ಶನೇಶ್ವರರ ದೇವಸ್ಥಾನ ನಿರ್ಮಾಣವಾಗಿರೋದು ನಮ್ಮೆಲ್ಲರ ಪುಣ್ಯ: ಪ್ರಭುಗೌಡ ದೇಸಾಯಿ
The construction of the Shaneshwar temple is a blessing for all of us: Prabhugowda Desai
ಮುದ್ದೇಬಿಹಾಳ 19: ಶನೇಶ್ವರರ ದರ್ಶನಕ್ಕಾಗಿ ನಮ್ಮ ಭಾಗದ ಜನತೆ ಸಾವಿರಾರು ರೂಪಾಯಿ ಖರ್ಚು ಮಾಡಿ, ದಿನಗಟ್ಟಲೆ ಪ್ರಯಾಣ ಬೆಳೆಸಿ ಮಹಾರಾಷ್ಟ್ರದವರೆಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ, ಈಗ ನಮ್ಮ ಪಟ್ಟಣದಲ್ಲಿಯೇ ಶನೇಶ್ವರರ ಭವ್ಯ ಮಂದಿರ ನಿರ್ಮಾಣವಾಗಿರುವುದು ನಮ್ಮೆಲ್ಲರ ಪುಣ್ಯ ಎಂದು ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷರಾದ ಪ್ರಭುಗೌಡ ದೇಸಾಯಿ ಅವರು ಅಭಿಪ್ರಾಯಪಟ್ಟರು.
ಶನೇಶ್ವರ ಜಯಂತಿ ಅಂಗವಾಗಿ ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ನೂತನ ಶನೇಶ್ವರ ದೇವಸ್ಥಾನದಲ್ಲಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿ, ಜನಸಾಮಾನ್ಯರಂತೆ ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆದು, ಬಳಿಕ ದೇವಸ್ಥಾನ ಕಮೀಟಿ ವತಿಯಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ನಮ್ಮ ಭಾಗದ ಜನತೆಗೆ ದೈವಭಕ್ತಿ ಜಾಸ್ತಿ. ಅದರಲ್ಲೂ ಶನಿಮಹಾತ್ಮನ ದೋಶ ನಿವಾರಣೆಗೆ, ಕಾಟ ಪರಿಹಾರಕ್ಕೆ ಮಹಾರಾಷ್ಟೊದ ಶನಿ ಶಿಂಗಣಾಪೂರದವರೆಗೆ ಹೋಗಿ ಬರಲು ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿತ್ತು. ಈಗ ಇಲ್ಲಿಯೇ ಇಷ್ಟೊಂದು ಸುಂದರ ಮತ್ತು ದೈವಿಕ ಕಳೆಯಿಂದ ಕೂಡಿರುವ ಶನೇಶ್ವರ ದೇವಸ್ಥಾನ ನಿರ್ಮಾಣವಾಗಿರುವದು ಈ ಭಾಗದ ವಯೋವೃದ್ಧರಿಗೆ, ಮಹಿಳೆಯರಿಗೆ ಸೇರಿದಂತೆ ಎಲ್ಲ ಭಕ್ತರಿಗೆ ಶನಿದೇವರ ದರ್ಶನದ ಭಾಗ್ಯ ಬಹುಸುಲಭವಾಗಿ ದೊರೆತಂತಾಗಿದೆ. ಅಲ್ಲದೇ ಈ ಭಾಗದ ಜನತೆಯ ಮನೆ-ಮನಗಳಲ್ಲಿ ಸಂತಸ ತಂದಿದೆ. ಬರುವ ದಿನಗಳಲ್ಲಿ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಪ್ರತಿಯೊಬ್ಬರೂ ಶ್ರಮಿಸೋಣ ಎಂದರು.
ಗಣ್ಯ ವ್ಯಾಪಾರಿ ವಿಕ್ರಂ ಓಸ್ವಾಲ್ ಅವರು ಮಾತನಾಡಿ, ದೇವಸ್ಥಾನಗಳನ್ನ ನಿರ್ಮಿಸುವದು ಅಷ್ಟೊಂದು ಸುಲಭದ ಮಾತಲ್ಲ. ಆದರೆ ಒಬ್ಬ ನಿವೃತ್ತ ಕೆಎಸ್ಆರಿ್ಟಸಿ ನೌಕರರಾದ ನಾಗಪ್ಪ ಮಕ್ತೇದಾರ ಅವರು ತಾವೊಬ್ಬರೇ ನಿಂತು ದಾನಿಗಳ ಸಹಾಯದಿಂದ ಇಂಥದ್ದೊಂದು ಭವ್ಯ ದೇವಸ್ಥಾನ ನಿರ್ಮಿಸಿದ್ದು ಶ್ಲಾಘನೀಯ ಎಂದರು. ಎಂ ಜಿ ವಿ ಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರಕಾಶ ನರಗುಂದ ಅವರು ಮಾತನಾಡಿ, ಹಿಂದೂ ಧರ್ಮದಲ್ಲಿ ಶನೇಶ್ವರ ದೇವರು ಎಂದರೆ ಸ್ವಲ್ಪ ಭಯ ಜಾಸ್ತಿ. ಸಾಮಾನ್ಯವಾಗಿ ಶನೇಶ್ವರರನ್ನು ಮನೆಯಲ್ಲಿರಿಸಿಕೊಂಡು ಪೂಜಿಸೋದು ವಿರಳ. ಹಾಗಾಗಿ ಈ ಭಾಗದ ಜನತೆಯ ದರ್ಶನಕ್ಕೆ ಈ ದೇವಾಲಯ ಅತೀ ಅವಶ್ಯವಿತ್ತು. ಸಧ್ಯ ನಿರ್ಮಾಣವಾಗಿರುವ ಈ ದೇವಾಲಯ ಕೇವಲ ಪಟ್ಟಣದಕ್ಕೆ ಮಾತ್ರ ಸೀಮಿತವಾಗಿರದೇ ಸುತ್ತ ಮುತ್ತಲಿನ ನಾಲ್ಕಾರು ತಾಲೂಕುಗಳಿಗೂ ಕೇಂದ್ರಬಿಂದುವಾಗಿದೆ ಎಂದರು.
