ವಿಕಲಚೇತನರಿಗೆ ಸರಕಾರಿ ಸೌಲಭ್ಯಗಳ ಲಾಭ ಸಿಗಲಿ : ಮಣ್ಣಿಕೇರಿ
ಲೋಕದರ್ಶನ ವರದಿ
ಬೆಳಗಾವಿ 4: ವಿಕಲಚೇತನ ಮಕ್ಕಳಿಗಾಗಿ ಸಕರ್ಾರ ಗೃಹಾಧಾರಿತ ಶಿಕ್ಷಣ, ಸ್ಕೂಲ್ ರೇಡಿನೆಸ್ ಪ್ರೋಗ್ರಾಂ, ದೈನಂದಿನ ಕೌಶಲ್ಯ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ವಿಕಲಚೇತನ ಮಕ್ಕಳಿಗೆ ಇದರ ಲಾಭ ಸಿಗುವಂತೆ ನಾವೆಲ್ಲರೂ ಪ್ರಯತ್ನಿಸಬೇಕು ಎಂದು ಜಿಲ್ಲಾ ಡೈಟ ಪ್ರಾಚಾರ್ಯ ಗಜಾನನ ಮಣ್ಣಿಕೇರಿ ನುಡಿದರು.
ಅವರು ಸೋಮವಾರ ದಿ. 3 ರಂದು ವಿಶ್ವ ವಿಕಲಚೇತನ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ವೇದಿಕೆ ಮೇಲೆ ಉಪಸ್ಥಿತರಿದ್ದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾ. ಸವಣೂರ, ಉದಯ ಹುನಕುಪ್ಪಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಡಿ. ಬಡಿಗೇರ, ಸಮನ್ವಯಾಧಿಕಾರಿ ರಾಜಶೇಖರ ಚಳಗೇರಿ ದೀಪ ಪ್ರಜ್ವಲಿಸಿದರು.
ವಿಶ್ವ ವಿಕಲಚೇತನ ದಿನಾಚರಣೆ ನಿಮಿತ್ತ ವಿಶ್ವೇಶ್ವರಯ್ಯ ನಗರದ ಸರಕಾರಿ ಕನ್ನಡ ಶಾಲೆಯ ಮೈದಾನದಲ್ಲಿ ವಿಕಲಚೇತನ ಮಕ್ಕಳು ಹಾಗೂ ಪಾಲಕರಿಗಾಗಿ ಕ್ರೀಡಾ ಸ್ಪಧರ್ೆಗಳನ್ನು ಏರ್ಪಡಿಸಲಾಗಿತ್ತು.
ಲಿಂಬೂ ಚಮಚ, ಮಡಿಕೆ ಒಡೆಯುವುದು, ಓಟ, ಕಪ್ಪೆ ಜಿಗಿತ ಮುಂತಾದ ಸ್ಪಧರ್ೆಗಳಲ್ಲಿ ನಗರದ ವಿವಿಧ ಶಾಲೆಗಳ 100ಕ್ಕೂ ಹೆಚ್ಚು ವಿದ್ಯಾಥರ್ಿಗಳು ಹಾಗೂ ಪಾಲಕರು ಪಾಲ್ಗೊಂಡಿದ್ದರು.
ಬಿಆರ್ ಟಿ, ಸಿಆರ್ ಪಿ, ಐಇಆಟರ್ಿಗಳಾದ ಅಶೋಕ ಅಯಾಚಿತ, ಎಸ್. ಬಿ. ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 