ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಮುಂದೆ ನೈರ್ಮಲ್ಯ ಕಾಪಾಡಲು ಸಮಿತಿ ಮನವಿ

ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಮುಂದೆ ನೈರ್ಮಲ್ಯ ಕಾಪಾಡಲು ಸಮಿತಿ ಮನವಿ The committee requested to maintain hygiene in front of the historic Malayan temple

ಲೋಕದರ್ಶನ ವರದಿ 

ದೇವರಹಿಪ್ಪರಗಿ 04 :  ಪಟ್ಟಣದ ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಮುಂದೆ ಸ.ನಂ 864/2ರ ಜಾಗೆಯಲ್ಲಿನ ಶೌಚಾಲಯದ ನೀರು ಬರುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಲು ಆಗ್ರಹಿಸಿ ದೇವಸ್ಥಾನ ಸಮಿತಿಯ ಸರ್ವ ಸದಸ್ಯರು ಹಾಗೂ ಪಟ್ಟಣದ ಪ್ರಮುಖರು ತಹಶೀಲ್ದಾರ್ ನಿಂಗಣ್ಣ ಬಿರಾದಾರ ಹಾಗೂ ಪ.ಪಂ ಮುಖ್ಯಾಧಿಕಾರಿ ಅಫ್ರೋಜ್ ಅಹ್ಮದ್ ಪಟೇಲರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ. ಪಟ್ಟಣದ ತಹಶೀಲ್ದಾರ್ ಕಚೇರಿಗೆ ಹಾಗೂ ಪಂಚಾಯಿತಿ ಕಾರ್ಯಾಲಯಕ್ಕೆ ಬುಧವಾರ ಆಗಮಿಸಿ ರಾವುತರಾಯ-ಮಲ್ಲಯ್ಯ ದೇವಸ್ಥಾನ ಸಮಿತಿಯ ಸರ್ವ ಸದಸ್ಯರು ಹಾಗೂ ಪಟ್ಟಣದ ಪ್ರಮುಖರು ದೇವಸ್ಥಾನದ ಪಕ್ಕ ದೇವಸ್ಥಾನದ ಪಕ್ಕ ಲಾಡ್ಜ್‌ ನಲ್ಲಿ ಅನೈತಿಕ ಚಟುವಟಿಕೆಗಳು ಹಾಗೂ ಮಧ್ಯದ ಅಂಗಡಿ ಪ್ಲಾಸ್ಟಿಕ್ ಬಾಟಲಿ ಹಾಗೂ ಶೌಚಾಲಯದ ಮಲಿನ ನೀರು ದೇವಸ್ಥಾನದ ಮುಂದೆ ಹರಿಯುವ ಕುರಿತು ಭಕ್ತರು ಸಮಿತಿಯ ಗಮನಕ್ಕೆ ತಂದಿರುವ ಕಾರಣ ಅಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾದ ವಿನೋದಗೌಡ ಪಾಟೀಲ ಉಪಾಧ್ಯಕ್ಷರಾದ ಶ್ರೀಧರ ನಾಡಗೌಡ ಈ ಕುರಿತು ಕ್ರಮ ಕೈಗೊಳ್ಳಬೇಕು ಆದ ಕಾರಣ ನಮ್ಮ ಸಮಿತಿಯ ಎಲ್ಲ ಸದಸ್ಯರು ಹಾಗೂ ದೇವಸ್ಥಾನದ ಸಕಲ ಸದ್ಭಕ್ತರು ಮನವಿ ಮೇರೆಗೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷರಾದ ವಿನೋದಗೌಡ ಪಾಟೀಲ,ಉಪಾಧ್ಯಕ್ಷ ಶ್ರೀಧರ ನಾಡಗೌಡ, ಮುಖಂಡರುಗಳಾದ ಯಮನಪ್ಪ ಸಣ್ಣಕ್ಕಿ, ಬಾಬು ಸೌದಿ, ಪ್ರಕಾಶ ಮಲ್ಲಾರಿ, ರಾಜು ಮೆಟಗಾರ, ಆನಂದ ವಗ್ಗರ ಸೇರಿದಂತೆ ಹಲವಾರು ಜನ ಮುಖಂಡರು ಇದ್ದರು.