ಧಾರವಾಡ 22: ಮಾನವ ಉಗಮದೊಂದಿಗೆ ಜನ್ಮ ತಾಳಿದ ಜಾನಪದ ಸಾಹಿತ್ಯವು ಜಗತ್ತಿನ ಇತಿಹಾಸದಲ್ಲಿ ಶ್ರೀಮಂತವಾದ ಇತಿಹಾಸ ನಿರ್ಮಾಣಕ್ಕೆ ಕಾರಣವಾಗಿದೆ ಅದೇ ರೀತಿ ಅದರ ಅಧ್ಯಾಯನ ಪ್ರಾರ್ಥಮಿಕ ಶಾಲೆಯಿಂದ ಉನ್ನತ ಶಿಕ್ಷಣದವರೆಗೆ ಅಳವಡಿಸಿ ಮಕ್ಕಳಿಗೆ ಯುವಕರಿಗೆ ಓದಿಸುವಂತಾಗಬೇಕು ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕನ್ನಡ ಸಂಶೋಧನಾ ಸಂಸ್ಥೆಯ, ಪ್ರಾಚ್ಯ ವಸ್ತು ಸಂಗ್ರಾಲಯದ ಮುಖ್ಯಸ್ತರಾದ ಡಾ. ಎಸ್.ಕೆ ಮೇಲಕಾರ ಅವರು ಉದ್ಘಾಟಿಸಿ ಮಾತನಾಡಿದರು.
ನಗರದ ಹೆಡ್ ಪೋಸ್ಟ ಹತ್ತಿರ ಎ.ಡಿ ದೇಶಪಾಂಡಿ ಸಂಗೀತ ಭವನದಲ್ಲಿ ನಾದ ಝೇಂಕಾರ ಸಾಂಸ್ಕೃತಿಕ ಸಂಘ ಹಾಗೂ ಸ್ಟೇಟ ಬ್ಯಾಂಕ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರ ಧಾರವಾಡ ಇವರ ಆಶ್ರಯದಲ್ಲಿ ವಿಶ್ವ ಸಂಗೀತ ದಿನಾಚರಣೆ ಹಾಗೂ ಯೋಗ ದಿನಾಚರಣೆ ಅಂಗವಾಗಿ ಜಾನಪದ ಸಂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇವತ್ತಿನ ವೈಜ್ಞಾನಿಕ ಯುಗದಲ್ಲಿ ಮನುಷ್ಯನಿಗೆ ಶಾಂತಿ ನೆಮ್ಮದಿಯ ಜೀವನ ಸಾಗಿಸಲು ಯೋಗ ಮತ್ತು ಜಾನಪದ ಸಂಗೀತದಿಂದ ಸಹಕಾರಿಯಾಗಿದೆ ಅದರಿಂದಾಗಿಯೇ ನಮ್ಮ ದೇಶ ಜಗತ್ತಿನ ಇತಿಹಾಸದಲ್ಲಿ ಮಹತ್ವದ ಸ್ಥಾನ ಹೊಂದಿದೆ ಎಂದು ನಾದ ಝೇಂಕಾರ ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಯಮನಪ್ಪ ಜಾಲಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಾನಪದ ಜನರಿಂದ ಜನರಿಗೆ ಇಂದಿನ ನಾಗತಿಕತೆಗೆ ಜಾನಪದ ಕಾರಣವಾಗಿದೆ ಹಾಗೆಯೇ ಸಂಗೀತವು ವಿಜ್ಞಾನ ತಂತ್ರಜ್ಞಾನಕ್ಕೂ ಹೊರತಾಗಿಲ್ಲ. ಅದನ್ನು ಮೀರಿಸುವ ಜೀವಾಳ ಜಾನಪದ ಕ್ಷೇತ್ರದಲ್ಲಿ ವ್ಯಾಪ್ತಿಸಿದೆ ಎಂದು ಸ್ಟೇಟ ಬ್ಯಾಂಕ ಆಫ್ ಇಂಡಿಯಾ ಗ್ರಾಹಕರ ಸೇವಾ ಕೇಂದ್ರದ ಮೈಲಾರಪ್ಪ ಹಡಪದ ಹೇಳಿದರು.
ಅನೀತಾ ಆರ್. ಜಾನಪದ ಗಾಯನದಲ್ಲಿ ಕೇಳುಗರನ್ನು ರಂಜಿಸಿದರು. ನೆಹರು ಯುವ ಕೇಂದ್ರ ಹಾಗೂ ಕ್ರೀಡಾ ಇಲಾಖೆ ಸಂಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವದರಿಂದ ಅನೀತಾ ಆರ್ ಅವರಿಗೆ "ನವಚೇತನ ಪ್ರಶಸ್ತಿ" ನೀಡಿ ಗೌರವಿಸಲಾಯಿತು. ರಮೇಶ ಕುಂಬಾರ, ರವಿ ಪಟಾತ, ಸೃಜನಾ, ಚಂದ್ರಮ್ಮಾ ಆರ್, ಉಪಸ್ಥಿತರಿದ್ದರು.