ಬಡವರ ಪಡಿತರ ಚೀಟಿ ರದ್ದುಪಡಿಸುತ್ತಿರುವುದು ಖಂಡನೀಯ

ಬಡವರ ಪಡಿತರ ಚೀಟಿ ರದ್ದುಪಡಿಸುತ್ತಿರುವುದು ಖಂಡನೀಯ The cancellation of ration cards for the poor is condemnable

                       ವಿಜಯಪುರ 29: ರಾಜ್ಯ ಸರ್ಕಾರ ಇತ್ತೀಚೆಗೆ ಬಡವರ ಪಡಿತರ ಚೀಟಿಗಳನ್ನು ರದ್ದುಪಡಿಸಲು ಆರಂಭಿಸಿರುವುದು ಸರ್ಕಾರದ ಸಂಪೂರ್ಣ ವಿಫಲತೆಯ ಜೀವಂತ ಸಾಕ್ಷಿ. ಈಗಾಗಲೇ ಬೊಕ್ಕಸ ಖಾಲಿಯಾಗಿರುವ ಪರಿಸ್ಥಿತಿಯಲ್ಲಿ, ಸುಳ್ಳು ಪಂಚ ಗ್ಯಾರಂಟಿಗಳ ಮೂಲಕ ರಾಜ್ಯವನ್ನು ದಿವಾಳಿ ಮಾಡಿದ ನಂತರ ಈ ಸರ್ಕಾರ ಈಗ ಬಡವರ ಹೊಟ್ಟೆಗೆ ಕೈ ಹಾಕುವ ಮಟ್ಟಕ್ಕೆ ಇಳಿದುಬಂದಿದೆ. ಇದು ಅತ್ಯಂತ ಖಂಡನೀಯ ಮತ್ತು ಸಂವೇದನಾಶೀಲತೆಯ ಕೊರತೆಯ ಆಡಳಿತ. ಪಡಿತರ ಚೀಟಿ ಬಡ ಕುಟುಂಬಗಳಿಗೆ ಕೇವಲ ಒಂದು ದಾಖಲೆ ಅಲ್ಲ, ಅದು ಜೀವನ, ಅನ್ನ, ಬಾಳಿನ ಭರವಸೆ. ಇದನ್ನು ರದ್ದುಪಡಿಸುವ ಮೂಲಕ ಸರ್ಕಾರ ಬಡತನವನ್ನು ಮತ್ತಷ್ಟು ತೀವ್ರಗೊಳಿಸಲು ಕಾರಣವಾಗುತ್ತಿದೆ. ಸರಕಾರ ನಿಭಾಯಿಸಲು ಆಗದೆ ಹೋದರೆ ರಾಜೀನಾಮೆ ಕೊಡಲಿ, ಮನೆಗೆ ಹೋಗಲಿ. ಬಡವರ ಜೀವನದೊಂದಿಗೆ ಆಟ ಆಡುವ ಹಕ್ಕು ಯಾರಿಗೂ ಇಲ್ಲ.

                     ಇನ್ನೂ ದುಃಖಕರ ಸಂಗತಿ ಎಂದರೆ ಶ್ರೀಮಂತರ ಕಾರ್ಡುಗಳನ್ನು ಅಚ್ಚುಕಟ್ಟಾಗಿ ಇಟ್ಟು, ಬಹುತೇಕ ಬಡವರ ಕಾರ್ಡುಗಳನ್ನು ಮಾತ್ರ ರದ್ದುಪಡಿಸುತ್ತಿರುವುದು ಸರ್ಕಾರದ ದ್ವಂದ್ವ ನಿಲುವಿನ ಹಾಗೂ ಅಸಮಾನತೆಯ ನೀತಿಯ ಸ್ಪಷ್ಟ ನಿದರ್ಶನ.ಬಡಜನರ ಮೇಲಿನ ಈ ರೀತಿಯ ಅನ್ಯಾಯವನ್ನು ಬಿಜೆಪಿ ಹಾಗೂ ನಾನು ವ್ಯಕ್ತಿಯಾಗಿ ತೀವ್ರವಾಗಿ ಖಂಡಿಸುತ್ತೇವೆ. ಇಷ್ಟು ದಿನ ಅತಿವೃಷ್ಟಿ ಬರಗಾಲ, ಉದ್ಯೋಗ ಕೊರತೆ, ಕೃಷಿ ಸಂಕಷ್ಟ ಚಿಟಟ ಡಿಜಚಿಜಥಿ ಣಡಿಣಟಿರ ಣಜ ಠಿಠರಡಿ;ಇದರ ಮೇಲೆ ಪಡಿತರ ರದ್ದು ಎಂಬ ನಿರ್ಧಾರ ಬಡವರ ಜೀವನದ ಮೇಲೆ ನೇರ ದಾಳಿ. ಈ ಕ್ರಮವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು ಎಂದು ವಿಜಯಪುರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಬಸವರಾಜ್ ಹೂಗಾರ್ ಆಗ್ರಹಿಸಿದ್ದಾರೆ.ಬಡಜನರ ಹಕ್ಕಿಗಾಗಿ ನಮ್ಮ ಹೋರಾಟ ನಿರಂತರ. ಬಡವರ ಅನ್ನ ಹಾಗೂ ಅವರ ಹಕ್ಕು ಕಸಿದುಕೊಳ್ಳುವುದನ್ನು ಎಂದಿಗೂ ಸಹಿಸುವುದಿಲ್ಲ ಎಂದು ಅವರು ತಿಳಿಸಿದ್ದಾರೆ.