ಸರ್ವ ಸಮಾಜದಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ

 ಸರ್ವ ಸಮಾಜದಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ  The entire society celebrates the birth anniversary of the great sage Kanakadasa.

ಲೋಕದರ್ಶನ ವರದಿ 

ಸರ್ವ ಸಮಾಜದಿಂದ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣೆ  

ದೇವರಹಿಪ್ಪರಗಿ 09:  ತಾಲೂಕಿನ ಮುಳಸಾವಳಗಿ ಗ್ರಾಮದ   ಅಮೋಘಸಿದ್ದೇಶ್ವರ ದೇವಸ್ಥಾನದಲ್ಲಿ ಸರ್ವ ಸಮಾಜದವರೊಂದಿಗೆ ಕೂಡಿಕೊಂಡು ದಾಸಶ್ರೇಷ್ಟ ಶ್ರೀ ಭಕ್ತ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು.ಅಮೋಘಸಿದ್ದೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಶಿವಪುತ್ರ. ಮಾ.ಪೂಜಾರಿ ಕನಕದಾಸರ ಭಾವಚಿತ್ರಕ್ಕೆ ಪೂಜೆಯನ್ನು ಸಲ್ಲಿಸಿ ಮಾಲಾರೆ​‍್ಣ ಮಾಡಿದರು.ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿನಿಧಿ ಗುರುರಾ ಆಕಳವಾಡಿಯವರು ಮಾತನಾಡಿ ಮುಳಸಾವಳಗಿ ಗ್ರಾಮದಲ್ಲಿ ಸರ್ವ ಸಮಾಜದವರು ಕೂಡಿಕೊಂಡು ಮಹಾಪುರುಷರ ಜಯಂತಿಯನ್ನು ಆಚರಿಸುತ್ತಿರುವುದು ಎಲ್ಲಾ ಗ್ರಾಮದವರಿಗೆ ಮಾದರಿಯಾಗಿದೆ ಎಂದರು.ಗ್ರಾಮ ಪಂಚಾಯತಿ ಕಾರ್ಯದರ್ಶಿ ವಿಶ್ವನಾಥ.ಚ.ಸರಬಡಗಿಯವರು ಮಾತನಾಡುತ್ತಾ ಸುಮಾರು ಐದುನೂರು ವರ್ಷಗಳ ಹಿಂದೆಯೇ ಸಮ ಸಮಾಜದ ಕಲ್ಪನೆಯನ್ನು ನೀಡಿದ ಕನಕದಾಸರು ಜಾತ್ಯಾತೀತ ಸಂತರಾಗಿದ್ದರು.ಅವರ ಕೀರ್ತನೆಗಳನ್ನು ಪಾಲಿಸೋಣ ಎಂದರು.ಕಸಾಪ ಮಾಜಿ ಅಧ್ಯಕ್ಷ ಜಿ.ಪಿ.ಬಿರಾದಾರ ಅವರು ಕನಕದಾಸರ ಬಾಲ್ಯ,ಅವರು ಬೆಳೆದು ಬಂದ ದಾರಿ,ಅವರು ಕ್ಲಿಷ್ಟಕರವಾದ ಸನ್ನಿವೇಶಗಳನ್ನು ಎದುರಿಸಿದ ಸಂದರ್ಭಗಳನ್ನು ಸವಿಸ್ತಾರವಾಗಿ ತಿಳಿಸಿಕೊಟ್ಟರು.ಶಿಕ್ಷಣ ಪ್ರೇಮಿ ಹಣಮಂತ ಹಿರೂರ ಮಾತನಾಡಿದರು.ಸಮಿತಿಯ ಉಪಾಧ್ಯಕ್ಷ ಅರವಿಂದ.ನಾಯ್ಕೋಡಿ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಮಾಳಪ್ಪ ಪೂಜಾರಿ,ಮಲಕು ಸುರಗಿಹಳ್ಳಿ ಮನೋಹರ. ಪೂಜಾರಿ, ಯಲ್ಲಾಲಿಂಗ ಪೂಜಾರಿ,ಮುದಕಪ್ಪ ಪೂಜಾರಿ,ಕೆಂಚು ಪೂಜಾರಿ,ಶರಣಪ್ಪ ಪೂಜಾರಿ,ಶಿವಾನಂದ ಹುಗ್ಗೇನವರ,ಜಟ್ಟೆಪ್ಪ ಹುಗ್ಗೇನವರ,ಸಾಬು ಹುಗ್ಗೇನವರ,ಬೀರ​‍್ಪ ಹುಗ್ಗೇನವರ,ಬೀರ​‍್ಪ ಪೂಜಾರಿ,ಜಾವೀದ ಮಕಾನದಾರ,ದಾವುದ ಇನಾಮದಾರ, ಸುರೇಶಉಕುಮನಾಳ,ಹಣಮಂತ ಬಿರಾದಾರ,ಉಮೇಶ ಮೂಲಿಮನಿ,ಸುನೀಲ ತಳವಾರ,ಕಾಸುಹುಗ್ಗೇನವರ,ಮಲ್ಲಿಕಾರ್ಜುನ ಪೂಜಾರಿ,ಸಿದ್ದು ಹುಗ್ಗೇನವರ, ಸೋಮು ಹುಗ್ಗೇನವರ, ರಫೀಕಗಂಗೂರ,ಅಮೋಗಿ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು