ಭಾರತ, ಅಮೆರಿಕಾದಲ್ಲಿ ಸಹಿಷ್ಣುತೆಯ ಗುಣ ಕಣ್ಮರೆಯಾಗುತ್ತಿದೆ: ರಾಹುಲ್ ಗಾಂಧಿ

ನವದೆಹಲಿ, ಜೂನ್ ೧೨,ಸಹಿಷ್ಣುತೆ ಎಂಬ  ಗುಣ ಎರಡೂ ದೇಶಗಳಿಂದ ಕಣ್ಮರೆಯಾಗುತ್ತಿದೆ   ಎಂದು   ಕಾಂಗ್ರೆಸ್ ಮಾಜಿ ಅಧ್ಯಕ್ಷ  ರಾಹುಲ್ ಗಾಂಧಿ,  ಶುಕ್ರವಾರ ಅಮೆರಿಕಾದ ಮಾಜಿ ರಾಜತಾಂತ್ರಿಕ  ನಿಕೋಲಸ್ ಬರ್ನ್ಸ್  ಅವರೊಂದಿಗಿನ   ವಿಡಿಯೋ ಕಾನ್ಪರೆನ್ಸ್  ಸಂವಾದದ ವೇಳೆ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮದು   ಸಹಿಷ್ಣು ವ್ಯವಸ್ಥೆ ಗಳಾಗಿರುವ  ಕಾರಣ  ನಮ್ಮ ಸಹಭಾಗಿತ್ವ  ಸಾಧ್ಯವಾಗಿದೆ, ನೀವು(ಬರ್ನ್ಸ್)  ಹೇಳಿದಂತೆ ನಿಮ್ಮದು  ವಲಸೆ ರಾಷ್ಟ್ರ. ನಮ್ಮದು  ಸಹಿಷ್ಣುತೆಯ  ದೇಶ  ನಮ್ಮ ಡಿಎನ್‌ಎಯಲ್ಲಿಯೇ ಸಹಿಷ್ಣುತೆ  ಮೇಳೈಸಿದೆ. ನಾವು ಮುಕ್ತವಾಗಿರಬೇಕು ಆದರೆ,    ಮುಕ್ತತತೆಯ  ಗುಣ    ನಮ್ಮೆರಡೂ ದೇಶಗಳಿಂದಲೂ  ಕಣ್ಮರೆಯಾಗುತ್ತಿದೆ. ನಾನು  ಈ ಮಟ್ಟದ ಅಸಹಿಷ್ಣತೆಯನ್ನು   ನಾನೆಂದೂ ನೋಡಿರಲಿಲ್ಲ   ಎಂದು ಹೇಳಲು ದುಃಖವಾಗುತ್ತಿದೆ.   ಸಹಿಷ್ಣತೆಯನ್ನು ಅಮೆರಿಕಾದಲ್ಲೂ ನೋಡಲು ಸಾಧ್ಯವಿಲ್ಲ. ಅದು  ಭಾರತದಲ್ಲಿ ಕಾಣುವುದಿಲ್ಲಎಂದು ಕಾಂಗ್ರೆಸ್ ಪಕ್ಷ  ಆಯೋಜಿಸಿದ್ದ ಸಂವಾದದಲ್ಲಿ ರಾಹುಲ್  ಗಾಂಧಿ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.