅತಿ ಕಡಿಮೆ ಗಾಯದ ಶಸ್ತ್ರಚಿಕಿತ್ಸೆ ವಿಧಾನವಾಗಿದ್ದು, ಮೂಲವ್ಯಾಧಿ (ಪೈಲ್ಸ್ ಚಿಕಿತ್ಸೆಗಾಗಿ) ಬಳಸಲಾಗುತ್ತದೆ. ಸಾಮಾನ್ಯ ಶಸ್ತ್ರಚಿಕಿತ್ಸೆಯಂತೆ ಕತ್ತರಿಸುವ ಬದಲು, ವಿಶೇಷ ಲೇಸರ ಶಕ್ತಿಯನ್ನು ನೀಡಲಾಗುತ್ತದೆ. ಇದರಿಂದ ಮೂಲವ್ಯಾದಿ ಒಳಗಿನಿಂದಲೇ ಕುಗ್ಗುತ್ತದೆ ರಕ್ತಪ್ರವಾಹ ಕಡಿಮೆಯಾಗುತ್ತದೆ. ಗುದದ ಸಾಮಾನ್ಯ ರಚನೆಯಂತೆ ಕಾಣುತ್ತದೆ. ಸುತ್ತಲಿನ ಭಾಗಗಳಿಗೆ ಕನಿಷ್ಠ ಹಾನಿ ಆಗುತ್ತದೆ. ಕಾಲಕ್ರಮೇಣ ಮೂಲವ್ಯಾಧಿ ಸಂಪೂರ್ಣವಾಗಿ ಕುಗ್ಗುತ್ತದೆ. ಲೇಸರ ಚಿಕಿತ್ಸೆಯಿಂದ ಆಗುವ ಲಾಭಗಳು ಕಡಿಮೆ ನೋವು, ದೊಡ್ಡ ಕತ್ತರಿಸುವ ಗಾಯಗಳಿಲ್ಲ, ಕಡಿಮೆ ರಕ್ತಸ್ರಾವ, ಬೇಗನೆ ಸಾಮಾನ್ಯ ಜೀವನಕ್ಕೆ ಮರಳಬಹುದು, ವೇಗವಾಗಿ ಗುಣಮುಖವಾಗಬಹುದು, ಕಡಿಮೆ ತೊಂದರೆಗಳು. ಇಂತ ಅನೇಕ ಶಸ್ತ್ರಚಿಕಿತ್ಸೆಗಳು ನಮ್ಮ ಆಸ್ಪತೆಯಲ್ಲಿ ನೇರವೇರುತ್ತವೆ ಆದ್ದರಿಂದ ಇದರ ಸದುಪಯೋಗವನ್ನು ಪಡೆಕೊಳ್ಳಿ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷರು ತಿಳಿಸಿದ್ದಾರೆ.
ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಡಾ. ಸ್ಟಾಲಿನ್ ಹೆಗ್ರೆ ಸೇರಿದಂತೆ, ಅರವಳಿಕೆ ತಜ್ಞ ಡಾ. ಅರುಣ ಮಳಗೇರ ಹಾಗೂ ಇನ್ನುಳಿದ ವೈದ್ಯರ, ವೈದ್ಯಕೀಯೇತರ ಸಿಬ್ಬಂದಿಯ ತಂಡದ ಕಾರ್ಯವನ್ನು ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ ಎನ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಸಂಜಯ ಕಂಬಾರ ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಹೊಸತನವನ್ನು ಪ್ರೇರೆಪಿಸುವ ಹಿರಿಯ ವೈದ್ಯ ಹಾಗೂ ಯುಎಸ್‌ಎಮ್ ಕೆಎಲ್‌ಇ ಯ ನಿರ್ದೇಶಕ ಡಾ. ಹೆಚ್ ಬಿ ರಾಜಶೇಖರ ಅವರು ಹಾಗೂ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 