ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ
The contribution of Veerashaiva monasteries to the field of education is immense.
ಶಿಕ್ಷಣ ಕ್ಷೇತ್ರಕ್ಕೆ ವೀರಶೈವ ಮಠಗಳ ಕೊಡುಗೆ ಅಪಾರ
ಹೂವಿನ ಹಡಗಲಿ 9 : ಮಕ್ಕಳು ಶಿಕ್ಷಣ ದಿಂದ ವಂಚಿತರಾಗಬಾರದೆಂದು ವೀರಶೈವ ಮಠಗಳು ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ ಪ್ರಗತಿಗೆ ಶ್ರಮಿಸಿವೆ ಎಂದು ಅಭಿನವ ಸಿದ್ಧವೀರ ಶಿವಾಚಾರ್ಯ ಮಹಾಸ್ವಾಮಿಗಳು ಅಭಿಮತ ವ್ಯಕ್ತಪಡಿಸಿದರು.ತಾಲೂಕಿನ ಪುರ ಗ್ರಾಮದಲ್ಲಿ ಶನಿವಾರ ನೂಲ ಹುಣ್ಣಿಮೆ ಅಂಗವಾಗಿ 133 ನೇ ಮಾಸಿಕ ಧರ್ಮ ಸಭೆಯಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ಶಿವನಕಟ್ಟೇಶ್ವರ ಕಲಾ ಟ್ರಸ್ಟ್ ನ ಅಧ್ಯಕ್ಷ ಆರ್ ಜಿ ನಾಗರಾಜ. ಪತ್ರಕರ್ತರಾದ ಎಂ ಪಿ ಎಂ ಶಿವಪ್ರಕಾಶ್ ಎಂ ದಯಾನಂದ ಮಾತನಾಡಿದರು.ವೇದ ಮೂರ್ತಿ ಪಿ ಕೆ ಎಂ ವಿಶ್ವಾನಂದಸ್ವಾಮಿ, ವಿ ಸಿ ಪಾಟೀಲ್, ಗಡ್ಡಿ ಗುಡ್ಡಪ್ಪ, ಎನ್ ಸುಧಾಕರ, ಕರಿಶೆಟ್ಟಿ ಬಸವರಾಜ ನಿವೃತ್ತ ಮುಖ್ಯ ಗುರು ಎಂ ಪಿ ಎಂ ಕೊಟ್ರಯ್ಯ ಇದ್ದರು. ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ ಪಿ ಎಂ ಶಿವಪ್ರಕಾಶ್, ಎಂ ದಯಾನಂದ, ಸೋವೇನಹಳ್ಳಿಯ ಹೆಚ್ ಎಂ ಚಂದ್ರಶೇಖರಯ್ಯ ಶಾಸ್ತ್ರಿ,ಪುರದ ನಿವೃತ್ತ ಶಿಕ್ಷಕ ಕಾಗನೂರು ರಂಗಪ್ಪ, ಗಿರಿಮಲ್ಲಿಗೆ ಸಹಕಾರಿ ಅಧ್ಯಕ್ಷೆ ಸವಿತಾ ಅಂಗಡಿ ರವರಿಗೆ ಗುರುರಕ್ಷೆ ನೀಡಿ ಸತ್ಕರಿಸಲಾಯಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಸೋವೇನಹಳ್ಳಿಯ ಶ್ರೀ ಶಿವನಕಟ್ಟೇಶ್ವರ ಸಾಂಸ್ಕೃತಿಕ ಕಲಾ ಟ್ರಸ್ಟ್ ವತಿಯಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.ಗೌರೀಶ ಅಂಗಡಿ, ಪ್ರಭು ಸೊಪ್ಪಿನ, ಡಿ ಮೇಘರಾಜ ನಾಯ್ಕ ನಿರೂಪಿಸಿದರು.ಕಂದಗಲ್ಲಿನ ಶ್ರೀ ಗೋಣಿ ಬಸವೇಶ್ವರ ಭಜನಾ ಸಂಘದವರು ಸಂಗೀತ ಸೇವೆ ಸಲ್ಲಿಸಿದರು.
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ
ಇಂಗ್ಲೆಂಡ್ನ ಮಹರ್ಷಿ ಶ್ರೀ ವಾಲ್ಮೀಕಿ ಆಶ್ರಮಕ್ಕೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಮನೆ ಮನೆಗಳ ಮೇಲೆ ಕನ್ನಡ ಬಾವುಟ ಅಭಿಯಾನ–2026’: 5 ಸಾವಿರ ಕನ್ನಡ ಧ್ವಜಗಳ ಉಚಿತ ವಿತರಣೆ
ಉತ್ತರ ವಲಯ ಪೊಲೀಸರಿಂದ ರೌಡಿ ನಿಗ್ರಹಕ್ಕೆ ಕಠಿಣ ಕ್ರಮ : 23 ರೌಡಿಗಳ ಗಡಿಪಾರು 