ಅರ್ಚಕ ನಾಗಪ್ಪ ಮಕ್ತೇದಾರ ಮಾತನಾಡಿ ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಹಾಯಗೈದ ಎಲ್ಲ ದಾನಿಗಳಿಗೆ ಧನ್ಯವಾದಗಳನ್ನು ಅರ್ಿಸುವದಾಗಿ ತಿಳಿಸಿದರು. ಶಿಕ್ಷಕಿ ಗೀತಾಂಜಲಿ ಕೋರಿ, ಚಂದ್ರಶೇಖರ ಪ್ಯಾಟಿಗೌಡರ, ರೂಪಾ ಪತ್ತಾರ, ಪ್ರಾಚಾರ್ಯ ಪ್ರಕಾಶ ರಾಠೋಡ, ಸುನಿತಾ ಕತ್ತಿ, ಮಾತನಾಡಿದರು. 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಚಿನ್ ಕೌಶಿಕ್, ಕಸಾಪ ಮಾಜಿ ಅಧ್ಯಕ್ಷ ಎಂ.ಬಿ.ನಾವದಗಿ, ಪುರಸಭೆ ಸದಸ್ಯ ಹಣಮಂತ ಬೋವಿ, ಗಣ್ಯ ವ್ಯಾಪಾರಿ ಸಂಗನಗೌಡ ಬಿರಾದಾರ ಜಿಟಿಸಿ,ಕಾಂಗ್ರೇಸ್ ಮುಖಂಡರು ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ಮುಖಂಡ ರಾಮಣ್ಣ ಪೂಜಾರಿ, ನಿವೃತ್ತ ಉಪನ್ಯಾಸಕ ಎಸ್.ಎಸ್.ಹೂಗಾರ, ರೂಪಾ ದೇಸಾಯಿ, ದಾನಮ್ಮ ಶಿವಶಿಂಪಿ, ಸ್ಮಿತಾ ಶಿವಶಿಂಪಿ, ರೇಖಾ ಅಂಗಡಿ, ಮಧುರಾ ಮಕ್ತೇದಾರ ಸೇರಿದಂತೆ ಸಾವಿರಾರು ಭಕ್ತರು ದರ್ಶನ ಪಡೆದರು.
ಬಾಕ್ಸ್:ಪ್ರತಿ ಹದಿಮೂರು ವರ್ಷಗಳಿಗೊಮ್ಮೆ ಮಾತ್ರ ಒದಗಿಬರುವ ಅತ್ಯಂತ ಅಪರೂಪದ ಶನಿವಾರ, ಅಮಾವಾಸ್ಯೆ ಮತ್ತು ಶನಿದೇವರ ಜಯಂತಿ’ ಒಟ್ಟಿಗೆ ಬಂದ ಪವಿತ್ರ ದಿನವಾದ ಹಿನ್ನೆಲೆ, ದೇವಸ್ಥಾನಕ್ಕೆ ಸಾವಿರಾರು ಭಕ್ತರು ಹರಿದುಬಂದು ಶನಿ ಮಹಾರಾಜರ ದರ್ಶನ ಪಡೆದರು. ವೈಭವದ ಕಳಶ ಮೆರವಣಿಗೆ, ವಿಶೇಷ ಎಳ್ಳೆಣ್ಣೆ ಅಭಿಷೇಕ, ಹೋಮ-ಹವನಗಳು ಭಕ್ತರ ಕಣ್ಣು ತುಂಬಿದೆವು. ಖಾಸ್ಗತೇಶ್ವರ ಮಠ, ಸಾಧನಾ ಮಹಿಳಾ ಒಕ್ಕೂಟ, ಅಕ್ಕನ ಬಳಗ ಮತ್ತು ಶ್ರೀ ಸಾಯಿ ಸಮಿತಿ ಟ್ರಸ್ಟ್ನವರಿಂದ ನಡೆದ ಸುಮಧುರ ಭಜನಾ ಸೇವೆ ಧಾರ್ಮಿಕ ಕಳೆಯನ್ನು ಹೆಚ್ಚಿಸಿತು. ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಣೆ ಯಶಸ್ವಿಯಾಗಿ ನೆರವೇರಿದವು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 