ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತ್ಯೋತ್ಸವವನ್ನು ವಿನಾಯಕ ಪರಾಪೂರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಣೆ

ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತ್ಯೋತ್ಸವವನ್ನು ವಿನಾಯಕ ಪರಾಪೂರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಣೆ The birth anniversary of the architect of the Constitution, Dr. B. R. Ambedkar, was celebrated grand

ಗದಗ 15 :  ನಗರಸಭೆ ಹತ್ತಿರದಲ್ಲಿರುವ ಪರಾಪೂರ ಕಛೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಜಯಂತ್ಯೋತ್ಸವವನ್ನು ವಿನಾಯಕ ಪರಾಪೂರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು. ಈ ವೇಳೆ ಅಂಬೇಡ್ಕರ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ವಿನಾಯಕ ಪರಾಪೂರ ಅವರು, ಭಾರತದಲ್ಲಿರುವ ಎಲ್ಲರೂ ಸಮಾನತೆಯಿಂದ ಬದುಕಬೇಕು ಎನ್ನುವುದು ಡಾ.ಅಂಬೇಡ್ಕರ್ ಅವರ ಕನಸಾಗಿತ್ತು. ಆ ನಿಟ್ಟಿನಲ್ಲಿ ಜಗತ್ತಿನ ನಾನಾ ದೇಶಗಳಿಗೆ ತೆರಳಿ ಸಮಗ್ರ ಅಧ್ಯಯನ ನಡೆಸಿ ಸಂವಿಧಾನ ರಚಿಸಿದರು. ಆ ಸಂವಿಧಾನದ ಮೂಲಕ ನಾವೆಲ್ಲರೂ ಸಮಾನರಾಗಿ ಬದುಕುತ್ತಿದ್ದೇವೆ ಎಂದರು.     

ಡಾ. ಬಿ.ಆರ್‌. ಅಂಬೇಡ್ಕರ್ ಅವರು ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ, ಅರ್ಥಶಾಸ್ತ್ರಜ್ಞ ಮತ್ತು ನ್ಯಾಯಶಾಸ್ತ್ರಜ್ಞರಾಗಿದ್ದರು. ದಲಿತರ ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಡಿದ ಅವರು, ಅಸ್ಪೃಶ್ಯತಾ ನಿವಾರಣೆ, ಕಾರ್ಮಿಕ ಸುಧಾರಣೆಗಳು ಮತ್ತು ಬೌದ್ಧ ಧರ್ಮದ ಅಳವಡಿಕೆಯ ಮೂಲಕ ಸಮಾಜದಲ್ಲಿ ಮಹತ್ತರ ಬದಲಾವಣೆ ತಂದರು. ಭಾರತದ ಮೊದಲ ಕಾನೂನು ಮಂತ್ರಿಯಾಗಿ ಅವರು ಸಾಮಾಜಿಕ ನ್ಯಾಯಕ್ಕಾಗಿ ಕೆಲಸ ಮಾಡಿದವರು ಎಂದು ತಿಳಿಸಿದರು.

ಭಾರತದ ಸಂವಿಧಾನ ರಚನಾ ಸಮಿತಿಯ ಅಧ್ಯಕ್ಷರಾಗಿ, ಜಾತಿ, ಧರ್ಮ, ಲಿಂಗದ ತಾರತಮ್ಯವಿಲ್ಲದೆ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆಧಾರದ ಮೇಲೆ ಸಂವಿಧಾನವನ್ನು ರೂಪಿಸಿದರು. ಅಸ್ಪೃಶ್ಯತೆಯ ವಿರುದ್ಧ ಹೋರಾಡಿ, ದಲಿತರು ಮತ್ತು ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ’ಬಹಿಷ್ಕೃತ ಹಿತಕಾರಿಣಿ ಸಭಾ’ ಸ್ಥಾಪಿಸಿದರು ಎಂದರು.           ಈ ವೇಳೆ ಕರ್ನಾಟಕ ವಿವಿಧ ಹಿಂದೂಪರ ಸಂಘಟನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ, ಮಂಜುನಾಥ ಕೊರವರ, ಸುರ್ಜಿತಸಿಂಗ್ ಬ್ಯಾಳಿ, ಅರವಿಂದ ಗಾಗಡೆ, ಬಸವರಾಜ ಹೊಸಮನಿ, ಸಿದ್ದಣ್ಣ ಗೋಶಲ್ಯನವರ, ಮಂಜುನಾಥ ಕೌಜಗೇರಿ, ಬಸಣ್ಣ ಹೊಸಮನಿ, ದ್ಯಾವನೂರ ಸರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

"ಕೋಟ್"ಭಾರತದಲ್ಲಿ ವಿಪರೀತ ಜಾತಿ ವ್ಯವಸ್ಥೆ ಸಮಾಜದಲ್ಲಿ ತಾಂಡವಾಡುತ್ತಿತ್ತು. ಇದರ ವಿರುದ್ದ ಡಾ. ಬಿ. ಆರ್ ಅಂಬೇಡ್ಕರ್ ನಿರಂತರ ಹೋರಾಟ ನಡೆಸಿ,ತೀವ್ರವಾಗಿ ಬೇಸರಗೊಂಡು 1956 ರಲ್ಲಿ ಜಾತಿ ವ್ಯವಸ್ಥೆಯನ್ನು ವಿರೋಧಿಸಿ ತಮ್ಮ ಲಕ್ಷಾಂತರ ಅನುಯಾಯಿಗಳೊಂದಿಗೆ ಬೌದ್ಧ ಧರ್ಮವನ್ನು ಸ್ವೀಕರಿಸಿದರು. ಗುರುಶಾಂತಪ್ಪ ದೊಡ್ಡಮನಿ   ಶಿಕ್ಷಕರು ಹಾಗೂ ಹಿರಿಯ ದಲಿತ ಮುಖಂಡರು"ಕೋಟ್"ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಡಿ"ಎಂಬ ಮಂತ್ರದೊಂದಿಗೆ ದಲಿತರಲ್ಲಿ ಜಾಗೃತಿ ಮೂಡಿಸಿದರು.

ಅವರ ಈ ಮಹತ್ತರ ಸೇವೆಗಾಗಿ ಅವರನ್ನು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ, ’ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಅವರ ಜಯಂತ್ಯೋತ್ಸವ ಕೇವಲ ಒಂದು ದಿನಕ್ಕೆ ಸಿಮಿತವಾಗದೇ ಪ್ರತಿದಿನ ಅವರನ್ನು ಭಾರತೀಯರು ಸ್ಮರಿಸಬೇಕು.ರಾಜು ಖಾನಪ್ಪನವರರಾಜ್ಯ ಕಾರ್ಯದರ್ಶಿಕರ್ನಾಟಕ ವಿವಿಧ ಹಿಂದೂಪರ ಸಂಘಟನೆ