ಶಿವಾನಂದ ಅವರಿಗೆ ಪ್ರಶಸ್ತಿ ದೊರೆತಿರುವುದು ಜಿಲ್ಲೆಗೆ ಹೆಮ್ಮೆ: ರಾಜು ಹೆಬ್ಬಳ್ಳಿ

ಶಿವಾನಂದ ಅವರಿಗೆ ಪ್ರಶಸ್ತಿ ದೊರೆತಿರುವುದು  ಜಿಲ್ಲೆಗೆ ಹೆಮ್ಮೆ: ರಾಜು ಹೆಬ್ಬಳ್ಳಿ The district is proud that Shivananda has received the award: Raju Hebballi

ಲೋಕದರ್ಶನ ವರದಿ 

ಗದಗ 04 : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು ಪ್ರತಿವರ್ಷ  ಪತ್ರಕರ್ತರ ಸಾಧನೆಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತ, ಅವರನ್ನು ಪ್ರೋತ್ಸಾಹಿಸುತ್ತಿದೆ. ಅದೇ ರೀತಿ 2024 ಸಾಲಿನ ತನಿಖಾ ವರದಿಗೆ ಜಿಲ್ಲೆಯ ವಿಜಯವಾಣಿ ಪತ್ರಿಕೆಯ ಹಿರಿಯ ವರದಿಗಾರರಾದ ಶಿವಾನಂದ ಹಿರೇಮಠ ಅವರಿಗೆ ಟಿ.ಕೆ.ಮಲಗೊಂಡ ತನಿಖಾ ವರದಿ ನೀಡಿ ರಾಜ್ಯ ಘಟಕ ಗೌರವಿಸಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ ಹೇಳಿದರು.

2024 ನೇ ಸಾಲಿನ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಟಿ.ಕೆ. ಮಲಗೊಂಡ ತನಿಖಾ ವರದಿ ಪ್ರಶಸ್ತಿ ಪುರಸ್ಕೃತ ಜಿಲ್ಲಾ ವಿಜಯವಾಣಿ ಹಿರಿಯ ವರದಿಗಾರ ಶಿವಾನಂದ ಹಿರೇಮಠ ಅವರನ್ನು ವಿಜಯವಾಣಿ ಕಚೇರಿಯಲ್ಲಿ ಜಿಲ್ಲಾ ಘಟಕದಿಂದ ಸನ್ಮಾಸಿ  ಮಾತನಾಡಿ, ಶಿವಾನಂದ ಹಿರೇಮಠ ಅವರು ತನಿಖಾ ವರದಿಗಳಿಗೆ ಹೆಸರು ವಾಸಿ. ಅವರಿಗೆ ಈ ಪ್ರಶಸ್ತಿ ಬಂದಿರುವುದು ಸಂಘಕ್ಕೆ ಮತ್ತು ಜಿಲ್ಲೆಗೆ ಹೆಮ್ಮೆ ಪಡುವ ವಿಷಯವಾಗಿದೆ.  ಅವರು ಸಂಶೋಧನಾತ್ಮಕ ವರದಿಗಳನ್ನು ಹೆಚ್ಚು ಆಸಕ್ತಿವಹಿಸಿ ಬರೆಯುತ್ತಾರೆ.

ಇನ್ನೂ ಹೆಚ್ವಿನ ಪ್ರಶಸ್ತಿಗಳು ಶಿವಾನಂದ ಅವರಿಗೆ ಒಲಿದು ಬರಲಿ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಶರಣು ದೊಡ್ಡೂರು, ಕಾರ್ಯಕಾರಿಣಿ ಸದಸ್ಯ ವೆಂಕಟೇಶ ಇಮರಾಪೂರ ಅವರು   ಮಾತನಾಡಿದರು. ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಅರುಣ ಹಿರೇಮಠ, ಮೌನೇಶ ಬಡಿಗೇರ, ಅನೀಲ ತೆಂಬದಮನಿ, ಸುನೀಲ ತೆಂಬದಮನಿ, ರಾಮು ವಗ್ಗಿ, ಮುತ್ತು ಜಡಿ, ಮಹಾಲಿಂಗೇಶ ಹಿರೇಮಠ, ಪರಶುರಾಮ ಹಳ್ಳದ ಸೇರಿದಂತೆ ಮುಂತಾದವರು.