ವಿಜಯಪುರ. ಅ 01: ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಂತಿ ಮೇಲೆ ನಡೆಯುತ್ತಿದ್ದಾರೋ, ಬೆಂಕಿ ಮೇಲೆ ನಡೆಯುತ್ತಿದ್ದಾರೋ ತಮಗೆ ಅದು ಗೊತ್ತಿಲ್ಲ,ಈ ಬಗ್ಗೆ ಯಡಿಯೂರಪ್ಪ ಅವರೇ ಹೇಳಬೇಕು ಎಂದು ಅವರು ಮಾಜಿ ಸಚಿವ ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಾವು ವೀರಶೈವ ಧರ್ಮದಲ್ಲಿ ಕೈ ಹಾಕಿಲ್ಲ. ನಮ್ಮದು ಲಿಂಗಾಯತ ಧರ್ಮ. ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ನಮ್ಮ ಅಸ್ಮಿತೆ, ಇದರಲ್ಲಿ ಎರಡು ಮಾತಿಲ್ಲ. ಕೇಂದ್ರ ಸಕರ್ಾರ ಜೈನ್ ಧರ್ಮಕ್ಕೆ ಮಾನ್ಯತೆ ನೀಡಿದಂತೆ ನಮ್ಮ ಧರ್ಮಕ್ಕೂ ಮಾನ್ಯತೆ ನೀಡಬೇಕು ಲಿಂಗಾಯತ ಧರ್ಮ ಹೋರಾಟದ ಬಗ್ಗೆ ಮುಂದಿನ ದಿನಗಳಲ್ಲಿ ಕಾದು ನೋಡಿ ಎಂದರು.
ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸಕರ್ಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಾನೇನಾದರೂ ಬಿಎಸ್ ಯಡಿಯೂರಪ್ಪ ಅವರ ಜಾಗದಲ್ಲಿ ಇದ್ದರೆ ರಾಜೀನಾಮೆ ನೀಡುತ್ತಿದೆ. ಯಡಿಯೂರಪ್ಪ ಅವರನ್ನು ಉತ್ತರ ಕನರ್ಾಟಕ ದ ಜನರು ಕೈ ಹಿಡಿದಿದ್ದಾರೆ. ಆದರೆ, ಇದೀಗ ಉತ್ತರ ಕನರ್ಾಟಕವನ್ನು ಅವರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅವರು ನುಡಿದರು. ಅಲ್ಲದೇ ಈಶ್ವರಪ್ಪ, ತೇಜಸ್ವಿ ಸೂರ್ಯ ಪ್ರವಾಹದಲ್ಲಿ ಸಿಲುಕಲಿ.ಆಗ ಅವರಿಗೆ ಪ್ರವಾಹ ಸಂತ್ರಸ್ಥರ ಪರಿಸ್ಥಿತಿ ಅರ್ಥವಾಗುತ್ತದೆ. ಪ್ರವಾಹ ಸಂತ್ರಸ್ತರಿಗೆ ಸರಿಯಾದ ಪರಿಹಾರ ಕೈಗೊಂಡಿಲ್ಲ. ಸ್ಥಳಾಂತರ ಮಾಡುವ ವಿಚಾರದಲ್ಲಿ ಯಾವುದೇ ಕಾರ್ಯ ಮಾಡಿಲ್ಲ, ಉತ್ತರ ಕನರ್ಾಟಕದ ಜನರ ಶಾಪ ಸಕರ್ಾರಕ್ಕೆ ತಟ್ಟಲಿದೆ. ನಾನು ಸ್ವತಃ ಪ್ರವಾಹ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದೇನೆ. ಸಕರ್ಾರ ಪ್ರವಾಹ ಸಂತ್ರಸ್ತರಿಗೆ ನೀರಿಕ್ಷಿತ ಮಟ್ಟದಲ್ಲಿ ಸಹಾಯ ಮಾಡಿಲ್ಲ ಎಂದು ಎಂ.ಬಿ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.