ಸೇವಾ ನಿವೃತ್ತ ಪಿಡಿಓ ಹಿರೇಮಠ ಹಾಗೂ ಕಲಹಾರಿಗೆ ಬೀಳ್ಕೊಡುವ ಸಮಾರಂಭ
The department has always done a memorable job: EO Masali
ಇಲಾಖೆ ಸದಾ ಸ್ಮರಿಸುವ ಹಾಗೆ ಕೆಲಸ ಮಾಡಿದ್ದಾರೆ: ಇಒ ಮಸಳಿ
ತಾಳಿಕೋಟಿ: ತಾಲೂಕಿನ ಹಿರೂರ ಗ್ರಾಮ ಪಂಚಾಯತ್ ಪಿಡಿಒ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಚನಬಸಯ್ಯ ಮಠ ಹಾಗೂ ತುಂಬಗಿ ಗ್ರಾಪಂ ನಲ್ಲಿ ಗ್ರೇಡ್-1 ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ನಿಂಗಪ್ಪ ಕಲಹಾರಿ ಇವರು ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ತಮ್ಮ ಸೇವೆಯನ್ನು ಪೂರ್ತಿಗೊಳಿಸಿ ಇಂದು ನಿವೃತ್ತ ರಾಗುತ್ತಿದ್ದಾರೆ ಆರಿ್ಡ.ಪಿ.ಆರ್. ಇಲಾಖೆಯಲ್ಲಿ ಸೇವೆಯನ್ನು ಮಾಡುವುದು ಸುಲಭ ಕಾರ್ಯವಲ್ಲ ಇಲ್ಲಿ ಸಾರ್ವಜನಿಕರ ಹಲವಾರು ಸಮಸ್ಯೆಗಳನ್ನು ಪರಿಹರಿಸಬೇಕಾಗುತ್ತದೆ ಇದರ ಮಧ್ಯೆಯು ಈ ಇಬ್ಬರು ತಮ್ಮ ಪ್ರಾಮಾಣಿಕ ಸೇವೆಯಿಂದ ಇಲಾಖೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅವರಿಬ್ಬರ ವಿಶ್ರಾಂತ ಬದುಕು ನೆಮ್ಮದಿದಾಯಕವಾಗಿರಲೆಂದು ಹಾರೈಸುತ್ತೇನೆ ಎಂದು ತಾಲೂಕಾ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ನಿಂಗಪ್ಪ ಮಸಳಿ ಹೇಳಿದರು.
ಹಿರೂರ ಪಿಡಿಒ ಚನಬಸಯ್ಯ ಮಠ ಹಾಗೂ ತುಂಬಗಿ ಗ್ರಾಪಂ ಕಾರ್ಯದರ್ಶಿ ನಿಂಗಪ್ಪ ಬಿ.ಕಲಹಾರಿ ಇವರು ಸೇವಾ ನಿವೃತ್ತಿ ಹೊಂದಿದ ನಿಮಿತ್ಯ ತಾಲೂಕ ಪಂಚಾಯತ್ ಹಾಗೂ ಪಿಡಿಒ ಕ್ಷೇಮಾಭಿವೃದ್ಧಿ ಸಂಘದ ತಾಳಿಕೋಟಿ ತಾಲೂಕ ಘಟಕದ ಸಹಯೋಗದಲ್ಲಿ ಶನಿವಾರ ಸಂಜೆ ಹಮ್ಮಿಕೊಂಡ ಸನ್ಮಾನ ಹಾಗೂ ಬೀಳ್ಕೊಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಪಂ ಸಹಾಯಕ ನಿರ್ದೇಶಕಿ ಸುಜಾತಾ ಯಡ್ರಾಮಿ ಮಾತನಾಡಿ ಇಂದು ನಿವೃತ್ತರಾದ ಇಲಾಖೆಯ ಈ ಇಬ್ಬರು ಹಿರಿಯರು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಮಿತ ಭಾಷಿ ಸ್ವಭಾವದವರಾಗಿದ್ದು ಇಲಾಖೆ ಅಪಾರ ಅನುಭವ ಹೊಂದಿದವರಾಗಿದ್ದರು ಅವರ ಕರ್ತವ್ಯ ನಿಷ್ಠೆ ಸಮಯ ಪಾಲನೆ ಹಾಗೂ ಶಿಸ್ತು ನಮಗೆಲ್ಲರಿಗೂ ಮಾದರಿ ಯೋಗ್ಯವಾಗಿದೆ, ಅವರ ವಿಶ್ರಾಂತ ಜೀವನ ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದರು.
ಪಿಡಿಒಗಳಾದ ಬಿ.ಎಂ.ಸಾಗರ, ಅನೀಲಕುಮಾರ ಕಿರಣಗಿ, ಬಸನಗೌಡ ಚೌಧರಿ, ಪ್ರಭು ಚೆನ್ನೂರ, ಸಿಒ ಸಂಘದ ಅಧ್ಯಕ್ಷ ಮಹಾಂತೇಶ ಬಿರಾದಾರ ಮಾತನಾಡಿದರು. ನಿವೃತ್ತ ಪಿಡಿಒ ಮಠ ಹಾಗೂ ಕಾರ್ಯದರ್ಶಿ ಕಲಹಾರಿ ಇವರನ್ನು ಕುಟುಂಬ ಸಮೇತವಾಗಿ ತಾಪಂ ಕಾರ್ಯಾಲಯ, ಪಿಡಿಒ ಕ್ಷೇಮಾಭಿವೃದ್ಧಿ ಸಂಘ, ಗಣಕಯಂತ್ರ ಆಪರೇಟರ್ ಸಂಘ ಹಾಗೂ ಬಂಟನೂರ ಗ್ರಾಮಸ್ಥರಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ತಾಲೂಕಿನ ಗ್ರಾಪಂ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು, ಪಿಡಿಒಗಳು, ಕಾರ್ಯದರ್ಶಿಗಳು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿಗಳು ಮತ್ತಿತರರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 