ಬೆಂಗಳೂರು, ಡಿ.25- ಸೃಷ್ಠಿ, ಪ್ರಕೃತಿಯ ಇತಿಹಾಸದಲ್ಲಿ 150 ವರ್ಷಗಳ ಬಳಿಕ ಕಾಣಿಸಿಕೊಳ್ಳುತ್ತಿರುವ ‘ಬೆಂಕಿಯ ಉಂಗುರ’ (ಕಂಕಣ) ಸೂರ್ಯಗ್ರಹಣ ಗುರುವಾರ ಗೋಚರಿಸಲಿದ್ದು, ಇದರ ಪರಿಣಾಮ ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಹಾಗೂ ಹಿಮಾಚಲ ಪ್ರದೇಶ ತಂಡಗಳ ರಣಜಿ ಪಂದ್ಯಕ್ಕೂ ತಟ್ಟಿದೆ.
ಭಾರತದಲ್ಲಿ ಬೆಳಗ್ಗೆ 7.59ರಿಂದ ಸೂರ್ಯ ಗ್ರಹಣ ಶುರುವಾಗಲಿದೆ. 10.47ಕ್ಕೆ ಗರಿಷ್ಠ ಪ್ರಮಾಣದಲ್ಲಿ ಕಾಣಿಸಿಕೊಳ್ಳಲಿದೆ. ಹೀಗಾಗಿ ಎರಡನೇ ದಿನದ ಮೊದಾಲವಧಿಯ ಪಂದ್ಯ ತಡವಾಗಿ ಆರಂಭವಾಗಲಿದೆ. ಮೊದಲಾವಧಿಯ ಪಂದ್ಯ ಗುರುವಾರ ಗ್ರಹಣ ಮುಕ್ತಾಯವಾದ ಬಳಿಕ ನಡೆಯಲಿದೆ. ಹೆಚ್ಚುವರಿ ಓವರ್ ಗಳ ಆಟ ಮೂರನೇ ದಿನ ಹಾಗೂ ನಾಲ್ಕನೇ ದಿನ ನಡೆಯಲಿದೆ ಎಂದು ಕರ್ನಾಟಕ ಕ್ರಿಕೆಟ್ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.