ಧಾರವಾಡ, 22 : ಶನಿವಾರ ಅಪರಾಹ್ನ 12 ಗಂಟೆಯಾಗುತ್ತಿದ್ದಂತೆ ಆಕಾಶದ ಅಂಗಳದಲ್ಲಿ ಸೂರ್ಯನ ಸುತ್ತ ವೃತ್ತಾಕಾರದ ಚಿತ್ತಾರ ಮೂಡುವ ಮೂಲಕ ಸುಮಾರು 30 ನಿಮಿಷಗಳ ಕಾಲದ ಈ ವಿಸ್ಮಯ ಎಲ್ಲರ ಗಮನಸೆಳೆಯಿತು. ಚಂದ್ರಲೋಕದ ನೆಲದ ಮೇಲೆ ಅಡ್ಡಾಡಿ, ಮಂಗಳನ ಅಂಗಳವನ್ನು ಪ್ರವೇಶಿಸಿ ಬಾಹ್ಯಾಕಾಶದ ವಿಭಿನ್ನ ಹೊಸತು ಆವಿಷ್ಕಾರಗಳಿಗೆ ತೆರೆದುಕೊಂಡಿರುವ ಇಸ್ರೋ ಈ ವಿಸ್ಮಯದ ಬಗೆಗೂ ಹುಬ್ಬೇರಿಸಿ ನೋಡಿರಲೂಬಹುದು.
ಇಲ್ಲಿಯ ಕಾಮನಕಟ್ಟಿ ಬಳಿ ಚರಂತಿಮಠ ಗಾರ್ಡನ್ ಬಡಾವಣೆಯಲ್ಲಿರುವ ಲೀಲಾವತಿ ಚರಂತಿಮಠ ಪಬ್ಲಿಕ್ ಶಾಲೆಯ ಮಕ್ಕಳು ಹಾಗೂ ಅಧ್ಯಾಪಕರು ಮುಂಜಾನೆಯ ತಮ್ಮ ಶಾಲಾ ಅವಧಿಯ ಕಲಿಕಾ ಚಟುವಟಿಕೆಗಳನ್ನು ಪೂರೈಸಿ ಮನೆಯ ಕಡೆಗೆ ಮುಖ ಮಾಡಿದ್ದವರು ನಭದ ಕಡೆಗೆ ತಮ್ಮ ಚಿತ್ತ ಕೇಂದ್ರೀಕರಿಸಿದ್ದರು. ಅಖಂಡ ವಿಶ್ವಕ್ಕೇ ಬೆಳಕು ಮತ್ತು ಶಾಖವನ್ನು ನೀಡುವ ಆದಿತ್ಯನ ಸುತ್ತ ಈ ವಿಸ್ಮಯ ಉಂಟಾದದ್ದು ಎಲ್ಲರಲ್ಲಿ ಕುತೂಹಲ ಮೂಡಿಸಿತ್ತು.
ಅಪರಾಹ್ನ 12.30ರ ಹೊತ್ತಿಗೆ ಮತ್ತೆ ಸೂರ್ಯ ಮೋಡಗಳ ನಡುವೆ ಮರೆಯಾಗುತ್ತಿದ್ದಂತೆ ಈ ವೃತ್ತಾಕಾರದ ಚಿತ್ತಾರದ ವಿಸ್ಮಯದ ಕುತೂಹಲಕ್ಕೆ ವೈಜ್ಞಾನಿಕ ವಿಶ್ಲೇಷಣೆಗಳು ಆರಂಭಗೊಂಡವು. ರಾತ್ರಿ ನೀಲಾಕಾಶದಲ್ಲಿ ಹೊಳೆಯುವ ನಕ್ಷತ್ರ ಪುಂಜಗಳ ಬಗೆಗೆ ಚಂದ್ರನ ಮೂಲಕ ಪ್ರತಿಫಲಿಸುವ ಬಿಸಿಲು ಬೆಳದಿಂಗಳಾಗುವ ಬಾಹ್ಯಾಕಾಶದ ಅನೇಕ ವಿಸ್ಮಯಗಳ ಕುರಿತು ನಿರಂತರ ಸಂಶೋಧನಾತ್ಮಕ ಅಧ್ಯಯನ, ವೀಕ್ಷಣೆ ನಡೆದಿರುವುದನ್ನು ಮರೆಯುವಂತಿಲ್ಲ. ಇದೂ ಕೂಡ ಎಲ್ಲರೊಳಗೆ ವೈಜ್ಞಾನಿಕ ಚಿಂತನೆಗೆ ಈಗ ಚಾಲನೆ ಕೊಟ್ಟಿದೆ.
