ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಸಂಘದ ಅಭಿವೃದ್ಧಿ: ಬಿರಾದಾರ

ಸಕಾಲದಲ್ಲಿ ಸಾಲ ಮರುಪಾವತಿಸಿದರೆ ಸಂಘದ ಅಭಿವೃದ್ಧಿ: ಬಿರಾದಾರ The development of the association will be possible if the loan is repaid on time: Biradaar

ತಾಳಿಕೋಟಿ, 25 ; ಸಂಘದ ಸದಸ್ಯರು ಸಹಕಾರ ನೀಡಿದರೆ ಮಾತ್ರ ಸಹಕಾರಿ ಸಂಘಗಳು ಬೆಳವಣಿಗೆಯಾಗಲು ಸಾಧ್ಯವಿದೆ. ಸಂಘವು 50 ವರ್ಷಗಳ ಅವಧಿಯಲ್ಲಿ ಎಲ್ಲರ ಸಹಕಾರದಿಂದ ಸಾಕಷ್ಟು ಪ್ರಗತಿಯನ್ನು ಸಾಧಿಸಿದೆ ಎಂದು ಆಡಳಿತ ಮಂಡಳಿಯ ನಿರ್ದೇಶಕ ಶಿವನಗೌಡ ಬಿರಾದಾರ ಹೇಳಿದರು. 

ದೇವರ ಹಿಪ್ಪರಗಿ ಮತಕ್ಷೇತ್ರದ ಶರಣ ಸೋಮನಾಳ ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಇದರ 50ನೇ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂಘವು ತನ್ನ ಸ್ವಂತ ಕಟ್ಟಡವನ್ನು ಹೊಂದಿದ್ದು, ಇದರ ಅಡಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗಿದೆ ಇದರಿಂದ ಬರುವ ಆದಾಯವನ್ನೂ ಸಂಘಕ್ಕೆ ತೆಗೆದುಕೊಳ್ಳಲಾಗುತ್ತಿದೆ, ಭವಿಷ್ಯದಲ್ಲಿ ಇನ್ನೂ ಹಲವಾರು ವ್ಯವಹಾರಗಳನ್ನು ಆರಂಭಿಸಬೇಕಾಗಿದೆ ಆದ್ದರಿಂದ ಸಂಘದ ಸದಸ್ಯರು ಕೇವಲ ಸಾಲಗಳನ್ನು ತೆಗೆದುಕೊಳ್ಳುವುದನ್ನೂ ಯೋಚಿಸದೆ ತಮ್ಮ ಠೇವಣೆಗಳನ್ನೂ ಸಂಘದಲ್ಲಿಯೇ ಇಡಲು ಪ್ರಯತ್ನಿಸಬೇಕು ಎಂದರು. ಬಸವ ಸಮಿತಿ ಯುವ ಮುಖಂಡ ಶಂಕರಗೌಡ ಬಿರಾದಾರ ಅವರು ಮಾತನಾಡಿ ಸಹಕಾರ ಸಂಘಗಳು ಲಾಭದಾಯಕ ಸಂಸ್ಥೆಗಳಾಗಿರದೇ ಸೇವಾ ಸಂಸ್ಥೆಗಳಾಗಿವೆ. ರೈತರ ಕಲ್ಯಾಣ ಇವುಗಳ ಮುಖ್ಯ ಉದ್ದೇಶವಾಗಿದೆ, ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಒದಗಿಸಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದಾಗಿದೆ. ಸಹಕಾರಿ ಸಂಘಗಳನ್ನು ರಾಜಕೀಯ ಹಸ್ತಕ್ಷೇಪದಿಂದ ರಕ್ಷಿಸಬೇಕಾಗಿದೆ ಆದಷ್ಟು ಚುನಾವಣೆಗಳು ನಡೆಯದಂತೆ ನೋಡಿಕೊಳ್ಳಬೇಕು ಇದರಿಂದ ಸಂಘಕ್ಕೆ ಅಪಾರ ನಷ್ಟವಾಗುತ್ತದೆ ಈ ಸಂಘವು ತನ್ನ 50 ಸಂವಸ್ತರಗಳನ್ನು ಪೂರೈಸಿರುವುದು ಹೆಮ್ಮೆಯ ವಿಷಯವಾಗಿದೆ ನಾನು ಆಡಳಿತ ಮಂಡಳಿ ನಿರ್ದೇಶಕರಿಗೆ ಸಿಬ್ಬಂದಿ ವರ್ಗ ಹಾಗೂ ಸದಸ್ಯರಿಗೆ ಅಭಿನಂದಿಸುತ್ತೇನೆ ಎಂದರು.  

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಎಂ.ದೇಸಾಯಿ ಮಾತನಾಡಿ ಸದಸ್ಯರ ಸಹಕಾರದಿಂದ ಸಂಘ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ ಸಂಘವು2100 ಸದಸ್ಯರನ್ನು ಹೊಂದಿದೆ.85.96 ಲಕ್ಷ ಶೇರು ಬಂಡವಾಳ,10.38 ಕೋಟಿ ದುಡಿಯುವ ಬಂಡವಾಳ, 7.96 ಕೋಟಿ ಸಾಲಗಳನ್ನು ನೀಡಿದ್ದು ರೂ.6.66 ಲಕ್ಷ ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ 2024-25 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿನಿಯರಾದ ತೇಜಸ್ವಿನಿ ಬಿರಾದಾರ ಹಾಗೂ ಗೌರಮ್ಮ ಕಲಿಕೇರಿ ಇವರನ್ನು ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಸಭೆಯ ಆರಂಭದಲ್ಲಿ ಸಂಘದ ಭೂಧಾನಿಗಳಾದ ದಿವಂಗತ ರಾಮನಗೌಡ ಡಿ.ಪಾಟೀಲ ಇವರಿಗೆ ಶ್ರದ್ಧಾಂಜಲಿ ಅರ​‍್ಿಸಲಾಯಿತು. 

 ಸಂಘದ ಅಧ್ಯಕ್ಷರಾದ ಅಯ್ಯನಗೌಡ ಗು. ಪಾಟೀಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವೇ.ಮೂ.ಬದ್ರಯ್ಯ ಹಿರೇಮಠ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಉಪಾಧ್ಯಕ್ಷ ಈರಣ್ಣ ಮ. ಕಚನೂರ, ನಿರ್ದೇಶಕರಾದ ಚನ್ನಬಸಪ್ಪ ಕಚನೂರ, ಬಸಲಿಂಗಪ್ಪಗೌಡ ಬಿರಾದಾರ, ಮಾಂತಗೌಡ ಪಾಟೀಲ, ಬಾಗಪ್ಪ ಕೊಡೆಕಲ್, ಪ್ರತಿನಿಧಿಗಳಾದ ಬಾಪುಗೌಡ ಧನ್ನೂರ, ಮಲ್ಲಣ್ಣ ಸಾಸನೂರ, ಬಸನಗೌಡ ನಾಡಗೌಡ, ಚಂದ್ರಶೇಖರ ಮಾರನಾಳ, ಕಾಸಪ್ಪ ಮಾದರ, ಹಿರಿಯರಾದ ಮಶಾಕಸಾಬ ವಾಲಿಕಾರ, ಭೀಮನಗೌಡ ಸಾಸನೂರ, ಶಂಕ್ರ​‍್ಪ ನಂದ್ಯಾಳ, ಮಲ್ಲಣ್ಣ ಸೌಕಾರ ಗುರುಸಿದ್ದಪ್ಪ ಸಾಸನೂರ, ಸಂಘದ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಇದ್ದರು.