ಬೆನಕಟ್ಟಿಗೆ ಬಸ್ ನಿಲ್ಲಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಬೇಕು ಆಗ್ರಹ
ಯರಗಟ್ಟಿ 12: ಯರಗಟ್ಟಿಯಿಂದ ಸವದತ್ತಿಗೆ ಒಡಾಡುವ ಬಸ್ ಗಳನ್ನು ಬೆಳಿಗ್ಗೆ ಮತ್ತು ಸಂಜೆ ವೇಳೆ ಸರಿಯಾದ ಸಮಯಕ್ಕೆ ಒಡಿಬೇಕು ಹಾಗೂ ಬೆನಕಟ್ಟಿಗೆ ಬಸ್ ನಿಲ್ಲಿಸಿ ಅಲ್ಲಿನ ವಿದ್ಯಾರ್ಥಿಗಳಿಗೆ ಅನುಕೂಲತೆ ಒದಗಿಸಬೇಕು.ಬೆನಕಟ್ಟಿ ಹಾಗೂ ಸುತ್ತಲಿನ ವಿದ್ಯಾರ್ಥಿಗಳಿಗೆ ಶಾಲೆ ವೇಳೆ ಸರಿಯಾಗಿ ಮುಟ್ಟಲು ಆಗುತ್ತಿಲ್ಲ. ಆದ್ದರಿಂದ ಬಸ್ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಹಾಗೂ ಕನ್ನಡ ರಕ್ಷಣಾ ವೇದಿಕೆ ಕಾರ್ಯಕರ್ತರು ಇಲ್ಲಿನ ಬಸ್ ನಿಯಂತ್ರಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.ರಕ್ಷಣಾ ವೇದಿಕೆ ತಾಲುಕು ಅಧ್ಯಕ್ಷ ಸುರೇಶ ಮುರಗೋಡ, ಸುರೇಶ ಭಜಂತ್ರಿ, ವಿಠ್ಠಲ ಕಟ್ಟೆಕಾರ, ರಾಮಪ್ಪ ಟಪಾಲ, ಸಂತೋಷ ಯರಝರ್ವಿ, ಕಿಟ್ಟು ತೆಗ್ಗಿಹಾಳ ಇತರರು ಇದ್ದರು.