ಬಾಕ್ಸಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಮತ್ತೊಬ್ಬ ಬಾಕ್ಸರ್ ಸಾವು

ಬ್ಯೂನಸ್ ಐರಿಸ್, ಜು 26  ರಷ್ಯನ್ ಮ್ಯಾಕ್ಸಿಮ್ ದಾದಾಶೇವ್ ಅವರು ಅಮೆರಿಕದಲ್ಲಿ ಮೃತಪಟ್ಟ ಕೇವಲ ಎರಡೇ ದಿನಗಳ ಅಂತರದಲ್ಲಿ ಬಾಕ್ಸಿಂಗ್ ವೇಳೆ ಗಂಭೀರ ಗಾಯಗೊಂಡಿದ್ದ ಅರ್ಜೆಂಟೀನಾ ಬಾಕ್ಸರ್ ಹ್ಯೂಗೊ ಸ್ಯಾಂಟಿಲೀಯನ್ ಅವರು ಗುರುವಾರ ಕೊನೆಯುಸಿರೆಳೆದಿದ್ದಾರೆ.  

ಇಲ್ಲಿ ನಡೆದ ಬಾಕ್ಸಿಂಗ್ನಲ್ಲಿ 10 ಸುತ್ತಿನ ಪಂದ್ಯಗಳ ಫಲಿತಾಂಶವನ್ನು ಪ್ರಕಟಿಸುತ್ತಿದ್ದಂತೆ ಅರ್ಜೆಂಟೀನಾ ಬಾಕ್ಸರ್ ಸ್ಯಾಂಟಿಲೀಯನ್ ಅವರು ಕುಸಿದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಪರ್ದೆಯಲ್ಲಿ ತಲೆಗೆ ಗಾಯವಾಗಿದ್ದು, ಮೆದುಳಿಗೆ ಬಲವಾದ ಹೊಡೆತವಾಗಿದೆ. ಇದರ ಜತೆ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ವೈದ್ಯರು ಖಚಿತಪಡಿಸಿದ್ದಾರೆ. 

ರಷ್ಯನ್ ಮ್ಯಾಕ್ಸಿಮ್ ದಾದಾಶೇವ್ ಮರ್ಯಾಲೆಂಢ್ನಲ್ಲಿ  ಮಂಗಳವಾರ ನಡೆದಿದ್ದ ಬಾಕ್ಸಿಂಗ್ನಲ್ಲಿ ರಷ್ಯನ್ ಮ್ಯಾಕ್ಸಿಮ್ ದಾದಾಶೇವ್ ಅವರು ಪ್ಯೂರ್ಟೂ ರಿಸಾನ್ ಸುಬ್ರಿಲ್ ವಿರುದ್ಧ ಸೆಣಸಿದ್ದರು. ಈ ವೇಳೆ ಅವರ ಮೆದುಳಿಗೆ ಬಲವಾದ ಪೆಟ್ಟು ತಗುಲಿದ್ದರಿಂದ ಅವರ ನೆಲಕ್ಕೆ ಕುಸಿದು ಕೊನೆಯುಸಿರೆಳೆದಿದ್ದರು.