ಸಣ್ಣ ಸಮಾಜ ಮುಖ್ಯವಾಹಿನಿಗೆ ತರುವ ಉದ್ದೇಶ : ಯಾಸೀರಖಾನ ಪಠಾಣ
ಶಿಗ್ಗಾವಿ 23 : ಸಣ್ಣ ಸಣ್ಣ ಸಮಾಜವನ್ನು ನಿರ್ಲಕ್ಷಿಸಿಸದೇ ಅವುಗಳನ್ನು ಮುಖ್ಯವಾಹಿನಿಗೆ ತರುವುದೇ ನಮ್ಮ ಸರ್ಕಾರದ ಉದ್ದೇಶ ಎಂದು ಶಾಸಕ ಯಾಶೀರಖಾನ ಪಠಾಣ ಹೇಳಿದರು. ಪಟ್ಟಣದಲ್ಲಿ ದೈವಜ್ಞ ಸಮಾಜ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಸಣ್ಣ ಸಮಾಜಗಳ ಸಣ್ಣ ಪುಟ್ಟ ಬೇಡಿಕೆಯನ್ನು ಖಂಡಿತವಾಗಿ ಈಡೇರುಸ್ತೇನೆ ಏಕೆಂದರೆ ಸಣ್ಣ ಸಮಾಜದ ಅರ್ಶಿವಾದ ಈ ಭಾರಿ ಉಪ ಚುನಾವಣೆ ಗೆಲ್ಲಲು ಅನುಕೂಲವಾಯಿತು ಕಾರಣ ದೈವಜ್ಞ ಸಮಾಜದ ಬೇಡಿಕೆಯಾದ ಗಣಪತಿ ದೇವಸ್ಥಾನ, ಸಮುದಾಯ ಭವನ, ಸಮಾಜದ ಬಡ ಮಕ್ಕಳಿಗೆ ಹಾಸ್ಟೆಲ್ ವ್ಯವಸ್ಥೆಯನ್ನು ಬರುವ ದಿನಗಳಲ್ಲಿ ಹಂತ ಹಂತವಾಗಿ ಈಡೇರಿಸುತ್ತೇನೆ ಎಂದು ಭರವಸೆ ನೀಡಿದರು. ಸರಾಫ ಸಂಘದ ಅಧ್ಯಕ್ಷ ಚಂದ್ರಕಾಂತ ಪಾಲನಕರ ಮಾತನಾಡಿ ರಾಜಕೀಯ ಪ್ರತಿನಿಧಿಗಳು ಚುನಾವಣೆ ಬಂದಾಗ ಸಮಾಜಗಳಿಗೆ ಭರವಸೆ ನೀಡುತ್ತಾರೆ ನಂತರ ನಮ್ಮನ್ನು ಕಡೆಗಣಿಸುತ್ತಾರೆ ಎಂದರು. ತಾಲೂಕ ಅಧ್ಯಕ್ಷ ಸುಧಾಕರ ದೈವಜ್ಞ ಮಾತನಾಡಿ ಸಣ್ಣ ಸಣ್ಣ ಸಮಾಜದ ಬೇಡಿಕೆಗಳನ್ನು ಈಡೇರಿಸದೇ ಅದರಲ್ಲಿ ದೈವಜ್ಞ ಸಮಾಜವನ್ನು ಕಡೇಗಣಿಸಿದ್ದಾರೆ ಆದರೆ ಶಾಸಕ ಯಾಶೀರಖಾನ ಪಠಾಣ ಅವರು ಬೇಡಿಕೆ ಈಡೇರಿಸಲು ಸ್ಪಂದಿಸಿದ್ದಾರೆ ಎಂದರು. ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಗೌಸಖಾನ ಮುನಶಿ, ವಿನಾಯಕ ರಾಯ್ಕರ, ಪ್ರಕಾಶ ಪಾಲನಕರ, ಭೂದಾನಿ ಸಂಕೇತ ರಾಯ್ಕರ, ರವಿ ರಾಯ್ಕರ, ಮಂಜುನಾಥ ವೇರ್ಣೇಕರ, ಆನಂದ ವೇರ್ಣೇಕರ, ಭೂಷಣ ರೇವಣಕರ, ಸಂತೋಷ ರಾಯ್ಕರ, ಮುನ್ನಾ ಮಾಲ್ದಾರ, ಸಾಧಿಕ ಸವಣೂರ ಉಪಸ್ಥಿತರಿದ್ದರು.