ಮಹಾಕಾವ್ಯ ರಾಮಾಯಣ ನಮ್ಮ ಸಂಸ್ಕೃತಿಯ ಆದಿಕಾವ್ಯ: ಪ್ರೊ. ಪಿ.ಬಿ.ಬಿರಾದಾರ

ಮಹಾಕಾವ್ಯ ರಾಮಾಯಣ ನಮ್ಮ ಸಂಸ್ಕೃತಿಯ ಆದಿಕಾವ್ಯ: ಪ್ರೊ. ಪಿ.ಬಿ.ಬಿರಾದಾರ The epic Ramayana is the primeval story of our culture: Prof. PB Biradara

ಮಹಾಕಾವ್ಯ ರಾಮಾಯಣ ನಮ್ಮ ಸಂಸ್ಕೃತಿಯ ಆದಿಕಾವ್ಯ: ಪ್ರೊ. ಪಿ.ಬಿ.ಬಿರಾದಾರ 

ವಿಜಯಪುರ 08: ಋಷಿಪುಂಗರಲ್ಲಿಯೇ ಶ್ರೇಷ್ಠ ಮತ್ತು ದಾರ್ಶನಿಕರಾದ ಮಹರ್ಷಿ ವಾಲ್ಮೀಕಿಯವರ ಜಯಂತಿಯನ್ನು ಆಚರಿಸುವ ನಾವೆಲ್ಲರೂ ಅವರ ಜೀವನ, ತತ್ವಾದರ್ಶಗಳು, ಮೌಲ್ಯಗಳು, ವಿಚಾರಧಾರೆ ಮತ್ತು ಬೋಧಿಸಿದ ಬದುಕಿನ ಮೌಲ್ಯಗಳ ಬಗ್ಗೆ ಅರಿತುಕೊಂಡು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡಾಗ ಮಾತ್ರ ಇಂದಿನ ಜಯಂತಿ ಆಚರಣೆಯು ಅರ್ಥಪೂರ್ಣ ಮತ್ತು ಸಾರ್ಥಕವಾಗುತ್ತದೆ ಎಂದು ಮುಖ್ಯ ಅತಿಥಿ ಪ್ರೊ. ಪಿ.ಬಿ.ಬಿರಾದಾರ ಅವರು ಅಭಿಪ್ರಾಯಪಟ್ಟರು. ಅವರು ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿನಾಂಕ: 13-10-2019 ರಂದು ಸಾಂಸ್ಕೃತಿಕ ವಿಭಾಗ ಹಾಗೂ ಎನ್‌.ಎಸ್‌.ಎಸ್‌. ಘಟಕಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿಶೇಷ ಉಪನ್ಯಾಸದಲ್ಲಿ ಮಾತನಾಡುತ್ತಿದ್ದರು.  

ಅವರು ಮಾತನಾಡುತ್ತಾ, ಮಹರ್ಷಿ ವಾಲ್ಮೀಕಿಯವರು ಪವಿತ್ರ ಮತ್ತು ಸಾಹಿತ್ಯ ಮಾಲೆಯಲ್ಲಿ ಸರ್ವಶ್ರೇಷ್ಠ ಸ್ಥಾನ ಪಡೆದ ಮಹಾಕಾವ್ಯ ‘ರಾಮಾಯಣ’ ವನ್ನು ಸಂಸ್ಕೃತದಲ್ಲಿ ರಚಿಸುವದರ ಮೂಲಕ ನ್ಯಾಯ-ನೀತಿ ಮತ್ತು ಧರ್ಮ ನಿರಪೇಕ್ಷತೆಗಳ ಬಗ್ಗೆ ಹಾಗೂ ಯುಗ ಯುಗಗಳ ಇತಿಹಾಸ ಮತ್ತು ರಾಮರಾಜ್ಯವನ್ನು ಸುಂದರವಾಗಿ ವರ್ಣಿಸಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಐ.ಹಂಜಗಿ ಅವರು, ಮಾತನಾಡುತ್ತಾ, ಬೇಟೆಗಾರ ಮತ್ತು ಡಕಾಯಿತನಾಗಿ ಕಾಡಿನಲ್ಲಿ ಸಂಚರಿಸುವ ಪ್ರಯಾಣಿಕರಿಂದ ಹಣ ದೋಚುವ ಸಾಮಾನ್ಯ ವ್ಯಕ್ತಿಯಾಗಿದ್ದ ವಾಲ್ಮೀಕಿಯು ನಾರದ ಮಹರ್ಷಿಗಳ ಹಿತೋಪದೇಶದಿಂದ ಜೀವನದಲ್ಲಿ ಪರಿವರ್ತನೆಗೊಂಡು ಲೋಕೋತ್ತರವಾದ ಆದಿಕಾವ್ಯವನ್ನು ಲೋಕಕ್ಕೆ ಕೊಡುಗೆಯಾಗಿ ನೀಡಿದರು. 

 ದಾರ್ಶನಿಕರಾದ ವಾಲ್ಮೀಕಿಯವರು ರಾಮಾಯಣ ಮಹಾಕಾವ್ಯದಲ್ಲಿ ಶ್ರೀರಾಮನಂಥ ನಾಯಕ, ರಾವಣನಂಥ ಪ್ರತಿನಾಯಕ ನೂರಾರು ಅದ್ಭುತ ಪಾತ್ರಗಳನ್ನು ಸೃಷ್ಟಿಸಿ, ಸಮಾಜಕ್ಕೆ ಮೌಲ್ವಿಕ, ವೈಚಾರಿಕ ಮತ್ತು ಜೀವನ ಸಂದೇಶ ನೀಡಿದ್ದಾರೆ ಎಂದರು. ಸಾಂಸ್ಕೃತಿಕ ಸಂಚಾಲಕ ಡಾ. ಚಂದ್ರಕಾಂತ.ಬಿ ಅವರುಸ ವೇದಿಕೆಯ ಮೇಲಿದ್ದರು. ಡಾ. ಸಂತೋಷ ಕಬಾಡೆ ಕಾರ್ಯಕ್ರಮ ನಿರೂಪಿಸಿದರು. ಪ್ರೊ. ಸುನೀಲಕುಮಾರ ತೋಂಟಾಪೂರ ವಂದಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.