ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಕುಮಾರೇಶ್ವರರು ಈ ನಾಡು ಕಂಡ ಅಪರೂಪದ ಶಿವಯೋಗಿಗಳು: ವೀಣಾ ಪಾಟೀಲ
The causal Yuga Purusha, not L.Hanagalla Kumareshwara, is a rare Shiva Yogi this country has seen: V
ಲೋಕದರ್ಶನ ವರದಿ
ಅಡವೀಂದ್ರಸ್ವಾಮಿಮಠದ ಶಿವಾನುಭವದಲ್ಲಿ ಹಾನಗಲ್ಲ ಕುಮಾರಶಿವಯೋಗಿಗಳ ಪುಣ್ಯಸ್ಮರಣೋತ್ಸವ
ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಕುಮಾರೇಶ್ವರರು ಈ ನಾಡು ಕಂಡ ಅಪರೂಪದ ಶಿವಯೋಗಿಗಳು: ವೀಣಾ ಪಾಟೀಲ
ಗದಗ 05 : ಈ ದೇಶದಲ್ಲಿಯೇ ಅಪರೂಪವೆನ್ನಬಹುದಾದ ಶಿವಯೋಗ ಮಂದಿರವನ್ನು ಸ್ಥಾಪಿಸಿ ಅದನ್ನು ತುಂಬಾ ಕಷ್ಟಪಟ್ಟು ಅಭಿವೃದ್ಧಿಪಡಿಸಿ ಜೊತೆಗೆ, ಹರಿದು ಹಂಚಿ ಹೋಗಿದ್ದ ಸಮಾಜವನ್ನು ಒಂದುಗೂಡಿಸಲು ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಕಾರಣಿಕ ಯುಗಪುರುಷ ಲಿಂ.ಹಾನಗಲ್ಲ ಕುಮಾರೇಶ್ವರ ಸ್ವಾಮಿಗಳು ಈ ನಾಡು ಕಂಡ ಅಪರೂಪದ ಶಿವಯೋಗಿಗಳಾಗಿದ್ದಾರೆ ಎಂದು ಮುಂಡರಗಿಯ ಹೆಸರಾಂತ ಲೇಖಕಿ, ಚಿಂತಕಿ ಚೈತನ್ಯ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀಣಾ ಹೇಮಂತಗೌಡ ಪಾಟೀಲ ಅವರು ಹೇಳಿದರು.
ಗದಗ ಮುಳುಗುಂದ ನಾಕಾ ಬಳಿಯ ಅನ್ನಪೂರ್ಣೇಶ್ವರಿ ಮಂದಿರ ಅಡವಿಂದ್ರಸ್ವಾಮಿ ಮಠದ 344ನೇ ಮಾಸಿಕ ಶಿವಾನುಭವ ಹಾಗೂ ಲಿಂಗೈಕ್ಯ ಹಾನಗಲ್ ಕುಮಾರಶಿವಯೋಗಿಗಳ ಪುಣ್ಯ ಸ್ಮರಣೋತ್ಸವ ಸಮಾರಂಭದಲ್ಲಿ ಅವರು ಕಾರ್ಮಿಕ ಯುಗಪುರುಷ ಪೂಜ್ಯ ಹಾನಗಲ್ ಶ್ರೀಕುಮಾರೇಶ್ವರರು ಎಂಬ ವಿಷಯ ಕುರಿತು ಮಾತನಾಡಿದರು.
ಲಿಂ.ಹಾನಗಲ್ಲ ಕುಮಾರಶಿವಯೋಗಿಗಳವರು ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಅಪೂರ್ವವಾದ ಸೇವೆ ಸಲ್ಲಿಸಿದಂತೆಯೇ, ಬಾಗಲಕೋಟೆಯಲ್ಲಿ ಜಿನ್ನಿಂಗ್ ಮಿಲ್ ಸ್ಥಾಪಿಸುವ ಮೂಲಕ ಉದ್ಯೋಗಿಕ ಕ್ಷೇತ್ರದಲ್ಲೂ ಪ್ರಗತಿ ಸಾಧಿಸಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಿವಾನುಭವ ಸಮಿತಿ ಅಧ್ಯಕ್ಷರಾದ ಡಾ.ರಾಜೇಂದ್ರ ಎಸ್. ಗಡಾದ ಮಾತನಾಡಿ, ಲಿಂ.ಪೂಜ್ಯ ಹಾನಗಲ್ಲ ಕುಮಾರೇಶ್ವರ ಶಿವಯೋಗಿಗಳು ತಮ್ಮ 37ನೇ ವಯಸ್ಸಿನಲ್ಲಿ ಸಾಮಾಜಿಕ ಸಾರ್ವಜನಿಕ ಸೇವೆಗೆ ಪಾದಾರೆ್ಣ ಮಾಡಿ ತಮ್ಮ 63ನೇ ವಯಸ್ಸಿನಲ್ಲಿಯೇ ಲಿಂಗೈಕ್ಯರಾದರೂ ಕೂಡ ನೂರಾರು ವರ್ಷಗಳ ಕಾಲ ಮಾಡಬಹುದಾದಷ್ಟು ಕಾರ್ಯಗಳನ್ನು, ಅಲ್ಪಾವಧಿಯಲ್ಲಿ ಈ ನಾಡಿನಲ್ಲಿ ಮಾಡಿದ್ದು ಒಂದು ದಾಖಲೆಯೇ ಸರಿ. ಪ್ರಾತಃಸ್ಮರಣೀಯರಾದ ಅವರನ್ನು ಈ ನಾಡಿನ ಲಿಂಗಾಯತ ವೀರಶೈವ ಮಠಗಳು, ಮಠಾಧೀಶರು ಮತ್ತು ಸಮಾಜ ವರ್ಗದವರು ನಿತ್ಯ ಸ್ಮರಿಸಿದರೂ ಸಾಲದು ಎಂದು ಹೇಳಿದರು.