ಈ ಕುರಿತು ಭಾರತ ರತ್ನ ಡಾ.ಸಿ.ಎನ್.ಆರ್. ರಾವ್ ಅವರ ಜೊತೆಗೆ ಕೆಲಸ ಮಾಡಿರುವ ಬಾಹ್ಯಾಕಾಶ ವಿಜ್ಞಾನಿ, ನಗರದ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಎಸ್.ಎಂ. ಶಿವಪ್ರಸಾದ ಅವರು ನೀಡಿದ ಅಭಿಪ್ರಾಯ ಹೀಗಿದೆ..
"ಖಿ ಛಿಚಿಟಟಜಜ ಕಚಿಡಿಣಜಟಛಿ ಅಡಿಛಿಟಜ ಠಡಿ ಖಣಟಿಜಠರ ಖಚಿಟಿಛಠತಿ. ಖಿ ಚಿಟಠ ಣಛಣಜಟಿಜ 22 ಜಜರಡಿಜಜ ಣಠ ಣಜ ಣಟಿ. ಣ ಚಿಟಿ ಠಠಿಣಛಿಚಿಟ ಠಿಜಟಿಠಟಜಟಿಠಟಿ, ತಿಜಡಿಜ ಣಟಿ ಟರಣ ಡಿಜಜಿಡಿಚಿಛಿಣ ಚಿಟಿಜ ಛಿಚಿಣಣಜಡಿ ಣಡಿಠಣರ ಛಿಜ ಛಿಡಿಥಿಣಚಿಟ ಣಚಿಣ ಚಿಛಿಣ ಚಿ ಠಿಡಿಟ. ಂ ಛಿಜ ಛಿಡಿಥಿಣಚಿಟ ಟಿಞ ಣಡಿಠಣರ ಣಜ ಚಿಡಿ ಣಜಥಿ ಛಜಛಿಠಟಜ ತಜಡಿಣಛಿಚಿಟಟಥಿ ಚಿಟರಟಿಜಜ ಚಿಟಿಜ ಣಣ ಡಿಜಜಿಡಿಚಿಛಿಣಟಿರ ಣಜ ಣಟಿಟರಣ ಠಡಿದಜಟಿಣಟಥಿ ಚಿಣ 22 ಜಜರಡಿಜಜ." (ಇದನ್ನು 'ಪಾಹೆರ ಲಿಕ್ ಸರ್ಕಲ್ ಅಥವಾ 'ಸನ್ಡಾಗ್ ರೇನ್ಬೋ' ಎಂದು ಕರೆಯಲಾಗುತ್ತದೆ. ಈ ಪ್ರಭಾವಲಯವು ಸೂರ್ಯನಿಂದ 22 ಡಿಗ್ರಿಗಳಷ್ಟು ವಿಸ್ತರಿಸುತ್ತದೆ. ಇದು ಬೆಳಕಿಗೆ ಸಂಬಂಧಿಸಿದ ಒಂದು ಪ್ರಕ್ರಿಯೆಯಾಗಿದ್ದು, ಅಲ್ಲಿ ಸೂರ್ಯನ ಕಿರಣಗಳು ಮೋಡದಲ್ಲಿನ ಮಂಜುಗಡ್ಡೆಗಳ ಮೂಲಕ ಹಾಯುವಾಗ ಮಂಜುಗಡ್ಡೆಗಳು ಪ್ರಿಸಮ್(ಠಿಡಿಟ)ನ ಹಾಗೆ ವರ್ತಿಸಿ ಕಿರಣಗಳ ವಕ್ರೀಭವನ ಉಂಟಾಗುತ್ತದೆ. ಇದರ ನಿಮಿತ್ತ ಸೂರ್ಯನ ಸುತ್ತಲೂ ಏಳು ಬಣ್ಣಗಳ ವೃತ್ತಾಕಾರದ ಕಾಮನಬಿಲ್ಲು ಕಾಣಲು ಸಿಗುತ್ತದೆ.)