ಜನತೆಯ ಸೇವೆಯೇ ವೈದ್ಯರ ಕರ್ತವ್ಯ: ಎಂದು ಡಾ. ಅನೀಲ ಬುರಬುರೆ

ಲೋಕದರ್ಶನ ವರದಿ

ಶಿರಹಟ್ಟಿ 04: ವೈದ್ಯರನ್ನು ದೇವರೆಂದು ಕಾಣುವ ಸಂದರ್ಭದಲ್ಲಿ ವೈದ್ಯರಾದ ನಾವುಗಳು ದೇವರು ಮೆಚ್ಚುವ ರೀತಿಯಲ್ಲಿ ಸಾರ್ವಜನಿಕರ ಸೇವೆಯನ್ನು ಮಾಡುವುದು ಮುಖ್ಯವಾಗಿದೆ. ವೈದ್ಯ ವೃತ್ತಿಗೆ ಅಪಚಾರವಾಗದಂತೆ ನಾವು ನಡೆದುಕೊಳ್ಳುವುದು  ಜವಾಬ್ದಾರಿಯಾಗಿದೆ ಎಂದು ಡಾ. ಅನೀಲ ಬುರಬುರೆ ಹೇಳಿದರು. 

ಅವರು ಪಟ್ಟಣದ ಪ್ರಸಿದ್ದ ವೈದ್ಯರಾಗಿದ್ದ ದಿ. ಡಾ. ವಿನೋದ ಪಾಯದೆ ಅವರ ಪ್ರಥಮಪುಣ್ಯ ಸ್ಮರಣೆ ನಿಮಿತ್ತವಾಗಿ ಮಹೇಂದ್ರಕರ ಕ್ಲಿನಿಕ್ ಹಾಗೂ ಗದಗದ ಡಿಜಿಎಮ್ ಆಯುವರ್ೇದಿಕ ಕಾಲೇಜು ವೈದ್ಯರ ತಂಡದೊಂದಿಗೆ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರನ್ನು ಉದ್ಘಾಟಿಸಿ ಮಾತನಾಡಿದರು. 

ಡಾ. ವಿನೋದ ಪಾಯದೆಯವರು ತಮ್ಮ ಜೀವನದ ಉದ್ದಕ್ಕೂ ಹಣದಾಸೆಗೆ ಸೇವೆಯನ್ನು ಮಾಡದೆ ಸಮಾಜ ಸೇವೆಯನ್ನು ತಮ್ಮ ವೃತ್ತಿಯನ್ನು ಬಳೆಸಿಕೊಂಡು ಜನಾನುರಾಗಿಯಾಗಿದ್ದರು. ಇಂತವರು ನಮಗೆ ಆದರ್ಶರಾಗಿದ್ದಾರೆ. ವೃತ್ತಿಯಿಂದ ಬಂತಹ ಅಲ್ಪ ಸ್ವಲ್ಪ ಹಣವನ್ನು ಸಮಾಜದ ಸೇವೆಗೆಗಾಗಿ ಮುಡುಪಾಗಿಟ್ಟದ್ದರು. ತಾಲೂಕ ವೈದ್ಯರ ಸಂಘದ ಅಧ್ಯಕ್ಷರಾಗಿ ಉತ್ತಮವಾದ ಸೇವೆಯನ್ನು ಸಲ್ಲಿಸದವರಾಗಿದ್ದರು. ಇಂತಹ ಮಾಹನ್ ಪುರಷರ ಆದರ್ಶಗಳು ನಮಗೆಲ್ಲ ದಾರಿದೀಪವಾಗಿದ್ದು, ಇಂತಹ ಕಾರ್ಯಕ್ರಮಗಳು ಯುವಕರಿಗೆಲ್ಲ ಆದರ್ಶವಾಗಲಿ ಎಂದು ಹಾರೈಸಿದರು. 

ಇದೇ ಸಂದರ್ಭದಲ್ಲಿ ಟಿ.ಎಮ್ ಮಹೆಂದ್ರಕರ ಮಾತನಾಡಿ, ಡಾ.ವಿನೋದ ಪಾಯದೆ ಯವರ ಪ್ರಥಮ ಪುಣ್ಯ ಸ್ಮರಣೆ ಸಾರ್ಥಕಪಡಿಸುವುದಕ್ಕಾಗಿ ಉಚಿತವಾದ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದ್ದು, ಡಾ. ವಿನೋದ ಪಾಯಿದೆಯವರು ತಮ್ಮ ಜೀವನದ ಉದ್ದಕ್ಕೂ ಸಮಾಜದ ಸೇವೆಗಾಗಿ ಹಾತೊರೆಯುವವರಾಗಿದ್ದರು. ರೋಟರಿ ಕ್ಲಬ್ಗಳ ಮೂಲಕ ಮತ್ತು ತಾಲೂಕ ವೈದ್ಯ ಸಂಘದ ಮೂಲಕ ಸಾಕಷ್ಟು ಸೇವೆಯನ್ನು ಮಾಡಿ ಜನಾನುರಾಗಿಯಾಗಿದ್ದರು. ಇವರ ಚಿಂತನೆಗಳು, ಆಚರಣೆಗಳು ನಮಗೆಲ್ಲ ಮಾಧರಿಯಾಗಿದ್ದು, ಅವುಗಳನ್ನು ಮುಂದು ವರೆಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಿ.ಜಿ.ಎಮ್ ಆಯುವರ್ೇದಿಕ ಕಾಲೇಜಿನ ವೈದ್ಯರಾದ ಡಾ. ವಿ.ಎಮ್.ಆಡೂರ, ರವಿ ಬೇಂದ್ರೆ, ಸತೀಶ ಮುಧೋಳ್ಕರ, ವಿಲಾಸ ಸೊರಟೂರ, ಫಕ್ಕಿರೇಶ ರಟ್ಟಿಹಳ್ಳಿ, ಫಕ್ಕಿರೇಶ ಕಪ್ಪತ್ತನವರ, ರಾಜೇಸಾಬ ಆದ್ರಳ್ಳಿ, ವೆಂಕಟೇಶ ಬೇಂದ್ರೆ, ಪ್ರಭಾಕರ ಗಾಯಕವಾಡ ಮುಂತಾದವರು ಉಪಸ್ಥಿತರಿದ್ದರು.