ಸಮಾರಂಭದ ಸಮ್ಮುಖ ವಹಿಸಿದ್ದ ಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ವೇದಮೂರ್ತಿ ಮಹೇಶ್ವರ ಸ್ವಾಮಿಗಳು ಮಾತನಾಡಿ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಓದ್ಯೋಗಿಕ ಕ್ಷೇತ್ರದಲ್ಲಿ ಹಾನಗಲ್ಲ ಕುಮಾರ ಶಿವಯೋಗಿಗಳವರ ಕೊಡುಗೆ ತುಂಬಾ ಅಪರೂಪವಾಗಿದ್ದು, ಇಂದಿನ ಎಲ್ಲ ಮಠಾಧೀಶರಿಗೆ ಅವರ ಸೇವಾ ಕಾರ್ಯಗಳು ಮಾದರಿಯಾಗಿವೆ ಎಂದರು.
ಕಾರ್ಯಕ್ರಮದ ಪೂರ್ವದಲ್ಲಿ ಹಾನಗಲ್ಲ ಕುಮಾರಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರ ಸ್ಮರಣೆಯ ಗೀತೆಯೊಂದಿಗೆ ಪುಷ್ಪ ನಮನ ಸಲ್ಲಿಸಲಾಯಿತು.
ಮಂಗಲಾ ಯಾನಮಶೆಟ್ಟಿ ಪ್ರಾರ್ಥನೆ ಗೀತೆ ಪ್ರಸ್ತುತಪಡಿಸಿದರು. ಶಿವಾನುಭವ ಸಮಿತಿಯ ಮಾಜಿ ಅಧ್ಯಕ್ಷರಾದ ಜಿ.ಎಂ. ಯಾನಮಶೆಟ್ಟಿ ಅವರು ಸ್ವಾಗತಿಸಿ, ಪರಿಚಯಿಸಿದರು. ಕಲಾ ಉಪನ್ಯಾಸಕರಾದ ಪ್ರಕಾಶ ಬಂಡಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಸಿದ್ದಣ್ಣ ಜವಳಿ ವಂದಿಸಿದರು.
ಇದೇ ಸಂದರ್ಭದಲ್ಲಿ ಹುಟ್ಟುಹಬ್ಬದ ನಿಮಿತ್ತ ಬಸವರಾಜ ಪಲ್ಲೆದ ಹಾಗೂ ಮಾರುತಿ ಅವರನ್ನು ಮತ್ತು ಪ್ರಸಾದ ಸೇವೆಯನ್ನು ವಹಿಸಿಕೊಂಡ ರಿಯಲ್ ಎಸ್ಟೇಟ್ ಉದ್ಯಮಿದಾರರಾದ ನಿವಾಸ್ ಶಂಕರಸಾ ಪವಾರ ದಂಪತಿಗಳನ್ನು ಮಠದಿಂದ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರೊ.ಕೆ.ಎಚ್. ಬೇಲೂರು, ಬಿ.ಎಂ. ಬೆಳೆಯಲಿ, ನಿಂಗಪ್ಪ ಬಳಿಗಾರ, ಎಲ್.ಎಸ್. ನಿಲಗುಂದ, ಗುರ್ಪ ನಿಡಗುಂದಿ, ಗೀತಾ ಹೂಗಾರ, ಡಾ.ಎಸ್.ಕೆ. ನಾಲವತ್ತವಾಡಮಠ, ಪ್ರಮೀಳಾದೇವಿ ಬಳೆಗಾರ, ಬಿ.ವಿ. ಸಂಕನೂರ, ವೀರೇಶ್ವರಸ್ವಾಮಿ ಹೊಸಳ್ಳಿಮಠ ಸೇರಿದಂತೆ ಅನೇಕ ಗಣ್ಯರು, ಸದ್ಭಕ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 