ಲೋಕದರ್ಶನವರದಿ
ತಾಳಿಕೋಟೆ01: ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಖಾಸಗಿಕರಣಗೊಳಿಸಿರುವದು ರೈತರ ಕತ್ತು ಹಿಚುಕುವಂತಹ ಕಾರ್ಯ ಸಕರ್ಾರವು ಮಾಡುತ್ತಿದೆ ಕೂಡಲೇ ತಿದ್ದುಪಡಿಗೊಳಿಸಿರುವ ಕಾಯ್ದೆಯನ್ನು ಸಕರ್ಾರವು ಹಿಂಪಡೆದುಕೊಳ್ಳಬೇಕೆಂದು ಎಪಿಎಂಸಿ ವರ್ತಕ ಖಾಜಾಹುಸೇನ ಚೌದ್ರಿ ಅವರು ಒತ್ತಾಯಿಸಿದರು.
ಸೋಮವಾರರಂದು ಪಟ್ಟಣದಲ್ಲಿ ಸಕರ್ಾರವು ಎಪಿಎಂಸಿ ಕಾಯ್ದೆ ತಿದ್ದುಪಡಿಗೊಳಿಸಿರುವದನ್ನು ವಿರೋಧಿಸಿ ತಾಳಿಕೋಟೆ ಅಡತ್ ಮರ್ಚಂಟ್ ಅಸೋಶೇಷನ್ ಹಾಗೂ ವರ್ತಕರ ಸಂಘದ ವತಿಯಿಂದ ಎಲ್ಲಾ ವರ್ತಕರು ಎಪಿಎಂಸಿ ಸಂಬಂದಿತ ಎಲ್ಲ ವ್ಯಾಪಾರ ವೈಹಿವಾಟುಗಳನ್ನು ಸ್ಥಗಿತಗೊಳಿಸಿ ನಡೆಸಿದ ಪ್ರತಿಭಟನಾ ಮೆರವಣಿಗೆಯ ನಂತರ ನಡೆದ ಭಹಿರಂಗ ಸಭೆಯಲ್ಲಿ ಮಾತನಾಡುತ್ತಿದ್ದ ಅವರು ಬಹುರಾಷ್ಟ್ರೀಯ ಕಂಪನಿಗಳಿಗೆ ರೈತರ ಮಾಲು ಮಾರುವದರಿಂದ ಕಂಪನಿಯವರು ಉದ್ದಾರ ಆಗುತ್ತಾರೆ ವಿನಃ ರೈತನು ಉದ್ದಾರ ಆಗಲು ಸಾದ್ಯವೇ ಇಲ್ಲಾ ಸದ್ಯ ನಡೆಯುತ್ತಿರುವ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಬೆಳೆದ ಮಾಲಿಗೆ ಉತ್ತಮ ಬೆಲೆ ಸಿಗುವದರೊಂದಿಗೆ ತೃಪ್ತಿಯಿಂದ ಜೀವನ ನಡೆಸುತ್ತಿದ್ದಾರೆ ಈ ಖಾಸಗಿಕರಣದಿಂದ ರೈತರ ಮಾಲಿಗೆ ದುಡ್ಡುಕೊಡದೇ ಕಂಪನಿಯವರು ಕಾಲ್ಕಿತ್ತುವ ಸಂಬವವಿದೆ ಅಲ್ಲದೇ ಈಗಾಗಲೇ ಮಾರುಕಟ್ಟೆಯಿಂದ ಬರುವ ಮಾಲುಗಳನ್ನೇ ನಂಬಿಕೊಂಡಿರುವ ಸಾಕಷ್ಟು ಮಿಲ್ಲಿನವರೂ ಕೂಡಾ ದಿವಾಳಿ ಅಂಚಿಗೆ ಬರಲಿದ್ದಾರೆ ಇದೊಂದು ತಿದ್ದುಪಡಿ ಕಾಯ್ದೆ ರೈತರಿಗೆ ಶೋಷಣೆಗೊಳಿಪಡಿಸಲಿದೆ ಎಂದ ಚೌದ್ರಿ ಅವರು ಸಕರ್ಾರವು ಬಹಳ ವಿಚಾರ ಮಾಡಬೇಕಿದೆ ವರ್ತಕರದು, ಹಮಾಲರದು, ವ್ಯಾಪಾರಸ್ಥರದಲ್ಲಾ ದೇಶದ ಬೆನ್ನೇಲುಬು ರೈತನಿಗೆ ತೊಂದರೆ ಬಂದರೆ ಸಕರ್ಾರಗಳು ಉಳಿಯುವದೇ ಬಹಳ ಕಠೀಣವಾದೀತು ಎಂದು ಏಚ್ಚರಿಸಿದ ಅವರು ಕೂಡಲೇ ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿಗೊಳಿಸಿರುವದನ್ನು ಕೂಡಲೇ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ನಿರತರು ಜಿಲ್ಲಾಧಿಕಾರಿಗಳಿಗೆ ಬರೆದ ಮನವಿ ಪತ್ರವನ್ನು ತಾಲೂಕಾ ತಹಶಿಲ್ದಾರ ಅನೀಲಕುಮಾರ ಢವಳಗಿ ಅವರಿಗೆ ಹಾಗೂ ಹಾಗೂ ಎಪಿಎಂಸಿ ಅಧ್ಯಕ್ಷ ಗುರಣ್ಣ ತಾರನಾಳ ಮತ್ತು ಕಾರ್ಯದಶರ್ಿ ಅವಟಿ ಅವರಿಗೆ ಸಲ್ಲಿಸಿದರು.
ಎಪಿಎಂಸಿ ಕಾಯರ್ಾಲಯದ ಮುಂದೆ ನಡೆದ ಧರಣಿಯಲ್ಲಿ ವರ್ತಕರು, ಹಮಾಲರು, ಎಪಿಎಂಸಿ ತಿದ್ದುಪಡಿ ಕಾಯ್ದೆಯ ಕರಡು ಪ್ರತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಮಯದಲ್ಲಿ ಎಪಿಎಂಸಿ ಅಡತ್ ಮರ್ಚಂಟ್ ಅಸೋಶೇಷನ್ ಅಧ್ಯಕ್ಷ ವ್ಹಿ.ಎ.ಹಜೇರಿ, ಚಿಂತಪ್ಪಗೌಡ ಯಾಳಗಿ, ವಿಶ್ವನಾಥ ಬಿಳೇಭಾವಿ, ಅಶೋಕ ಶೆಟ್ಟಿ, ಎಂ.ಎ.ಮುದ್ನಾಳ, ದತ್ತು ಹೆಬಸೂರ, ಮಹಾದೇವ ಕುಂಭಾರ, ಅಶೋಕ ಜಾಲವಾದಿ, ಬಾಬು ಹಜೇರಿ, ನಾರಾಯಣ ಸುಭೇದಾರ, ವಿಶ್ವನಾಥ ಬಿದರಕುಂದಿ, ಎಸ್.ಸಿ.ಇಜೇರಿ, ನಾಗಪ್ಪಣ್ಣ ಚುನಗುಡಿ, ಎಸ್.ಸಿ.ಪಾಟೀಲ, ಎಸ್.ವ್ಹಿ.ಕತ್ತಿ, ಎಂ.ಎಸ್.ನಾಗರಾಳ, ಜಗದೀಶ ಬಿಳೇಭಾವಿ, ಮಲ್ಲು ಯಾಳವಾರ, ಅಪ್ಪು ಆನೇಸೂರ, ಮುಲ್ಲಾ, ಕಾಜಗಾರ, ಪ್ರಭು ಬಿಳೇಭಾವಿ, ಎಂ.ಎಸ್.ಸರಶೆಟ್ಟಿ, ಮಹಾದೇವಪ್ಪ ಕುಂಭಾರ, ಸುರೇಶ ಪಾಟೀಲ, ಎಂ.ಸಿ.ಕತ್ತಿ, ಎಸ್.ಸಿ.ಇಜೇರಿ, ಮೊದಲಾದವರು ಉಪಸ್ಥಿತರಿದ್ದರು.